ಚಿರು ಸಾವಿಗೆ ಈ ದೋಷವೇ ಕಾರಣನಾ ? ನವರಸ ನಾಯಕ ಜಗ್ಗೇಶ್ ಬಿಚ್ಚಿಟ್ಟ ಸತ್ಯ..

in News 41 views

ಚಿಕ್ಕ ವಯಸ್ಸಿನಲ್ಲೆ ಚಂದನವನದ ಭರವಸೆಯ ನಾಯಕ ಯುವ ಸಾಮ್ರಾಟ್ ಅಂತನೇ ಖ್ಯಾತರಾಗಿದ್ದ ಚಿರಂಜೀವಿ ಸರ್ಜಾ ಅವರು ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ.ಆದರೆ ಅವರು ಮತ್ತೆ ಮಗನ ರೂಪದಲ್ಲಿ ಮೇಘನ ಅವರ ಹೊಟ್ಟೆಯಲ್ಲಿ ಜನಿಸುತ್ತಾರೆ ಎಂಬುದು ಚಿರು ಅಭಿಮಾನಿಗಳ ನಂಬಿಕೆ. ಈ ಸಾವನ್ನು ಚಿತ್ರರಂಗ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಚಿತ್ರರಂಗದವರೆಲ್ಲಾ ಶೋಕದಿಂದ ಕೂಡಿದ್ದಾರೆ. ಚಿರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಈ ನಡುವೆ  ಚಿರು ಸಾವನ್ನು ಕುರಿತ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಿರಿಯ ನಟ ಜಗ್ಗೇಶ್‌ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು, ಸಾವಿಗೆ ಕುಜ ದೊಷವೇ ಕಾರಣನಾ? ಎಂಬ ಪ್ರಶ್ನೆ ಮೂಡಿಸಿದ್ದಾರೆ.  ಈಗಿನ ಆಧುನಿಕ ಯುವ ಪೀಳಿಗೆಗಳು ವಿಜ್ಞಾನವನ್ನು ಮಾತ್ರ ನಂಬುತ್ತಾರೆ. ಜ್ಯೋತಿಷ್ಯ ಶಾಸ್ತ್ರನ್ನು ನಂಬುವುದಿಲ್ಲ. ಜೋತಿಷ್ಯ ಶಾಸ್ತ್ರದ ಪ್ರಕಾರ ಅಗಲಿದ ಚಿರಂಜೀವಿ ಸರ್ಜಾ ಅವರಿಗೆ ಕುಜ (ಮಂಗಳ) ದೋಷವಿತ್ತು. ಕುಜದೋಷವಿರುವವರು ಅದನ್ನು ಪರಿಹಾರ ಮಾಡದೆ,ಅಥವಾ ಜಾತಕ ಹೊಂದಾಣಿಕೆಯಾಗದೇ ಮದುವೆ ಮಾಡಿಕೊಂಡರೆ ಈ ರೀತಿಯಾದ ತೊಂದರೆಗಳು ಆಗುತ್ತದೆ ಎಂದು ಕೆಲವು ಜ್ಯೋತಿಷಿಗಳು ಹೇಳುತ್ತಿದ್ದರು. ಇದು ನಿಜ ಎಂಬಂತೆ ಜಗ್ಗೇಶ್ ಅವರ ಭಾವನಾತ್ಮಕ ಪೋಸ್ಟ್ ಎಲ್ಲರಿಗೂ ನೋವನ್ನುಂಟು ಮಾಡಿದೆ.

Advertisement

 

Advertisement

Advertisement

11 ಗಂಟೆಗೆ ನನಗೆ ಕರೆ ಬಂತು. ಸಿಟ್ಟಿನಿಂದ ಯಾರು ಎಂದೆ. ನಾನು ಮಾಮ ಚಿರು ಅಂದ. ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ. ನಕ್ಕು ಪ್ಲೀಸ್‌ ಮಾಮ ಅಂದ. ನಾನು ಮೇಘನಾ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಎಂದು ಚಿರು ಹೇಳಿದ. ಸುಂದರ್ ರಾಜ್‌ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ ಪ್ರಕಾಶ ಅಮ್ಮಣ್ಣಾಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ. ಆಗ ಅಮ್ಮಣ್ಣಾಯ ಅವರು ‘ಜಗ್ಗೇಶ್… ಅಷ್ಟಮಕುಜ ದೋಷ ಇದೆ. ಅದಕ್ಕೆ ಕೆಲ ಪೂಜೆ ಮುಖ್ಯ. ಅದನ್ನು ಮಾಡಿ ಮುಂದುವರೆಯಿರಿ’ ಎಂದರು. ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮದುವೆ ನಿಶ್ಚಯ ಆಯಿತು.

