ಇನ್ನೇನೂ ಬಿಗ್ ಬಾಸ್ ಆರಂಭಕ್ಕೆ ಕ್ಷಣ ಗಣನೆ ಶುರುವಾಗಿದ್ದು , ಇನ್ನೂ ಯಾವ ಸ್ಪರ್ಧಿ ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನುದರ ಬಗ್ಗೆ ಇನ್ನೂ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆದರೆ ಊಹೆಗಳ ಮೇರೆಗೆ ಒಂದಷ್ಟು ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಆ ಹೆಸರಲ್ಲಿ ಸುಮಂತ್ ಶೈಲೇಂದ್ರ ಹೆಸರು ಕೂಡ ಕೇಳಿ ಬರುತ್ತಿತ್ತು. ದಿಲ್ವಾಲ , ಆಟ , ತಿರುಪತಿ ಎಕ್ಸ್ಪ್ರೆಸ್ , ಸಿನಿಮಾ ಖ್ಯಾತಿಯ ಸುಮಂತ್ ದೊಡ್ಮನೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾತುಗಳಿಗೆ ಈಗ ತೆರೆ ಬಿದ್ದಿದೆ. ಇವರು ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಇವರು ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು ಆದರೆ ಈಗ ಆ ವಿಷಯದ ಬಗ್ಗೆ ಸ್ವತಃ ಸುಮಂತ್ ಸ್ಪಷ್ಟನೆ ನೀಡಿದ್ದಾರೆ. ಸುಮಂತ್ ಅವರ ಹೊಸ ಸಿನಿಮಾ ” ಗೋವಿಂದ ಗೋವಿಂದ ” ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದು , ಜೊತೆಗೆ ಈ ಸಿನಿಮಾ ಏಪ್ರಿಲ್ ತಿಂಗಳಿನಲ್ಲಿ ತೆರೆ ಕಾಣಲಿದೆ ಹಾಗಾಗಿ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇವರಿಗೆ ಬಿಗ್ ಬಾಸ್ ಕಡೆಯಿಂದ ಆಫರ್ ಬಂದಿದ್ದು ನಿಜ , ಆದರೆ ಇವರ ಸಿನಿಮಾಗಳು ತೆರೆ ಕಾಣದೆ ತುಂಬಾ ಗ್ಯಾಪ್ ಆದ ಕಾರಣದಿಂದ ಸಿನಿಮಾ ಬಿಟ್ಟು ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳಲು ಆಗಿಲ್ಲ ಎನ್ನುತ್ತಾರೆ ಸುಮಂತ್.
‘ ಗೋವಿಂದ ಗೋವಿಂದ ‘ ಸಿನಿಮಾ ಮಾತ್ರವಲ್ಲದೇ ಇನ್ನೆರಡು ಕನ್ನಡ ಸಿನಿಮಾಗಳನ್ನು ಒಪ್ಪಿಕೊಂಡಿದ್ದು , ಅವುಗಳ ಬಗ್ಗೆ ಇನ್ನ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಬಿಗ್ ಬಾಸ್ ಶೋ ಆರಂಭಕ್ಕೂ ಮುಂಚೆ ಸ್ಪರ್ಧಿಗಳ ವಿಷಯದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತವೆ ಅದ್ಯಾವ ಸುಳ್ಳು ಸುದ್ದಿಗಳಿಗೆ ಗಮನ ಕೊಡದೆ ಕಾರ್ಯಕ್ರಮದ ಆರಂಭದ ಸಮಯಕ್ಕೆ ಕಾಯಿರಿ ಎಂದಿದ್ದಾರೆ ಪರಮೇಶ್ವರ್ ಗುಂಡ್ಕಲ್. ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ‘ ಸಿಲ್ಲಿ ಲಲ್ಲಿ ಧಾರಾವಾಹಿ ಖ್ಯಾತಿಯ ರವಿಶಂಕರ್ , ವೈಷ್ಣವಿ ಗೌಡ , ಆರ್ಜೆ ರಾಜೇಶ್ , ಅನುಷಾ ರಂಗನಾಥ್ , ಗೀತಾ ಭಾರತಿ ಭಟ್ , ಇನ್ನೂ ಮುಂತಾದ ಸ್ಟಾರ್ ನಟ ನಟಿಯರ ಹೆಸರು ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ ಅಲ್ಲಿ ಕೇಳಿಬರುತ್ತಿವೆ. ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಈ ವಿಷಯದ ಬಗ್ಗೆ ಇನ್ನೂ ಏನು ಪ್ರಸ್ತಾಪ ಮಾಡಿಲ್ಲ. ಏನೇ ಆಗಲಿ ಸುಮಂತ್ ಶೈಲೇಂದ್ರ ತುಂಬಾ ಗ್ಯಾಪ್ ನಂತರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿ ಫುಲ್ ಖುಷಿ ಆಗಿದ್ದಾರೆ ಅವರ ಅಭಿಮಾನಿಗಳು. ಏಪ್ರಿಲ್ ತಿಂಗಳಿನಲ್ಲಿ ಇವರ ಸಿನಿಮಾಗಳು ತೆರೆ ಕಾಣುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.