ಮೆಗಾಸ್ಟಾರ್​ ನಿಜಕ್ಕೂ ಕೂದಲು ತೆಗೆಸಿದ್ರಾ ಅಥವಾ ಇದು ಮೇಕ್ಕಪ್ಪಾ….ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ…!

in ಮನರಂಜನೆ/ಸಿನಿಮಾ 228 views

ಮೆಗಾಸ್ಟಾರ್ ಚಿರಂಜೀವಿ ಸದ್ಯಕ್ಕೆ ಸಿನಿಮಾಗಳಿಂದ ಬ್ರೇಕ್​​ನಲ್ಲಿದ್ದರೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟಿವ್ ಇದ್ದಾರೆ. ಅಮ್ಮನಿಗೆ ದೋಸೆ ಮಾಡಿಕೊಡುವುದು, ಮೀನು ಕರಿ ಮಾಡಿಕೊಡುವುದು, ಕೊರೊನಾ ಕುರಿತಾಗಿ ಜಾಗೃತಿ ಮೂಡಿಸುವುದು, ಮೊಮ್ಮಕ್ಕಳೊಂದಿಗೆ ಆಟವಾಡುತ್ತಿರುವುದು ಸೇರಿದಂತೆ ಅನೇಕ ವಿಡಿಯೋಗಳನ್ನು ಈ ಲಾಕ್​​​ಡೌನ್ ಸಮಯದಲ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಮೀಸೆ ತೆಗೆಸಿರುವ ಫೋಟೋ ಹಂಚಿಕೊಂಡು ಮೆಗಾಸ್ಟಾರ್ ಅಭಿಮಾನಿಗಳಿಗೆ ಸರ್​​​ಪ್ರೈಸ್ ನೀಡಿದ್ದರು. ಆದರೆ ನಾಲ್ಕು ದಿನಗಳ ಹಿಂದೆ ಕೂದಲು ತೆಗೆಸಿ ಬೋಳುತಲೆಯಲ್ಲಿರುವ ಫೋಟೋವನ್ನು ಹಂಚಿಕೊಂಡು ಮತ್ತೆ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ನಾವು ನೋಡುತ್ತಿರುವುದು ನಿಜಾನಾ ಎಂದು ಅಭಿಮಾನಿಗಳೇ ಕನ್ಫ್ಯೂಸ್ ಆಗಿದ್ದರು. ಚಿರಂಜೀವಿ ಪುತ್ರ ರಾಮ್​ಚರಣ್ ತೇಜ ಕೂಡಾ ತಂದೆಯ ಫೋಟೋಗೆ ಕಮೆಂಟ್ ಮಾಡಿ ನಾನ್ನ, ಇದು ನಿಜಾನಾ..? ಎಂದು ಪ್ರಶ್ನಿಸಿದ್ದರು.

Advertisement

Advertisement

ಚಿರಂಜೀವಿ ಅವರ ಈ ಲುಕ್ ನೋಡಿದ ಅಭಿಮಾನಿಗಳು ಬಹುಶ: ಚಿರಂಜೀವಿ ಹೊಸ ಸಿನಿಮಾಗಾಗಿ ಹೀಗೆ ಕೂದಲು ತೆಗೆಸಿರಬಹುದು ಎಂದುಕೊಳ್ಳುತ್ತಿದ್ದರು. ಆದರೆ ಚಿರಂಜೀವಿ ಕೂದಲು ತೆಗೆಸಿಲ್ಲ. ಇದು ಮೇಕಪ್, ಚಿರು ತಲೆಕೂದಲು ತೆಗೆಸಿರುವಂತೆ ಮೇಕಪ್ ಮಾಡಲಾಗಿದೆ. ಸಿನಿಮಾಗಳಲ್ಲಿ ಕ್ಯಾಮರಾ, ಲೈಟಿಂಗ್ ಎಷ್ಟು ಮುಖ್ಯವೋ ಮೇಕಪ್ ಕೂಡಾ ಅಷ್ಟೇ ಮುಖ್ಯ. ಇದು ಇಂದು ನಿನ್ನೆಯದಲ್ಲ. ಸಿನಿಮಾ ಆರಂಭವಾದಾಗಿನಿಂದ ಮೇಕಪ್​ಗೆ ಕೂಡಾ ಪ್ರಮುಖ ಸ್ಥಾನವಿದೆ. ಕ್ಯಾಮರಾ, ಲೈಟಿಂಗ್​​​​​​​​​ ಸರಿಹೊಂದುವಂತೆ ಮೇಕಪ್ ಮಾಡಲಾಗುತ್ತದೆ. ಮೊದಲೆಲ್ಲಾ ಹೀಗೆ ವಿವಿಧ ರೀತಿಯ ಮೇಕಪ್​​​ಗಳಿರಲಿಲ್ಲ. ಆದರೆ ಈಗ ತಂತ್ರಜ್ಞಾನ ಮುಂದುವರೆದಿದ್ದು ಕಣ್ಣಿಗೆ ಕಟ್ಟುವಂತ ಮೇಕಪ್ ಮಾಡಲಾಗುತ್ತಿದೆ.

