chikkanna comedian

ಚಿಕ್ಕಣ್ಣ ಈಗ ಸಿನಿಮಾ ಹೀರೋ ! ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ ಯಾವುದು ಗೊತ್ತಾ?

in ಮನರಂಜನೆ/ಸಿನಿಮಾ 321 views

ಚಿಕ್ಕಣ್ಣ ಹೆಸರು ಎಲ್ಲರಿಗೂ ಚಿರಪರಿಚಿತವಾದ ಹೆಸರು.ಹಾಸ್ಯ ಎಂದಾಕ್ಷಣ ನೆನಪಿಗೆ ಬರುವುದೇ ಚಿಕ್ಕಣ್ಣ ಅವರು. ಪಂಚ್ ಡೈಲಾಗ್ ಪರ್ಫೆಕ್ಟ್ ಟೈಮಿಂಗ್, ಹೊಟ್ಟೆ ಹುಣ್ಣಾಗುವಂತೆ ಇರುತ್ತದೆ ಇವರ ಹಾಸ್ಯಗಳು. ಈ ಚಿಕ್ಕಣ್ಣ ಅವರ ಜನನ 22 ಜೂನ್ 1984 ರಲ್ಲಿ ಆಯಿತು.ಇವರು ಮೈಸೂರು ಮೂಲದ ದೃಷ್ಟಿ ಕಲಾವಿದೆ ತಂಡದ ಮೂಲಕ ಹಾಸ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ನಟನಾ ಪ್ರವೃತ್ತಿಯನ್ನು ಶುರು ಮಾಡಿದರು.ನಂತರ ಇವರು ಕನ್ನಡದ ಚಾನೆಲ್ ಆದ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರಾಂಕ್ ಶೋನಲ್ಲಿ ಕಾಣಿಸಿಕೊಂಡರು.ನಂತರ ಇವರು ಕನ್ನಡ ಚಿತ್ರರಂಗದ ವಜ್ರ ಮಹೋತ್ಸವದ ಸಂಭ್ರದಲ್ಲಿದೆ ಭಾಗವಹಿಸಿ ಅದರಲ್ಲಿ ಇವರು ಹಾಸ್ಯ ನಾಟಕದಲ್ಲಿ ಪಾತ್ರವನ್ನು ಮಾಡಿದ್ದರು.ಅದೇ ಕಾರ್ಯಕ್ರಮದಲ್ಲಿ ಇದ್ದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇವರ ಅಭಿನಯ ತುಂಬಾ ಇಷ್ಟವಾಯಿತು. ನಂತರದ ದಿನಗಳಲ್ಲಿ ಅಂದರೆ 2011 ರಲ್ಲಿ ಬಿಡುಗಡೆಯಾದ ‘ ಕಿರಾತಕ ‘ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇವರು ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.2013 ರಲ್ಲಿ ‘ ರಾಜಾಹುಲಿ ‘ 2014 ರಲ್ಲಿ ‘ಅಧ್ಯಕ್ಷ ‘ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಒಬ್ಬ ಹೊಸ ಹಾಸ್ಯ ಪಾತ್ರಧಾರಿ ಮತ್ತು ಉತ್ತಮ ಕಲಾವಿದ ಸಿಕ್ಕ ಹಾಗೆ ಆಯಿತು.

Advertisement

Advertisement

 

