ತಮ್ಮ ಜೀವನದಲ್ಲಿ ನಡೆದ ದುರಂತದ ಬಗ್ಗೆ ಹೇಳಿಕೊಂಡ ಚಿನ್ನು…ಅವರ ಈ ವಿಚಾರ ನಿಮಗೆ ಗೊತ್ತಾ…?

in ಮನರಂಜನೆ 30 views

ಲಕ್ಷ್ಮಿ ಬಾರಮ್ಮ, ಕರ್ನಾಟಕದ ಜನರ ಮನಗೆದ್ದ ಖ್ಯಾತ ಧಾರಾವಾಹಿಗಳಲ್ಲಿ ಒಂದು. ಆರಂಭದಲ್ಲಿ 2-3 ಎಪಿಸೋಡ್​​​​​​​​​​​​​​​ಗಳಲ್ಲಿ ಲಚ್ಚಿ ಅಲಿಯಾಸ್ ಚಿನ್ನು ಪಾತ್ರವನ್ನು ಹೊಸ ಪ್ರತಿಭೆಯೊಬ್ಬರು ನಿಭಾಯಿಸಿದ್ದರು. ನಂತರ ಕಾರಣಾಂತರಗಳಿಂದ ಆ ಜಾಗಕ್ಕೆ ಕವಿತಾಗೌಡ ಬಂದರು. ಕವಿತಾ ಗೌಡ ಕೂಡಾ ಆ ಧಾರಾವಾಹಿಯಿಂದ ಹೊರ ಹೋದ ನಂತರ ಧಾರಾವಾಹಿ ಕೊನೆಯವರೆಗೂ ರಶ್ಮಿ ಪ್ರಭಾಕರ್ ಚಿನ್ನು ಆಗಿ ನಟಿಸಿದರು.ಇನ್ನು ರಶ್ಮಿ ಪ್ರಭಾಕರ್ ಎಡಕಣ್ಣು ಚಿಕ್ಕದಾಗಿದ್ದು ಈ ಬಗ್ಗೆ ವೀಕ್ಷಕರಲ್ಲಿ ಬಹಳ ಕುತೂಹಲ ಇತ್ತು. ಇತ್ತೀಚೆಗೆ ರಶ್ಮಿ ತಮ್ಮ ಎಡಗಣ್ಣಿನ ವಿಚಾರವಾಗಿ ಹೇಳಿಕೊಂಡಿದ್ದರು. ರಶ್ಮಿ ಸುಮಾರು 7 ವರ್ಷದವರಿರುವಾಗ ಹಿಂದೆ ಶಿವರಾತ್ರಿ ಹಬ್ಬದಂದು ಸುಣ್ಣದ ಡಬ್ಬಿ ಹಿಡಿದುಕೊಂಡು ಆಟವಾಡುವಾಗ ಆಕಸ್ಮಿಕವಾಗಿ ಸುಣ್ಣ ಅವರ ಎಡಕಣ್ಣಿಗೆ ಬಿದ್ದಿದೆ. ಕೂಡಲೇ ಅವರು ಕಣ್ಣನ್ನು ನೀರಿನಿಂದ ತೊಳೆದರೂ ಒಂದು ಕ್ಷಣದ ಅಚಾತುರ್ಯದಿಂದ ಎಡಕಣ್ಣನ್ನು ಸಂಪೂರ್ಣವಾಗಿ ಕಳೆದುಕೊಂಡರು. ಸಮಾಧಾನದ ವಿಷಯ ಎಂದರೆ ರಶ್ಮಿ ಬಲಗಣ್ಣಿಗೆ ಏನೂ ತೊಂದರೆಯಾಗಿಲ್ಲ.

Advertisement

 

Advertisement

Advertisement

ಬಾಲ್ಯದಿಂದಲೂ ನಟನೆ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ರಶ್ಮಿ ಅವರಿಗೆ ಈ ಘಟನೆ ಬಹಳ ನೋವು ನೀಡಿತು. ಆದರೆ ಅವರು ಹೆದರಲಿಲ್ಲ. ಬೆಂಗಳೂರಿಗೆ ಬಂದ ಅವರು ಖಾಸಗಿ ಚಾನೆಲ್​​ವೊಂದರಲ್ಲಿ ನ್ಯೂಸ್ ರೀಡರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಆಡಿಷನ್​​​​​​​ಗಳಲ್ಲಿ ಭಾಗವಹಿಸುತ್ತಿದ್ದ ಅವರಿಗೆ ಕೊನೆಗೂ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಒದಗಿ ಬಂತು. ಅಲ್ಲಿಂದ ಶುರುವಾಯ್ತು ರಶ್ಮಿ ಬಣ್ಣದ ಲೋಕದ ಪ್ರಯಾಣ. ನನಗೆ ಅವಕಾಶ ನೀಡಿದ ಲಕ್ಷ್ಮಿ ಬಾರಮ್ಮ ಧಾರಾವಾಹಿ ತಂಡಕ್ಕೆ ನಾನು ಸದಾ ಆಭಾರಿಯಾಗಿರುತ್ತೇನೆ ಎಂದು ರಶ್ಮಿ ಹೇಳಿದ್ದಾರೆ.

Advertisement

 

ಇನ್ನು ರಶ್ಮಿ ಕಿರುತೆರೆ ಮಾತ್ರವಲ್ಲ ಬೆಳ್ಳಿತೆರೆಯಲ್ಲೂ ಮಿಂಚಿದ್ದಾರೆ. ಕಣ್ಣು ಚಿಕ್ಕದು ಎಂಬ ಕಾರಣಕ್ಕೆ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದ ರಶ್ಮಿಗೆ ಈಗ ಸಾಕಷ್ಟು ಅವಕಾಶಗಳು ಲಭಿಸುತ್ತಿವೆ. ಯಶ್ ಅಭಿನಯದ ಮಾಸ್ಟರ್ ಪೀಸ್, ಮೂಕಹಕ್ಕಿ, ಮಧುಬಾಲಾ, ಮಹಾಕಾವ್ಯ ಸೇರಿ ಕೆಲವೊಂದು ಸಿನಿಮಾಗಳಲ್ಲಿ ಕೂಡಾ ರಶ್ಮಿ ನಟಿಸಿದ್ದಾರೆ.

ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಧೈರ್ಯ ಕಳೆದುಕೊಳ್ಳದೆ ಛಲ, ಆತ್ಮವಿಶ್ವಾಸದಿಂದ ಅಂದುಕೊಂಡಿದ್ದನ್ನು ಸಾಧಿಸಿದ ರಶ್ಮಿ ಅವರನ್ನು ನಿಜಕ್ಕೂ ಮೆಚ್ಚಲೇಬೇಕು. ಅವರ ಆಸೆಯಂತೆ ಬಣ್ಣದ ಲೋಕದಲ್ಲಿ ಅವರು ಹೆಚ್ಚು ಸಾಧನೆ ಮಾಡುವಂತಾಗಲಿ ಎಂದು ಹಾರೈಸೋಣ.

Advertisement
Share this on...