ನಟ ಚರಣ್ ರಾಜ್ ರವರ ಮಗ ಯಾರು ಗೊತ್ತಾ..? ಇವರು ಕೂಡ ಕನ್ನಡದ ಟಾಪ್ ನಟ..!

in ಸಿನಿಮಾ 343 views

ನಟ ಚರಣ್ ರಾಜ್ ವಯಸ್ಸು 60 ದಾಟಿದ್ದರು ಈಗಲೂ ಎಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುವ ನಟ. ನಮ್ಮ ಕರ್ನಾಟಕದ ಬೆಳಗಾವಿಯಲ್ಲಿ ಹುಟ್ಟಿದ ನಟ ಚರಣ್ ರಾಜ್ ರವರು ಸಿನಿಮಾಗಳಲ್ಲಿ ತುಂಬಾ ಬೆಳೆದದ್ದು, ಬೆಳಗಿದ್ದು ಮಾತ್ರ ನಮ್ಮ ಪಕ್ಕದ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡಿನಲ್ಲಿ. ಕನ್ನಡದ ‘ಆಶಾ’ ಚಿತ್ರದ ಮೂಲಕ ತಮ್ಮ ಸಿನಿ ಪಯಣವನ್ನು ಚರಣ್ ರಾಜ್ ರವರು ಆರಂಭಿಸಿದರು. ನಂತರ ‘ತಾಳಿಯ ಭಾಗ್ಯ’ ಸಿನಿಮಾದಲ್ಲಿ ನಟಿಸಿದ್ದರು. ಅಗಾಧ ಪ್ರತಿಭೆಯನ್ನು ಹೊಂದಿದ್ದ ಚರಣ್ ರಾಜ್ ರವರಿಗೆ ಕನ್ನಡದಲ್ಲಿ ಅಷ್ಟೇನು ಅವಕಾಶಗಳು ಹೆಚ್ಚಾಗಿ ಸಿಗಲಿಲ್ಲ. ನಂತರ ಇವರ ಪ್ರತಿಭೆಯನ್ನು ಗುರುತಿಸಿದ ತೆಲುಗು ಚಿತ್ರರಂಗದ ಅಂದಿನ ಸಿನಿಮಾ ನಿರ್ದೇಶಕರು ಇವರನ್ನು ಕರೆದು ಅವಕಾಶಗಳನ್ನು ನೀಡಿದರು. ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚಾಗಿ ನಟಿಸಿದ್ದರೂ ಚರಣ್ ರಾಜ್ ರವರು ಕನ್ನಡ ಚಿತ್ರರಂಗವನ್ನು ಮರೆಯಲಿಲ್ಲ. ಕನ್ನಡದಲ್ಲಿ ನಾಯಕ ನಟರಾಗಿ, ಖಳ ನಟರಾಗಿ, ಪೋಷಕ ನಟರಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

Advertisement

 

Advertisement


ಕನ್ನಡದ ಆಫ್ರಿಕಾದಲ್ಲಿ ಶೀಲಾ, ಗಂಧದಗುಡಿ ಭಾಗ-2, ಸಮರ, ಅಣ್ಣಾವ್ರ ಮಕ್ಕಳು, ಪಾಪಿಗಳ ಲೋಕದಲ್ಲಿ ಇನ್ನೂ ಮುಂತಾದ ಚಿತ್ರಗಳು ಇವರಿಗೆ ತುಂಬಾನೇ ಹೆಸರು ತಂದು ಕೊಟ್ಟವು. ಕನ್ನಡದಲ್ಲಿ 25 ಕ್ಕೂ ಹೆಚ್ಚು ಹಾಗೂ ತಮಿಳಿನಲ್ಲಿ ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಚರಣ್ ರಾಜ್ ತೆಲುಗಿನಲ್ಲಿ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮಲೆಯಾಳಂ ಹಾಗೂ ಹಿಂದಿ ಚಿತ್ರಗಳಲ್ಲೂ ಚರಣ್ ರಾಜ್ ರವರು ತಮ್ಮ ನಟನೆಯ ಖದರ್ ತೋರಿಸಿದ್ದಾರೆ. ನಟರಾಗಿ, ನಿರ್ದೇಶಕರಾಗಿ, ಸಂಗೀತ ನಿರ್ದೇಶಕರಾಗಿ, ಬರಹಗಾರರಾಗಿ, ನಿರ್ಮಾಪಕರಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ತೋರಿಸಿದ್ದಾರೆ.

Advertisement

 

Advertisement


ಇನ್ನೂ ಚರಣ್ ರಾಜ್ ರವರ ಮಗ ಕೂಡ ನಾಯಕ ನಟರಾಗಿ ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಚರಣ್ ರಾಜ್ ರವರ ಮಗ ತೇಜ್ ರಾಜ್ ರವರು ತಮಿಳಿನ 90 ml ಸಿನಿಮಾದಲ್ಲಿ ಇತ್ತೀಚೆಗೆ ನಾಯಕನಾಗಿ ನಟಿಸಿದ್ದರು. ತಮಿಳಿನ ಇನ್ನೂ ಎರಡು-ಮೂರು ಸಿನಿಮಾಗಳಿಗೆ ತೇಜ್ ರಾಜ್ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿ ಭರತ ಬಾಹುಬಲಿ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ನಟ ತೇಜ್ ರಾಜ್.

– ಸುಷ್ಮಿತಾ

Advertisement
Share this on...