Advertisement

 

ನಟ ಗಣೇಶನ ಜೊತೆ ಒಂದು ಅತಿಥಿ ಪಾತ್ರ ನಿಗದಿಯಾಗಿತ್ತು. ಆ ಚಿತ್ರೀಕರಣ ಮೇಘನಾ ಮನೆ ಮುಂದೆಯೇ ನಡೆಯಿತು. ಚಿತ್ರೀಕರಣ ಮುಗಿಸಿ ಅವರ ಮನೆಗೆ ಹೋಗಿ ಕಾಫಿ ಕುಡಿದು, ಅವರ ಮದುವೆಯ ವಿಷಯ ಮಾತಾಡಿದೆ. ಮದುವೆ ನಿಗದಿಯಾಯಿತು. ಮೇಘನಾ ಹಾಗೂ ಚಿರು ಜೊತೆ ಮಾತನಾಡಿ ಸಂತೋಷವಾಗಿ ಮನೆಗೆ ಬಂದು ನಾನು ಪರಿಮಳ ಈ ವಿಷಯ ಪ್ರಸ್ತಾಪ ಮಾಡಿದೆವು. ದೇವರ ದಯೆಯಿಂದ ಮದುವೆಯು ಮುಗಿಯಿತು.ನಂತರ ಚಿರು ಅನೇಕ ಬಾರಿ ಕರೆಮಾಡಿ ‘ಮಾಮ ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ’ ಎಂದು ಕರೆಯುತ್ತಿದ್ದ. ನನ್ನದು ವಿಚಿತ್ರ ಜನ್ಮ. ಹೂಂ ಎನ್ನುತ್ತಿದ್ದೆ ಆದರೆ ಹೋಗಲಿಲ್ಲ. ಯಾಕೋ ಇಂದು (ಭಾನುವಾರ) ನಾನು ಮತ್ತು ಪರಿಮಳ ಚಿರು ಬಗ್ಗೆ ಮಾತಾಡುತ್ತಾ ‘ಏನ್ ಹುಡುಗರೋ, ಮದುವೆ ಆದಮೇಲೆ ಯಾಕೆ ಗ್ಯಾಪ್‌? ಇಷ್ಟೊತ್ತಿಗೆ ಸಿಹಿಸುದ್ದಿ ಬೇಕಿತ್ತು’ ಎಂದು ಚರ್ಚಿಸಿದೆವು. ನಂತರ ಮಧ್ಯಾಹ್ನ ಊಟ ಮಾಡಿ ಮಲಗಿದೆ.

 

View this post on Instagram

 

