ಪಾಕಿಸ್ತಾನಕ್ಕೆ ಅಂಡರ್ ಗಾರ್ಮೆಂಟ್ಸ್​​ ಮಾಸ್ಕ್​​​​​​​ಗಳನ್ನು ಕಳಿಸಿಕೊಟ್ಟ ಚೀನಾ…!

in Kannada News 43 views

ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಮೂರನೇ ಹಂತಕ್ಕೆ ತಲುಪುತ್ತಿದೆ. ಇಡೀ ದೇಶದಲ್ಲೇ ಮಹಾರಾಷ್ಟ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ದೆಹಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲೂ ಕೊರೊನಾ 200 ರ ಗಡಿ ದಾಟಿದ್ದು ಏಪ್ರಿಲ್ 30 ವರೆಗೂ ಲಾಕ್ ಡೌನ್​​​ ಅವಧಿ ವಿಸ್ತರಿಸಲಾಗಿದೆ. ಜನರು ಹೊರಬರದಂತೆ ಮನೆಯಲ್ಲೇ ಇರಬೇಕು ಎಂದು ಸರ್ಕಾರ ಮನವಿ ಮಾಡಿದೆ. ಇನ್ನು ಹೊರಗೆ ಹೋಗಲೇಬೇಕಾದ ಪರಿಸ್ಥಿತಿ ಬಂದಲ್ಲಿ ಮಾಸ್ಕ್​​​​​ ಧರಿಸಿ ಹೋಗಿ, ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.

Advertisement

 

Advertisement

Advertisement

 

Advertisement

ಇನ್ನು ಪ್ರಪಂಚಾದ್ಯಂತ ಎನ್​​​-95 ಮಾಸ್ಕ್​​​​​​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಮಧ್ಯೆ ನಮಗೂ ಎನ್​​​-95 ಮಾಸ್ಕ್​​​​​​​ಗಳನ್ನು ಪೂರೈಸಿ ಎಂದು ಪಾಕಿಸ್ತಾನ ಚೀನಾಗೆ ಮನವಿ ಮಾಡಿತ್ತು. ಚೀನಾ ಕೂಡಾ ಪಾಕಿಸ್ತಾನ ಮಾಡಿದ ಮನವಿಗೆ ಸ್ಪಂದಿಸಿ ಮಾಸ್ಕ್​​​​​​ಗಳನ್ನು ರಫ್ತು ಮಾಡಿತ್ತು. ತಮಗೆ ದೊರೆತ ಮಾಸ್ಕ್​​​​​ಗಳನ್ನು ಪಾಕಿಸ್ತಾನ ಆಸ್ಪತ್ರೆಗಳಿಗೆ ಕೂಡಾ ಕಳಿಸಿಕೊಟ್ಟಿದೆ. ಆದರೆ ಆ ಮಾಸ್ಕ್​​​​​​ಗಳನ್ನು ನೋಡಿದ ಆಸ್ಪತ್ರೆ ಸಿಬ್ಬಂದಿಗಳಿಗೆ ಶಾಕ್ ಕಾದಿತ್ತು. ಏಕೆಂದರೆ ಬಾಕ್ಸ್​​​​ನಲ್ಲಿದ್ದವೆಲ್ಲಾ ಅಂಡರ್​​​​​​​​​ ಗಾರ್ಮೆಂಟ್ಸ್​​​​​ನಿಂದ ಮಾಡಿದ್ದ ಮಾಸ್ಕ್​​​​ಗಳು. ಈ ವಿಷಯ ತಿಳಿಯುತ್ತಿದ್ದಂತೆ ಈ ವಿಚಾರವಾಗಿ ಪಾಕಿಸ್ತಾನದ ಎಲ್ಲಾ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಸಾರವಾಯ್ತು.

 

 

ಈ ವಿಚಾರವಾಗಿ ಚೀನಾ ಇದುವರೆಗೂ ಪ್ರತಿಕ್ರಿಯಿಸಿಲ್ಲ. ಮೊದಲಿನಿಂದಲೂ ಚೀನಾ ಹಾಗೂ ಪಾಕಿಸ್ತಾನದ ನಡುವೆ ಉತ್ತಮ ಬಾಂಧವ್ಯ ಇತ್ತು. ಪಾಕಿಸ್ತಾನಕ್ಕೆ ಏನೇ ತೊಂದರೆಯಾದರೂ ಚೀನಾ ಸಹಾಯಕ್ಕೆ ನಿಲ್ಲುತ್ತಾ ಬಂದಿತ್ತು. ಈಗ ಈ ಮಾಸ್ಕ್​​ ವಿಚಾರ ವೈರಲ್ ಆಗುತ್ತಿದೆ. ಕೊರೊನಾ ಭೀತಿ ಆರಂಭವಾದಾಗಿನಿಂದ ಪಾಕ್ ಹಾಗೂ ಚೀನಾ ಗಡಿಯನ್ನು ಮುಚ್ಚಲಾಗಿದೆ. ಪಾಕಿಸ್ತಾನ ಚೀನಾದ ಬಳಿ ಮಾಸ್ಕ್​ ಮಾತ್ರವಲ್ಲದೆ, ಟೆಸ್ಟಿಂಗ್ ಕಿಟ್, ವೆಂಟಿಲೇಟರ್​​ ಹಾಗೂ ಇನ್ನಿತರ ಮೆಡಿಕಲ್ ವಸ್ತುಗಳಿಗಾಗಿ ಬೇಡಿಕೆ ಇಟ್ಟಿತ್ತು. ಈ ವಸ್ತುಗಳನ್ನು ಪಡೆಯಲು ಪಾತ್ರ ಪಾಕ್​​-ಚೀನಾ ಗಡಿ ತೆಗೆಯಲಾಗುತ್ತಿತ್ತು. ಇದೀಗ ಚೀನಾ ಕಳಿಸಿರುವ ಈ ಮಾಸ್ಕ್​​​ಗಳ ವಿಚಾರವಾಗಿ ಈ ದೇಶಗಳ ನಡುವೆ ಏನಾದರೂ ಮುನಿಸು ಉಂಟಾಗಲಿದೆಯಾ ಎಂಬುದನ್ನು ಕಾದು ನೋಡಬೇಕು.

 

 

ಇನ್ನು ಮೈಸೂರು ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯ ಕಾರ್ಮಿಕರಿಗೆ ಕೊರೊನಾ ಸೋಂಕು ಹರಡಿದೆ. ಈ ಕಾರ್ಮಿಕರಿಗೆ ಹೇಗೆ ಸೋಂಕು ಹರಡಿತು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ ಚೀನಾದಿಂದ ಈ ಕಾರ್ಖಾನೆಗೆ ಕಚ್ಛಾ ವಸ್ತುಗಳನ್ನು ರಫ್ತು ಮಾಡಲಾಗಿದ್ದು, ಈ ಕಂಟೈನರ್​​​​​​​​ ಮೂಲಕ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ವರದಿ ಕೂಡಾ ಬರಲಿದೆ. ಒಟ್ಟಿನಲ್ಲಿ ಚೀನಾದಲ್ಲಿ ಹುಟ್ಟಿಕೊಂಡ ಈ ವೈರಸ್​​​​ನಿಂದ ಜಗತ್ತೇ ತೊಂದರೆ ಪಡುವಂತಾಗಿದೆ.

Advertisement
Share this on...