ಹಣವಿಲ್ಲದ ಕಾರಣ ರಸ್ತೆಯಲ್ಲಿ ನಿಂತಿದ್ದ ಧ್ರುವನಿಗೆ ಚಿರು ಏನು ಹೇಳಿದ್ದರು ಗೊತ್ತಾ ?

in News 49 views

ವಿಧಿ ಎಷ್ಟು ಕ್ರೂರ ಅಲ್ಲವೇ ? ಆಯಸ್ಸು ಎಂಬುವುದು ಮುಗಿದ ಮೇಲೆ ಆ ವ್ಯಕ್ತಿ ಎಷ್ಟೆ ಒಳ್ಳೆಯ ವ್ಯಕ್ತಿತ್ವ ಉಳ್ಳವನೇ ಆಗಿರಲೀ,ಭೂಮಿಗೆ ವಿದಾಯ ಹೇಳಿ ಇಹಲೋಕದತ್ತ ಪ್ರಯಾಣ ಮಾಡಲೇ ಬೇಕು. ಆದರೆ ಖ್ಯಾತ ನಟ ಚಿರಂಜೀವ ಸರ್ಜಾ ಅವರ ಅಗಲಿಕೆಯನ್ನು ಯಾರಿಂದಲೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಂದರ ಕುಟುಂಬ, ಪ್ರೀತಿಯ ಮಡದಿ, ನೆಚ್ಚಿನ ತಂದೆ ತಾಯಿ, ಲಕ್ಷಣನಂತೆ ಸದಾ ಬೆನ್ನಿಗೆ ನಿಲ್ಲುತ್ತಿದ್ದ ತಮ್ಮ ಇವರೆಲ್ಲರನ್ನು ಬಿಟ್ಟು ಚಿರು ಚಿರ ನಿದ್ರೆಗೆ ಜಾರಿದ್ದಾರೆ. ಇವರ ತುಂಬು ಕುಟುಂಬವನ್ನು ನೋಡಿ ವಿಧಿಗೂ ಕೂಡ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಅನಿಸುತ್ತದೆ, ಶಿಖರದ ಉತ್ತಂಗಕ್ಕೇರ ಬೇಕಿದ್ದ ನಟನನ್ನು ಬಹು ಬೇಗ ಕರೆದುಕೊಂಡು ಬಿಟ್ಟಿದ್ದಾನೆ. ಭೂಮಿಗೆ ಬರಬೇಕಿದ್ದ ಕಂದಮ್ಮನ ಮುಖವನ್ನು ನೋಡುವ ಮುಂಚೇನೆ, ತಂದೆಯನ್ನು ಕರೆಸಿಕೊಂಡು ಬಿಟ್ಟೆಯಲ್ಲ. ಆ ಹೆಣ್ಣು ಮಗುವಿನ ಕೂಗು ನಿನಗೆ ತಿಳಿಯಲಿಲ್ಲವೇ..?!೩೯ ವರುಷಕ್ಕೇ ಚಿರಂಜೀವಿ ಸರ್ಜಾ ಶಾಶ್ವತವಾಗಿ ಚಿರ ನಿದ್ರೆ ಮಾಡಿ ಬಿಟ್ಟಿದ್ದಾರೆ. ನೆನ್ನೆ ಸಂಜೆ ಅವರ ಅಂತ್ಯಕ್ರಿಯೆ ಧ್ರುವ ಅವರ ಫಾರ್ಮ್ ನಲ್ಲಿ ಮುಗಿದಿದೆ. ಕುಟುಂಬ ಮತ್ತು ಅಭಿಮಾನಿಗಳ ಆಂಕ್ರದನ ಮುಗಿಲು ಮುಟ್ಟಿತ್ತು. ಅಂತ್ಯ ಸಂಸ್ಕಾರದ ವೇಳೆ ಧ್ರುವ ಸರ್ಜಾ , ತನ್ನ ಅಣ್ಣನನ್ನು ಅಪ್ಪಿಕೊಂಡು ‘ಅಣ್ಣಾ ಪ್ಲೀಸ್ ಎದ್ದೇಳು’ ಎನ್ನುವ ದೃಶ್ಯ ಈಗಲೂ ನೆನೆದರೆ ಕಣ್ಣು ತುಂಬಿ ಬರುತ್ತದೆ.

