ಚಿಕ್ಕಣ್ಣ ಹಾಗೂ ಟಗರು ಸರೋಜ ಅವರಿಗೆ ವಿವಾಹವಾಗಿದೆಯಾ ?

in ಮನರಂಜನೆ/ಸಿನಿಮಾ 164 views

ಸುಕ್ಕ ಸೂರಿ ಹಾಗು ಕರುನಾಡ ಚಕ್ರವರ್ತಿ ಶಿವಣ್ಣ ಅಭಿನಯದ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಆದ ಸಿನಿಮಾ ಎಂದರೆ ಅದು ಟಗರು ಸಿನಿಮಾ. 2018ರಲ್ಲಿ ಬಿಡುಗಡೆಯಾಗಿದ್ದ ಈ ಸಿನಮಾ ಧನಂಜಯ್ ಅವರಿಗೆ ಭಾರೀ ಹೆಸರು ತಂದುಕೊಟ್ಟಿತ್ತು.ಇದೀಗ ಚಿತ್ರರಂಗದಲ್ಲಿ ಡಾಲಿ ಎಂಬ ಹೆಸರಿನಿಂದಲೇ ರೂಲ್ ಮಾಡುತ್ತಿದ್ದಾರೆ. ಈ ಸಿನಿಮಾ ಗೆಲ್ಲೋಕೆ ಕಥೆ ಎಷ್ಟು ಮುಖ್ಯವಾಗಿತ್ತೋ , ಪ್ರತಿ ಪಾತ್ರವೂ ಕೂಡ ಅಷ್ಟೇ ಪ್ರಮುಖವಾಗಿತ್ತು. ಚಿತ್ರ-ವಿಚಿತ್ರವಾದ ಪಾತ್ರದ ಹೆಸರುಗಳು ಪ್ರೇಕ್ಷಕರಿಗೆ ಹೊಸದು ಎನಿಸಿತ್ತು. ಕಾಕ್ರೋಚ್​, ಡಾಲಿ, ಕಾನ್ಸ್​ಟೇಬಲ್​ ಸರೋಜಾ..ಹೀಗೆ ನಾನಾ ಹೆಸರು ಟ್ರೆಂಡ್ ಸೃಷ್ಟಿಸಿತ್ತು. ಹ್ಯಾಟ್ರಿಕ್​ ಹೀರೊ’ ಶಿವಣ್ಣ- ಸುಕ್ಕಾ ಸೂರಿ ಕಾಂಬಿನೇಷನ್​ ‘ಟಗರು’ ಸಿನಿಮಾದಲ್ಲಿ ಹೊಸದೊಂದು ಮ್ಯಾಜಿಕ್​ ಸೃಷ್ಟಿ ಮಾಡಿತ್ತು. ಸುಕ್ಕಾ ಸೂರಿ ಅಂದ್ಮೇಲೆ ಪ್ರತಿ ಪಾತ್ರದ ವೇಯ್ಟೇಜ್​ ಗಂಭೀರವಾಗಿರುತ್ತದೆ. ಸುಮ್ಮನೆ ಹಾಗೆ ಬಂದು, ಹೀಗೆ ಹೋಗುವಂತೆ ಯಾವುದೇ ಪಾತ್ರ ಇರೋದಿಲ್ಲ.ಸಣ್ಣ ಪಾತ್ರವಾದ್ರೂ ಅದರ ಪರಿಣಾಮ ದೊಡ್ಡದಿರುತ್ತೆ. ಇನ್ನು ಡಾಲಿಯಂತೆಯೇ ಟಗರು ಸಿನಿಮಾದಿಂದ ದೊಡ್ಡ ಮಟ್ಟದ ಖ್ಯಾತಿ ಪಡೆದವರು ತ್ರಿವೇಣಿ ಅಲಿಯಾಸ್ ಕಾನ್ಸ್ ಟೇಬಲ್ ಸರೋಜಾ.

Advertisement

 

Advertisement

Advertisement

ಇನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟಗರು ಸರೋಜ ಅವರು ವಿವಾಹವಾಗಿರುವ ಚಿತ್ರ ಸಿಕ್ಕಪಟ್ಟೆ ವೈರಲ್ಆಗುತ್ತಿದೆ. ಇನ್ನು ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುವುದಕ್ಕೆ ಕಾರಣವೇನೆಂದರೆ, ಸರೋಜ ವಿವಾಹವಾಗಿರುವುದು ಕನ್ನಡದ ಹಾಸ್ಯ ನಟ ಚಿಕ್ಕಣ್ಣ ಅವರನ್ನ.ಇದಕ್ಕೆ ಸಂಬಂಧಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಲವು ಅಭಿಮಾನಿಗಳು ಇದನ್ನು ಖುಷಿ ಪಟ್ಟಿದ್ದರೆ ಹಾಗೂ ಕೆಲವು ಅಭಿಮಾನಿಗಳು ಶಾಕ್ ಆಗಿದ್ದರು. ಆದರೆ ಇದೀಗ ಇದು ಸುಳ್ಳು ಸುದ್ದಿ ಎಂದು ಟಗರು ಸರೋಜ ಅವರು ಸ್ಪಷ್ಟನೆ ನೀಡಿದ್ದಾರೆ.

Advertisement

 

ಟಗರು ಸರೋಜ ಹಾಗೂ ಚಿಕ್ಕಣ್ಣ ಅವರು ವಧು-ವರರಂತೆ ವೇಷ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಬ್ಬರಿಗೂ ವಿವಾಹವಾಗಿದೆ ಶುಭಾಶಯ ಕೋರಿ ಎಂದು ಕೆಲ ನೆಟ್ಟಿಗರು ಬರೆದುಕೊಂಡಿದ್ದಾರೆ . ಅದೆಷ್ಟೋ ಅಭಿಮಾನಿಗಳು ಇದನ್ನು ನಂಬಿ ಶುಭಾಶಯವನ್ನು ಕೂಡ ತಿಳಿಸಿದ್ದರು. ಆದರೆ ಇದು ಸುಳ್ಳು ಸುದ್ದಿಯಾಗಿದೆ.

ಈ ಕುರಿತು ಟಗರು ಸರೋಜ ಅವರು ತಮ್ಮ ಟಿಕ್ ಟಾಕಂ ಹಾಗೂ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಾಕಿದ್ದು, ‘ನನ್ನ ಮತ್ತು ಚಿಕ್ಕಣ್ಣ ಅವರಿಗೆ ವಿವಾಹವಾಗಿದೆ ಎಂದು ಕೆಲವು ಟ್ರೋಲ್‌ ಪೇಜ್‌ಗಳು ಸುದ್ದಿ ಹರಡುತ್ತಿವೆ, ಆದರೆ ಇದು ಸುಳ್ಳಾಗಿದೆ,ಚಿಕ್ಕಣ್ಣ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ನಾನೇ ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ ಅದೇ ಚಿತ್ರವನ್ನು ಬಳಸಿಕೊಂಡು ನನಗೆ ಚಿಕ್ಕಣ್ಣ ಅವರಿಗೆ ವಿವಾಹವಾಗಿದೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಚಿಕ್ಕಣ್ಣ ಮತ್ತು ನಾನು ವಧು-ವರರ ಪೋಷಾಕಿನಲ್ಲಿರುವ ಈ ಚಿತ್ರ ಸಿನಿಮಾವೊಂದರ ಶೂಟಿಂಗ್‌ನಲ್ಲಿ ತೆಗೆದಿದ್ದು, ಆ ಚಿತ್ರವನ್ನು ಬಳಸಿ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂದು ಟಗರು ಸರೋಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement
Share this on...