ಯುವ ಪ್ರತಿಭೆಗಳ ಪ್ರಯತ್ನಕ್ಕೆ ಕೈ ಜೋಡಿಸಿದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು..!

in ಕನ್ನಡ ಮಾಹಿತಿ 54 views

ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಲಾಕ್​​​ಡೌನ್ ಪಾಲಿಸಬೇಕು, ಅನಾವಶ್ಯಕವಾಗಿ ತಿರುಗಾಡದೆ ಮನೆಯೊಳಗೆ ಇರಬೇಕು ಎಂದು ಸರ್ಕಾರ ಆದೇಶಿಸಿದ್ದರೂ ಜನರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೋಗಲಿ, ಹೊರಗೆ ಬಂದಾಗ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನಾದರೂ ಕಾಯ್ಡುಕೊಳ್ಳದೆ ಗುಂಪು ಗುಂಪಾಗಿ ತಿರುಗುತ್ತಿದ್ದಾರೆ. ಇನ್ನು ಇಂದಿನಿಂದ ರಾಜ್ಯದಲ್ಲಿ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಮದ್ಯಪ್ರಿಯರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಮದ್ಯ ಕೊಳ್ಳುತ್ತಿದ್ದಾರೆ.

Advertisement

 

Advertisement

 

Advertisement

Advertisement

ಇಂತ ಜನರಿಗೆ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಜಾಗೃತಿ ಕೆಲಸ ನಡೆಯುತ್ತಿದೆ. ಇದೀಗ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಸಿಬ್ಬಂದಿ ನೇತೃತ್ವದಲ್ಲಿ ‘ಅರೆಸ್ಟ್ ಕೊರೊನಾ ‘ ಎಂಬ ಡಾಕ್ಯುಮೆಂಟರಿ ತಯಾರಿಸಲಾಗಿದೆ. ವಿಶೇಷ ಎಂದರೆ ಈ ಕಿರುಚಿತ್ರದಲ್ಲಿ ಠಾಣೆಯ 10 ಮಂದಿ ಪೊಲೀಸ್ ಸಿಬ್ಬಂದಿ ಕೂಡಾ ಅಭಿನಯಿಸಿದ್ದಾರೆ. ಈ ಡಾಕ್ಯುಮೆಂಟರಿಯನ್ನು ರಂಗಭೂಮಿ ಕಲಾವಿದ, ‘ಸುಪರ್ವ’ ತಂಡದ ಯುವ ಪ್ರತಿಭೆ ಸುಮನ್ ಭಾರಧ್ವಾಜ್​ ರಚಿಸಿ ನಿರ್ದೇಶಿಸಿದ್ದಾರೆ.

 

 

 

ಈ ಡಾಕ್ಯುಮೆಂಟರಿಯನ್ನು ತಯಾರಿಸಲು ಪಿಎಸ್​ಐ ನಿತೀಶ್ ಶೇಖರ್ ಹಾಗೂ ಪಿಎಸ್​​​ಐ ಟಿಪ್ಪು ಸುಲ್ತಾನ್​​ ನಾಯಕ್ವಾಡಿ, ಸುಮನ್ ಭಾರಧ್ವಾಜ್ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ. ಸುಮನ್ ಕೂಡಾ ಈ ಡಾಕ್ಯುಮೆಂಟರಿಯಲ್ಲಿ ನಟಿಸಿದ್ದಾರೆ. ಜನರ ಬೇಜವಾಬ್ದಾರಿತನ, ಜನರನ್ನು ಮನೆಯಿಂದ ಹೊರ ಬರದಂತೆ ಕುಟುಂಬವನ್ನು ಬಿಟ್ಟು ಶ್ರಮಿಸುತ್ತಿರುವ ಪೊಲೀಸರು, ಕೊರೊನಾ ರೋಗಿಗಳ ಪ್ರಾಣ ಉಳಿಸಲು ಹೋರಾಡುತ್ತಿರುವ ವೈದ್ಯರು, ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲೂ ನಗರವನ್ನು ಸ್ವಚ್ಛವಾಗಿಡಲು ಯತ್ನಿಸುತ್ತಿರುವ ಪೌರ ಕಾರ್ಮಿಕರ ಬಗ್ಗೆ ಈ ಡಾಕ್ಯುಮೆಂಟರಿಯಲ್ಲಿ ತೋರಿಸಲಾಗಿದೆ. ಎಲ್ಲರೂ ಒಂದಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿದರೆ ಕೊರೊನಾವನ್ನು ಆದಷ್ಟು ಬೇಗ ನಿರ್ನಾಮ ಮಾಡಬಹುದು. ಅದರಂತೆ ಎಲ್ಲರೂ ಕೈ ಜೋಡಿಸಿ, ಲಾಕ್​ಡೌನ್ ಉಲ್ಲಂಘಿಸದೆ ಮನೆಯಲ್ಲಿರಿ ಎಂದು ಮನವಿ ಮಾಡಲಾಗಿದೆ.

 

ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಡಾಕ್ಯುಮೆಂಟರಿಗೆ ರಘು ಸಂಕಲನ ಒದಗಿಸಿದ್ದರೆ, ಕಲಾವಿದರಿಗೆ ಶ್ರೀದೇವಿ ಮೇಕಪ್ ಮಾಡಿದ್ದಾರೆ. ಶೇಷಸಾಯಿ, ವಾಣಿಶ್ರೀ ಹಾಗೂ ತಂಡ ವಸ್ತ್ರವಿನ್ಯಾಸ, ಜೆ.ಬಿ. ಫೋಟೋಗ್ರಫಿ ಛಾಯಾಗ್ರಹಣ ಹಾಗೂ ಫೋಕಸ್ ಸ್ಟುಡಿಯೋದವರು ಡ್ರೋನ್​​ ಒದಗಿಸಿದ್ದಾರೆ. ನವನೀತ್​​​ ಹಾಗೂ ಇನ್ನಿತರರು ಈ ಡಾಕ್ಯುಮೆಂಟರಿ ತಯಾರಿಸಲು ಕೈ ಜೋಡಿಸಿದ್ದಾರೆ.

Advertisement
Share this on...