Advertisement

 

Advertisement

Advertisement

ಇನ್ನು ಚಿರು ಅವರು ಸಾಯುವ ಕೆಲವು ತಿಂಗಳುಗಳ ಹಿಂದೆ ಧ್ರುವ ಅವರು ಮಾಧ್ಯಮ ಒಂದರಲ್ಲಿ ಸಂದರ್ಶ ನೀಡಿದ್ದರು. ಆ ಸಮಯದಲ್ಲಿ ನಾನು ಮತ್ತು ನನ್ನ ಅಣ್ಣ ವಿದ್ಯಾಭ್ಯಾಸಕ್ಕಾಗಿ ಮನೆ ಬಿಟ್ಟು ದೂರದ ಶಾಲೆಯಲ್ಲಿ ಓದುತ್ತಿದ್ದೆವು. ಆ ಸಮಯದಲ್ಲಿ ಧ್ರುವ ಹತ್ತಿರ ಹಣವಿಲ್ಲದ ಕಾರಣ ರಸ್ತೆಯಲ್ಲಿ ನಿಂತು ಮನೆಯವರಿಗೆ ಫೋನ್ ಮಾಡಿ ಹಣ ಬೇಕೆಂದು ಕೇಳುವಾಗ, ಚಿರು ಅವರು ಬಂದು ತನ್ನ ತಮ್ಮನನ್ನು ಅಪ್ಪಿಕೊಂಡು ಒಂದಿಷ್ಟು ಹಣವನ್ನು ನೀಡಿ ದುಡ್ಡು ಬೇಕಾದರೆ ಬೇರೆ ಯಾರನ್ನೂ ಕೇಳಬೇಡ, ನನ್ನ ಮಾತ್ರ ಕೇಳು, ಅದೇನೆ ಕಷ್ಟ ಇದ್ದರೂ ನನಗೆ ಮಾತ್ರ ಇರಲಿ‌, ನೀನು ಚೆನ್ನಾಗಿರಬೇಕು‌ ಎಂದು ಹೇಳಿದ್ದರಂತೆ.. ಅಬ್ಬಾ ಎಂತಹ ಭಾಂದವ್ಯ ಅಲ್ಲವೇ?

Advertisement

 

ಆದರೆ ಚಿರು ಇದೀಗ ನಮ್ಮೊಟ್ಟಿಗಿಲ್ಲ, ಚಿಕ್ಕ ವಯಸ್ಸಿಗೆ ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಾರೆ.ಅಂತ್ಯ ಸಂಸ್ಕಾರದ ಸಮಯದಲ್ಲಿ ಧ್ರುವ ಅವರ ಗೋಳನ್ನು ನೋಡಿದರೆ ಪ್ರತಿಯೊಬ್ಬರ ಕಣ್ಣು ತುಂಬಿ ಬರುತ್ತದೆ.ನನ್ನ ಅಣ್ಣ ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಎಂದು ಹೇಳುತ್ತ, ಪಾರ್ಥಿವ ಶರೀರವನ್ನು ಅಪ್ಪಿಕೊಂಡಂತಹ ದೃಶ್ಯ ವನ್ನು ಯಾರಿಂದಲೂ ನೋಡಲು ಸಾಧ್ಯವಾಗಲೇ ಇಲ್ಲ. ಅಣ್ಣತಮ್ಮಂದಿರಬ್ಬರು ರಾಮ ಲಕ್ಷ್ಮಣ ನಂತಿದ್ದರು. ಆದರೆ ಈ ಸಾವನ್ನು ಅಭಿಮಾನಿಳಿಂದಲೇ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಅವರ ಕುಟುಂಬ ಹೇಗೆ ತಡೆದುಕೊಳ್ಳುತ್ತಿದೆಯೋ ದೇವರೆ ಬಲ್ಲ.

Advertisement
Share this on...