Advertisement

ಇದೀಗ ಚಿರಂಜೀವಿ ತಮ್ಮ ಈ ಬೋಳುತಲೆಯನ್ನು ಹೇಗೆ ಮಾಡಲಾಯ್ತು ಎಂಬುದರ ಮೇಕಿಂಗ್ ವಿಡಿಯೋವೊಂದರನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ 4-5 ತಂತ್ರಜ್ಞರು ಚಿರುವಿಗೆ ಹೊಸ ಸಿನಿಮಾಗಾಗಿ ಟ್ರಯಲ್ ಲುಕ್ ಪ್ರಯತ್ನಿಸಿದ್ದಾರೆ. ಒಂದು ವೇಳೆ ಇದು ಓಕೆ ಆದರೆ ತಮ್ಮ ಮುಂದಿನ ಚಿತ್ರದಲ್ಲಿ ಚಿರು ಇದೇ ಗೆಟಪ್​​ನಲ್ಲಿ ಕಾಣಿಸಲಿದ್ದಾರೆ. ‘ಇದು ನೈಜ ಎನ್ನಿಸುವ ರೀತಿ ಮೇಕಪ್ ಮಾಡಿದ ಮೇಕಪ್ ಕಲಾವಿದರಿಗೆ, ತಂತ್ರಜ್ಞರಿಗೆ ನನ್ನ ಕೃತಜ್ಞತೆಗಳು, ಸಿನಿಮಾ ಮ್ಯಾಜಿಕ್​​ಗೆ ಸೆಲ್ಯೂಟ್’ ಎಂದು ಚಿರಂಜೀವಿ ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಬರೆದುಕೊಂಡಿದ್ದಾರೆ.

Advertisement

 

View this post on Instagram

 

Thanks to all the technicians of the industry, who can make any look believable. Salute the magic of cinema!

A post shared by Chiranjeevi Konidela (@chiranjeevikonidela) on

ಚಿರಂಜೀವಿ ಈ ಬೇರ್​ ಹೆಡ್ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ನನ್ನ ಅರ್ಬನ್ ಮಾಂಕ್ ಲುಕ್ ಹೇಗಿದೆ ಎಂದು ಕೇಳುತ್ತಿದ್ದಂತೆ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್, ಕಮೆಂಟ್ ದೊರೆತಿತ್ತು. ಚಿರಂಜೀವಿ ತಮ್ಮ ನಾಗಬಾಬು, ಅವರ ಪುತ್ರ ವರುಣ್, ಚಿರು ಅಳಿಯ ಕಲ್ಯಾಣ್ ದೇವ್​​​​, ನಟ ಸತ್ಯದೇವ್​​​​​​, ಕನ್ನಡ ನಟ ಅನಿಶ್, ನಿಶ್ವಿಕಾ ನಾಯ್ಡು ಹಾಗೂ ಇನ್ನಿತರರು ಕೂಡಾ ಕಮೆಂಟ್ ಮಾಡಿದ್ದರು. ಇದೀಗ ಮೇಕಿಂಗ್ ವಿಡಿಯೋ ನೋಡಿದಾಗ ನಿಜಕ್ಕೂ ಈ ಟೆಕ್ನಿಕ್, ಮೇಕಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿರಂಜೀವಿ ಸದ್ಯಕ್ಕೆ ‘ಆಚಾರ್ಯ’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...