ಬಾಲಕಲಾವಿದರಾಗಿ ನಟನಾ ಲೋಕದಲ್ಲಿ ಮಿಂಚಿದವರಿಂದು ಚಂದನವನದ ಜನಪ್ರಿಯ ತಾರೆಯರು ಗೊತ್ತಾ?

in Uncategorized/ಮನರಂಜನೆ/ಸಿನಿಮಾ 228 views

ಬಣ್ಣದ ಲೋಕದ ಆಕರ್ಷಣೆಯೇ ನಿಜಕ್ಕೂ ವಿಚಿತ್ರವಾದುದು. ಯಾಕೆಂದರೆ ಎಲ್ಲರನ್ನು ತನ್ನತ್ತ ಆಕರ್ಷಿಸುವ ಅದರಲ್ಲಿ ವಿಶೇಷವಾದ ಸೆಳೆತವಿರುವುದಂತೂ ದಿಟ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ನಟನಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಾ ವರ್ಗದ ಜನರನ್ನು ಈ ಲೋಕ ಸ್ವಾಗತಿಸುತ್ತದೆ. ಪ್ರತಿನಿತ್ಯವೂ ಹೊಸ ಹೊಸ ಪ್ರತಿಭೆಗಳು ನಟನಾ ಲೋಕದಲ್ಲಿ ಮಿಂಚುತ್ತಿರುವುದು ಇತ್ತೀಚಿನ ದಿನಗಳಲ್ಲಿ ತೀರಾ ಮಾಮೂಲಿಯಾದ ಸಂಗತಿ. ಇದರ ಜೊತೆಗೆ ಚಂದನವನದಲ್ಲಿ ನಟ ನಟಿಯರಾಗಿ ಮಿಂಚಿರುವ ಈ ಕಲಾವಿದರುಗಳು ಬಾಲ ಕಲಾವಿದರಾಗಿ ಈ ಕ್ಷೇತ್ರಕ್ಕೆ ಬಂದವರು.
ಸುಧಾರಾಣಿ – ಆನಂದ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಇವರು ಕಿಟ್ಟುಪುಟ್ಟು , ಕುಳ್ಳ -ಕುಳ್ಳಿ ಚಿತ್ರಗಳಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸಿದ ಚೆಲುವೆ. ಬೇಬಿ ಜಯಶ್ರೀಯಾಗಿ ನಟನಾ ಕ್ಷೇತ್ರಕ್ಕೆ ಬಂದ ಈಕೆ ಇಂದು ಸುಧಾರಾಣಿಯಾಗಿ ಚಿರಪರಿಚಿತ. ಭರತನಾಟ್ಯ ಕಲಾವಿದೆಯೂ ಆಗಿದ್ದ ಸುಧಾರಾಣಿ ಅವರು ಮೊದಲ ಬಾರಿ ಬಣ್ಣ ಹಚ್ಚಿದಾಗ ಕೇವಲ ಎರಡನೇ ತರಗತಿಯಲ್ಲಿ ಓದುತ್ತಿದ್ದರು.

Advertisement

Advertisement

ಪುನೀತ್ ರಾಜ್ ಕುಮಾರ್ – ಸಿನಿಲೋಕದಲ್ಲಿ ಪವರ್ ಸ್ಟಾರ್ ಎಂದು ಜನಪ್ರಿಯರಾಗಿರುವ ವರನಟ ರಾಜ್ ಕುಮಾರ್ ವಂಶದ ಕುಡಿ ಪುನೀತ್ ರಾಜ್ ಕುನಾರ್ ಕೂಡಾ ಬಾಲನಟನಾಗಿ ಗುರುತಿಸಿಕೊಂಡ ಪ್ರತಿಭೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿರುವ ಪುನೀತ್ ಸುಮಾರ್ 14 ಚಿತ್ರಗಳಲ್ಲಿ ಬಾಲ ನಟರಾಗಿ ನಟಿಸಿದ್ದಾರೆ. ಭಾಗ್ಯವಂತ, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಬೆಟ್ಟದ ಹೂವು ಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಪುನೀತ್ ಬೆಟ್ಟದ ಹೂವು ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಯನ್ನು ಪಡೆದುಕೊಂಡಿದ್ದಾರೆ.

