ಧ್ರುವ ಸರ್ಜಾ ಅವರನ್ನು ತಾಯಿಯಂತೆ ನೋಡಿಕೊಂಡಿದ್ದರು ಚಿರು …

in ಸಿನಿಮಾ 45 views

ಚಿರಂಜೀವಿ ಸರ್ಜಾ ಚಿಕ್ಕ ವಯಸ್ಸಿಗೆ ಅಗಲಿರುವುದನ್ನು ನೋಡಿ ಪ್ರತಿಯೊಬ್ಬರು ಭಾವುಕರಾಗಿದ್ದಾರೆ, ನೆನೆದು ಕಣ್ಣೀರಿಡುತ್ತಿದ್ದಾರೆ. ಚಿತ್ರರಂಗದ ಪ್ರತಿಯೊಬ್ಬ ಗಣ್ಯರು ಚಿರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಚಿರು ನಿಧನದ ಸುದ್ದಿಯನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರೋಗ್ಯದ ಕಡೆ ಚಿರು ಸದಾ ಗಮನಹರಿಸುತ್ತಿದ್ದರೂ ಹೃದಯಾಘಾತ ಏಕಾಯಿತು ಎಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡದೆ ಇರಲಾರದು. ಮತ್ತೊಂದೆಡೆ ಚಿರು ಪತ್ನಿ ಮೇಘನಾ ಆರು ತಿಂಗಳ ಗರ್ಭಿಣಿಯಾಗಿದ್ದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇನ್ನು ಮೂರು ತಿಂಗಳಲ್ಲಿ ಚಿರು ಅಪ್ಪನಾಗುತ್ತಿದ್ದರು. ವಿಧಿಯಾಟ ಹೇಗಿದೆ ಎಂದರೆ ಮಗು ಹುಟ್ಟುವ ಮೊದಲೇ ಚಿರು ಕಣ್ಮುಚ್ಚಿದ್ದಾರೆ. ನಿಜಕ್ಕೂ ಇದು ವಿಪರ್ಯಾಸವೇ ಸರಿ. 22 ಚಿತ್ರಗಳಲ್ಲಿ ಅಭಿನಯಿಸಿದ್ದ ಚಿರು, ವಾಯುಪುತ್ರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ಮೊದಲ ಚಿತ್ರಕ್ಕೆ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಹ ಬಂದಿತ್ತು. ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ ಛಾಪು ಮೂಡಿಸಿದ್ದ ಚಿರು ಸ್ಯಾಂಡಲ್’ವುಡ್’ನಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದರು.

Advertisement

 

Advertisement


ಡೌನ್ ಟು ಅರ್ಥ್ ವ್ಯಕ್ತಿ ಎಂದೇ ಗುರುತಿಸಿಕೊಂಡಿದ್ದ ಚಿರು, ಮಾತೃ ಹೃದಯಿ ಎನ್ನುವುದಕ್ಕೆ ತಮ್ಮ ಧ್ರುವ ಸರ್ಜಾ ಹೇಳಿಕೊಂಡಿರುವ ಈ ಮಾತುಗಳೇ ಸಾಕು. ಇತ್ತೀಚೆಗೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಧ್ರುವ ಸರ್ಜಾ ತಮ್ಮ ಅಣ್ಣನ ಬಗ್ಗೆ ಹೀಗೆ ಹೇಳಿಕೊಂಡಿದ್ದರು. “ನಾವಿಬ್ಬರೂ ಚಿಕ್ಕವರಿರುವಾಗ ಬೋರ್ಡಿಂಗ್ ಸ್ಕೂಲ್’ನಲ್ಲಿ ಬೆಳೆದೆವು. ನಮ್ಮ ಮನೆಯಲ್ಲಿ ಆಗ ಕಷ್ಟ ಇತ್ತು. ಆದರೆ ಆ ಸಮಯದಲ್ಲಿ ನನಗೆ ಸ್ವಲ್ಪವೂ ಕಷ್ಟ ಆಗದ ಹಾಗೆ ನನ್ನನ್ನು ನೋಡಿಕೊಂಡಿದ್ದು ನಮ್ಮಣ್ಣ ಚಿರು. ಚಿಕ್ಕವನಿದ್ದಾಗ ನಾನು ಹಾಸಿಗೆಯಲ್ಲಿ ಒದ್ದೆ ಮಾಡಿಕೊಳ್ಳುತ್ತಿದ್ದೆ . ಆಗ ಅವನು ನನ್ನ ಹಾಸಿಗೆ, ಬಟ್ಟೆಯೆಲ್ಲಾ ಕ್ಲೀನ್ ಮಾಡುತ್ತಿದ್ದ . ನಾನು ಆಗ ನಿದ್ದೆ ಬಂದವನ ಹಾಗೆಯೇ ನಟಿಸುತ್ತಾ ಮಲಗಿರುತ್ತಿದ್ದೆ . ಹೀಗೆ ನಾನು ವರ್ಷಗಟ್ಟಲೆ ಅವನಿಗೆ ಕಾಟ ಕೊಟ್ಟಿದ್ದೇನೆ . ಆದರೆ ನಮ್ಮಣ್ಣ ಒಂದು ದಿನಕ್ಕೂ ಬೇಸರಿಸಿಕೊಳ್ಳಲಿಲ್ಲ. ಅವನಿಗೆ ಅದೆಷ್ಟು ತಾಳ್ಮೆ ಅಂತ ಈಗ ಅನಿಸುತ್ತದೆ.

Advertisement

 

Advertisement


ಒಂದು ಸಾರಿ ಮನೆಯವರ ನೆನಪಾಗಿ ತುಂಬಾ ಅಳು ಬಂದಿತು. ಮನೆಯವರ ಜೊತೆ ಮಾತನಾಡಲು ಫೋನ್ ಮಾಡುವುದಕ್ಕೆ ಎರಡು ರೂಪಾಯಿ ಕೊಡಿ ಎಂದು ಅವರಿವರ ಬಳಿ ಬೇಡಿದ್ದೆ. ಆ ಸಮಯದಲ್ಲಿ ನಮ್ಮಣ್ಣ ನನ್ನನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ. ಮುಂದೆ ನಿನಗೆ ಏನೇ ಬೇಕೆಂದರೂ ನಾನಿದ್ದೇನೆ ಕೇಳು ಎಂದು ಹೇಳಿದ. ಇಂದಿಗೂ ಹಾಗೆಯೇ ನಡೆದುಕೊಳ್ಳುತ್ತಿದ್ದಾನೆ. ಕೇಳಿದ್ದೆಲ್ಲ ಕಷ್ಟಪಟ್ಟು ಕೊಡಿಸುತ್ತಾನೆ”.

Advertisement
Share this on...