ಸುಬ್ಬಲಕ್ಷ್ಮಿ ಸಂಸಾರ, ರಾಧಾಕಲ್ಯಾಣ, ಮಗಳು ಜಾನಕಿ ಪ್ರಸಾರ ಸ್ಥಗಿತ…ಇದಕ್ಕೆ ಅಸಲಿ ಕಾರಣವೇ ಬೇರೆ ಇದೆ…!

in ಮನರಂಜನೆ 98 views

ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಸಮಸ್ಯೆಗಳಿರುತ್ತವೆ. ಚಿತ್ರರಂಗ ಕೂಡಾ ಇದಕ್ಕೆ ಹೊರತಾಗಿಲ್ಲ. ಕನ್ನಡ ಚಿತ್ರರಂಗ ಕೂಡಾ ಪೈರಸಿ, ಪರಭಾಷಾ ಚಿತ್ರಗಳ ಹಾವಳಿ, ಡಬ್ಬಿಂಗ್​​ನಂತ ಗಂಭೀರ ಸಮಸ್ಯೆಗಳನ್ನು ದಶಕಗಳಿಂದ ಎದುರಿಸುತ್ತಾ ಬಂದಿದೆ. ಡಬ್ಬಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ದೊಟ್ಟ ಮಟ್ಟದಲ್ಲಿ ಪ್ರತಿಭಟನೆಗಳೇ ಜರುಗಿವೆ.ಇಷ್ಟು ದಿನ ಬೆಳ್ಳಿತೆರೆಯನ್ನು ಕಾಡುತ್ತಿದ್ದ ಡಬ್ಬಿಂಗ್​​ ಎಂಬ ರಾಕ್ಷಸ ಇದೀಗ ಕನ್ನಡ ಕಿರುತೆರೆಗೂ ಕಾಲಿಟ್ಟಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.

Advertisement

 

Advertisement

Advertisement

ಲಾಕ್​​ಡೌನ್​​​​ನಿಂದ ಸುಮಾರು 2 ತಿಂಗಳಿಂದ ನಿಂತಿದ್ದ ಧಾರಾವಾಹಿಗಳ ಚಿತ್ರೀಕರಣ ಕಳೆದ ಮೂರು ದಿನಗಳ ಹಿಂದಿನಿಂದ ಮತ್ತೆ ಆರಂಭವಾಗಿದ್ದು ಜೂನ್​ 1 ರಿಂದ ಮತ್ತೆ ಎಂದಿನಂತೆ ಹೊಸ ಎಪಿಸೋಡ್​​​​ಗಳು ಆರಂಭವಾಗಲಿವೆ. ಆದರೆ ಈ ಖುಷಿಯ ವಿಚಾರದ ನಡುವೆಯೂ ಧಾರಾವಾಹಿಪ್ರಿಯರಿಗೆ ಬ್ಯಾಡ್​ ನ್ಯೂಸ್ ಇದೆ. ಮಗಳು ಜಾನಕಿ, ರಾಧಾ ಕಲ್ಯಾಣ, ದೇವಯಾನಿ, ಸುಬ್ಬಲಕ್ಷ್ಮಿ ಸಂಸಾರ, ಜೀವನದಿ ಸೇರಿದಂತೆ ಎಲ್ಲಾ ವಾಹಿನಿಗಳ ಸುಮಾರು 20 ಧಾರಾವಾಹಿಗಳು ಪ್ರಸಾರ ನಿಲ್ಲಿಸಲಿವೆ. ಅಂದರೆ, ಈ ಧಾರಾವಾಹಿಗಳು ಮತ್ತೆ ಪ್ರಸಾರವಾಗುವುದಿಲ್ಲ.

Advertisement

ಚಿತ್ರ ಕೃಪೆ: ಜೀ ಕನ್ನಡ

ಜನರ ಪ್ರಕಾರ ಲಾಕ್​​ಡೌನ್​​​ನಿಂದ ಉಂಟಾದ ಆರ್ಥಿಕ ಸಮಸ್ಯೆಯೇ ಈ ಧಾರಾವಾಹಿಗಳು ಸ್ಥಗಿತಗೊಳ್ಳಲು ಕಾರಣ. ಆದರೆ ಇಲ್ಲಿ ಕಾರಣವೇ ಬೇರೆ ಇದೆ. ಕಿರುತೆರೆಗೂ ಕಾಲಿಟ್ಟಿರುವ ಡಬ್ಬಿಂಗ್ ಹೆಮ್ಮಾರಿ ಈ ಧಾರಾವಾಹಿಗಳ ಪ್ರಸಾರಕ್ಕೆ ತಡೆಯುಂಟುಮಾಡುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ವಾಹಿನಿಗಳು ಕೆಲವೊಂದು ಧಾರಾವಾಹಿಗಳಿಗೆ ಗೇಟ್​​ಪಾಸ್ ನೀಡಿವೆ. ಇದು ಹೀಗೆ ಮುಂದುವರೆದರೆ ಕಿರುತೆರೆಯನ್ನೇ ನಂಬಿಕೊಂಡು ಬದುಕುತ್ತಿರುವ ಸಾವಿರಾರು ಮಂದಿ ಬೀದಿಗೆ ಬೀಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಚಿತ್ರ ಕೃಪೆ: ಜೀ ಕನ್ನಡ

 

ಡಬ್ಬಿಂಗ್ ಸಿನಿಮಾಗಳಾಗಲೀ, ಧಾರಾವಾಹಿಗಳಾಗಲೀ ಆರಂಭವಾದರೆ ಡಬ್ಬಿಂಗ್ ಕಲಾವಿದರಿಗೆ ಸಹಾಯವಾಗುವುದೇ ಹೊರತು, ಲೈಟ್​ ಬಾಯ್, ಮೇಕಪ್​​​​​ ಮ್ಯಾನ್, ಕಾಸ್ಟ್ಯೂಮ್​​ ಡಿಸೈನರ್ ಸೇರಿದಂತೆ ಕಿರುತೆರೆಯ ದಿನಕೂಲಿಯನ್ನೇ ನಂಬಿ ಬದುಕುತ್ತಿರುವವರ ಬದುಕು ಬೀದಿಗೆ ಬೀಳಲಿದೆ. ಧಾರಾವಾಹಿಗಳಿಂದ ಪ್ರತಿವರ್ಷ 1200 ಕೋಟಿ ರೂಪಾಯಿಯಷ್ಟು ವಹಿವಾಟು ನಡೆಯುತ್ತಿದೆ. ಅದರಲ್ಲಿ ಸರ್ಕಾರಕ್ಕೆ ಸುಮಾರು 250 ಕೋಟಿ ರೂಪಾಯಿ ತೆರೆಗೆ ದೊರೆಯಲಿದೆ. ಆದ್ದರಿಂದ ಸರ್ಕಾರ ಇತ್ತ ಗಮನ ಹರಿಸಿ ಈ ಡಬ್ಬಿಂಗ್ ವಿಚಾರವಾಗಿ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಟೆಲಿವಿಷನ್ ಅಸೋಸಿಯೇಷನ್ ಮನವಿ ಮಾಡಿದೆ.

Advertisement
Share this on...