Advertisement

ಅದಲ್ಲದೆ ಇವರು ಕೆಲವು ಸಿನಿಮಾದ ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ.ಈಗ್ ಇವರು ತುಂಬಾ ಟ್ರೆಂಡ್ ಅಲ್ಲಿ ಇರುವ ಒಬ್ಬ ಹಾಸ್ಯ ನಟ. ಕಣ್ ತೆರೆದು ನೋಡುವಷ್ಟರಲ್ಲಿ ಇವರು ಕನ್ನಡ ಚಿತ್ರರಂಗದಲ್ಲಿ ಒಂದು ಒಳ್ಳೆಯ ಸ್ಥಾನಕ್ಕೆ ಏರಿದರು.ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರವನ್ನು ಮಾಡಿದ್ದಾರೆ.ಇವರ ಬಾಲ್ಯದ ಕ್ಷಣಗಳು ಅಷ್ಟೊಂದು ಸರಿ ಇರಲಿಲ್ಲ. ಮದ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು ಸಾಕಷ್ಟು ಕಷ್ಟಗಳನ್ನು ನೋಡಿದ್ದಾರೆ.ಒಂದು ಕಾಲದಲ್ಲಿ ಇವರು ಗಾರೆ ಕೆಲಸವನ್ನು ಮಾಡುತ್ತಿದ್ದರು.ಅಂದು ಗಾರೆ ಕೆಲಸವನ್ನು ಮಾಡುತ್ತಿದ್ದ ವ್ಯಕ್ತಿ ಇಂದು ಚಂದನವನದ ಉತ್ತಮ ಹಾಸ್ಯ ಕಲಾವಿದ. ಕಾಲಚಕ್ರ ಹೇಗಾದರೂ ಬದಲಾಗ ಬಹುದು ಎನ್ನುವುದಕ್ಕೆ ಇವರೇ ಉತ್ತಮ ಉದಾಹರಣೆ.ಇಷ್ಟು ದಿನ ತೆರೆ ಮೇಲೆ ಹಾಸ್ಯ ನಟನಾಗಿ ಪ್ರೇಕ್ಷಕರ ಎದೆಯಲ್ಲಿ ಕಚಗುಳಿಯಿಡುತ್ತಿದ್ದ ನಟ ಚಿಕ್ಕಣ್ಣ ಈಗ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.ಚಿಕ್ಕಣ್ಣ ಮೊದಲ ಬಾರಿಗೆ ಹೀರೋ ಆಗುತ್ತಿರುವ ಸಿನಿಮಾವನ್ನು ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಗೌಡ ನಿರ್ಮಿಸಲಾಗಿದ್ದು,ಚಂದ್ರ ಮೋಹನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ . ಆ ಸಿನಿಮಾದ ಹೆಸರು ” ಉಪಾಧ್ಯಕ್ಷ “.

Advertisement

 


ನಟ ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ಉಪಾಧ್ಯಕ್ಷ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ನಡೆದಿದೆ.ಕೆಲ ವರ್ಷಗಳ ಹಿಂದೆ ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಶನ್ ಅಲ್ಲಿ ಅಧ್ಯಕ್ಷ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು.ಅದರಲ್ಲಿ ಶರಣ್ ಅಧ್ಯಕ್ಷನಾಗಿದ್ದರೆ,ಚಿಕ್ಕಣ್ಣ ಉಪಾಧ್ಯಕ್ಷ ಆಗಿ ಮಿಂಚಿದ್ದರು.ಇದೀಗ ಚಿಕ್ಕಣ್ಣ ಹೀರೋ ಆಗಿರುವ ಸಿನಿಮಾದಲ್ಲಿ ಅದನ್ನೇ ಟೈಟಲ್ ಮಾಡಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಈ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂದು ಹೇಳಿದ್ದಾರೆ.ಇನ್ನೇನೂ ಕೆಲವೇ ಸಮಯದಲ್ಲಿ ಚಿಕ್ಕಣ್ಣ ಅವರು ನಾಯಕ ನಟನಾಗಿ ಬೆಳ್ಳಿ ಪರದೆಯ ಮೇಲೆ ಮಿಂಚಲಿದ್ದಾರೆ.ಚಿಕ್ಕಣ್ಣ ಅವರಿಗೆ ಎಲ್ಲೆಡೆ ಅಭಿಮಾನಿಗಳಿದ್ದಾರೆ,ಮತ್ತು ಅವರ ಹಾಸ್ಯಕ್ಕೆ ನಗದವರೆ ಇಲ್ಲ.ಈಗ ಅವರು ನಾಯಕ ನಟನಾಗಿ ಮಾಡುತ್ತಿರುವ ಎಲ್ಲರಿಗೂ ಸಂತಸದ ವಿಷಯವಾಗಿದೆ. ಅವರ ಈ ಸಿನಿಮಾ ಒಳ್ಳೆಯ ಯಶಸ್ಸು ಕಾಣಲಿ ಎಂಬುದು ಅವರ ಎಲ್ಲಾ ಅಭಿಮಾನಿಗಳ ಆಸೆ…..

Advertisement
Share this on...