Advertisement

ಮಾಸ್ಟರ್ ಮಂಜುನಾಥ್ – ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಸ್ವಾಮಿಯಾಗಿ ನಟಿಸುವ ಮೂಲಕ ವೀಕ್ಷಕರ ಗಮನ ಸೆಳೆದ ಮಂಜುನಾಥ್ ಬಾಲನಟನಾಗಿಯೂ ಪರಿಚಿತರು. ಸುಮಾರು 68 ಚಿತ್ರಗಳಲ್ಲಿ ನಟಿಸಿರುವ ಮಾಸ್ಟರ್ ಮಂಜುನಾಥ್ ರಾಷ್ಟ್ರ ಪ್ರಶಸ್ತಿ ವಿಜೇತರೂ ಹೌದು. ಕೇವಲ 68 ಸಿನಿಮಾಗಳಲ್ಲಷ್ಟೇ ಬಣ್ಣ ಹಚ್ಚಿರುವ ಮಾಸ್ಟರ್ ಮಂಜುನಾಥ್ ಅವರು ಕನ್ನಡದ ಹೆಸರಾಂತ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

Advertisement

 

ಶ್ಯಾಮಿಲಿ – ರಾಷ್ಟ್ರ ಪ್ರಶಸ್ತಿ ವಿಜೇತೆ ಶ್ಯಾಮಿಲಿ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನಟಿಸಿರುವ ಅದ್ಭುತ ನಟಿ. ಎರಡು ವರ್ಷದ ಮಗುವಾಗಿದ್ದಾಗಲೇ ನಟನೆ ಆರಂಭಿಸಿದ ಇವರು ಮತ್ತೆ ಹಾಡಿತು ಕೋಗಿಲೆ ಮೂಲಕ ಕನ್ನಡದಲ್ಲಿ ಸಿನಿಪಯಣ ಆರಂಭಿಸಿದರು. ಮುಂದೆ ಭೈರವಿ, ಶ್ವೇತಾಗ್ನಿ, ಕಾದಂಬರಿ, ದಾಕ್ಷಾಯಿಣಿ, ಶಾಂಭವಿ, ಮಕ್ಕಳ ಸಾಕ್ಷಿ, ಚಿನ್ನ ನೀನು ನಗುತಿರು, ಕರುಳಿನ ಕುಡಿ ಮತ್ತು ಜಗದೀಶ್ವರಿ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ.

 

ವಿಜಯ್ ರಾಘವೇಂದ್ರ – ಚಲಿಸುವ ಮೋಡಗಳು ಚಿತ್ರದ ಮೂಲಕ ಬಾಲಕಲಾವಿದನಾಗಿ ಸಿನಿಪಯಣ ಆರಂಭಿಸಿದ ವಿಜಯ್ ರಾಘವೇಂದ್ರ ಮುಂದೆ ಅರಳಿದ ಹೂವುಗಳು, ಜಗ ಮೆಚ್ಚಿದ ಮಗ, ಕೊಲ್ಲೂರ ಶ್ರೀ ಮೂಕಾಂಬಿಕಾ, ಕೊಟ್ರೆಶಿ ಕನಸು, ಸಂಗೀತ ಸಾಗರ ಗಾನಯೋಗಿ ಶ್ರೀ ಪಂಚಾಕ್ಷರ ಗವಾಯಿ, ಚಿನ್ನಾರಿ ಮುತ್ತ ಸಿನಿಮಾದಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಂಡಿದ್ದರು. ಚಿನ್ನಾರಿ ಮುತ್ತ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರು.

ಮಾಸ್ಟರ್ ಆನಂದ್ – ಕಿಂದರಿ ಜೋಗಿ ಚಿತ್ರದಿಂದ ಬಾಲನಟನಾಗಿ ಸಿನಿಪಯಣ ಆರಂಭಿಸಿದ ಮಾಸ್ಟರ್ ಆನಂದ್ ಮುಂದೆ ಗೌರಿಗಣೇಶ್, ಶಾಂತಿ ಕ್ರಾಂತಿ, ಮುತ್ತಿನ ಹಾರ, ಕರ್ಪೂರದ ಗೊಂಬೆ ಸಿನಿಮಾಗಳಲ್ಲಿ ಬಾಲಕಲಾವಿದರಾಗಿ ಛಾಪು ಮೂಡಿಸಿದ್ದರು.

ಅಮೂಲ್ಯ – ಎಂಟುವರ್ಷದ ಬಾಲಕಿಯಿದ್ದಾಗ ಪರ್ವ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಅಮೂಲ್ಯ ಚಂದು, ಲಾಲಿಹಾಡು, ನಮ್ಮ ಬಸವ ಸೇರಿದಂತೆ ಹತ್ತು ಚಿತ್ರಗಳಲ್ಲಿ ನಟಿಸಿದ್ದಾರೆ.

ಮಾಸ್ಟರ್ ಕಿಶನ್ – ಹಲವು ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ ಕಿಶನ್ ಅವರು ಕೇರ್ ಆಫ್ ಫುಟ್ ಪಾತ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಅತೀ ಸಣ್ಣ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು‌
– ಅಹಲ್ಯಾ

Advertisement
Share this on...