ಒಂದು ದಿನ ರಾತ್ರಿ 11ಗಂಟೆಗೆ ನನಗೆ ಕರೆಬಂತು.! ಸಿಟ್ಟಿನಿಂದ ಯಾರು ಅಂದೆ..? ನಾನು ಮಾಮ ಚಿರು ಅಂದ.! ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ.! ನಕ್ಕು Pls ಮಾಮ Forget.! ಅಂದ. ವಿಷಯ ನಾನು ಮೇಘನ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು.! ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಅಂದ.! ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ #ಪ್ರಕಾಶಅಮ್ಮಣ್ಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ.. ಆಗ ಅವರು ಹೇಳಿದ್ದು “ಜಗ್ಗೇಶ್, ಅಷ್ಟಮಕುಜ ದೋಷ, ಅದಕ್ಕೆ ಕೆಲ ಪೂಜೆ ಮುಖ್ಯ.. ಅದಮಾಡಿ ಮುಂದುವರೆಯಿರಿ” ಎಂದರು.. ನಂತರ ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ.. ಮದುವೆ ನಿಶ್ಚಯ ಆಯಿತು.. ಗಣೇಶನ ಜೊತೆ ಒಂದು Guest Roll ಭಟ್ರ Combo ಮಾಡಿದೆ.. ಆ ಚಿತ್ರಿಕರಣ ಮೇಘನ ಮನೆ ಮುಂದೆಯೇ ಇತ್ತು.! ಚಿತ್ರಿಕರಣ ಮುಗಿಸಿ ಅವರ ಮನೆಗೆ ಹೋಗಿ ಕಾಫಿ ಕುಡಿದು ಅವರ ಮದುವೆಯ ವಿಷಯ ಮಾತಾಡಿ fix ಆಗಿ ಮೇಘನ ಹಾಗು ಚಿರು ಜೊತೆ ಮಾತಾಡಿ ಸಂತೋಷವಾಗಿ ಮನೆಗೆ ಬಂದು ನಾನು ಪರಿಮಳ ಈ ವಿಷಯ ಪ್ರಸ್ತಾಪ ಮಾಡಿದೆವು.. ದೇವರ ದಯೆಯಿಂದ ಮದುವೆಯು ಮುಗಿಯಿತು.. ನಂತರ ಚಿರು ಅನೇಕ ಬಾರಿ ಕರೆಮಾಡಿ “ಮಾಮ Pls ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ” ಎಂದು ಕರೆಯುತ್ತಿದ್ದ.! ನನ್ನದು ವಿಚಿತ್ರ ಜನ್ಮ, ಹೂಂ ಎನ್ನುತ್ತಿದ್ದೆ ಆದರೆ ಹೋಗಲಿಲ್ಲ.. ಯಾಕೋ ಇಂದು ನಾನು ಪರಿಮಳ ಚಿರು ಬಗ್ಗೆ ಮಾತಾಡುತ್ತಾ “ಏನ್ ಹುಡುಗರೋ, ಮದುವೆ ಆದಮೇಲೆ ಯಾಕೆ Gap.? ಇಷ್ಟೊತ್ತಿಗೆ Good News ಬೇಕಿತ್ತು” ಎಂದು ಮಾತಾಡಿಕೊಂಡೆವು.! ಮಧ್ಯಾಹ್ನ ಊಟ ಮಾಡಿ ಮಲಗಿದೆ.. ಚಾಲಕ ಪದ್ದು ಕರೆಮಾಡಿ, Boss TV ನೋಡಿದ್ರಾ..? ಚಿರು ಹೋಗಿಬಿಟ್ಟಾ ಎಂದ.. ಕೇಳಿ ಹುಚ್ಚನಂತೆ ಅತ್ತುಬಿಟ್ಟೆ.. ಇಷ್ಟೇನಾ ಬದುಕು.? ಇದಕ್ಕಾ ನಮ್ಮ ಹೋರಾಟ..? ನಮ್ಮಂಥ ಹಿರಿಯರು ನಮ್ಮ ಕಣ್ಣ ಮುಂದಿನ ಕಿರಿಯರ ಸಾವು ನೋಡಬೇಕೆ.? ಎಂಥ ದೌರ್ಭಾಗ್ಯ..! ಶಂಕರ್ ನಾಗ್ ಇದೇ 39ನೇ ವಯಸ್ಸಿಗೆ ಕಾಲವಾದರು.. ಆ ಸಾಲಿಗೆ ಚಿರು ಸೇರಿಬಿಟ್ಟನೆ..! ? ಹುಟ್ಟಿಗೆ ಸಾವು ಖಚಿತ.. ಆದರೆ ಇಷ್ಟು ಬೇಗವೇ.!? ಓ ದೇವರೆ ಈ ಸಾವು ನ್ಯಾಯವೆ.!? ? ದುಃಖದಿಂದ ವಿದಾಯ ಕಲಾಬಂಧುವಿಗೆ.. ಓಂಶಾಂತಿ!

A post shared by ??????? ????????????? (@actor_jaggesh) on

ಚಾಲಕ ಪದ್ದು ಕರೆಮಾಡಿ, ‘ಬಾಸ್‌ ಟೀವಿ ನೋಡಿದ್ರಾ..? ಚಿರು ಹೋಗಿಬಿಟ್ಟಾ,’ ಎಂದ. ಕೇಳಿ ಹುಚ್ಚನಂತೆ ಅತ್ತುಬಿಟ್ಟೆ. ಇಷ್ಟೇನಾ ಬದುಕು? ಇದಕ್ಕಾ ನಮ್ಮ ಹೋರಾಟ.? ನಮ್ಮಂಥ ಹಿರಿಯರು ನಮ್ಮ ಕಣ್ಣ ಮುಂದಿನ ಕಿರಿಯರ ಸಾವು ನೋಡಬೇಕೆ? ಎಂಥ ದೌರ್ಭಾಗ್ಯ? ಶಂಕರ್ ನಾಗ್ ಇದೇ 39ನೇ ವಯಸ್ಸಿಗೆ ಕಾಲವಾದರು. ಆ ಸಾಲಿಗೆ ಚಿರು ಸೇರಿಬಿಟ್ಟನೆ?

ಹುಟ್ಟಿಗೆ ಸಾವು ಖಚಿತ. ಆದರೆ ಇಷ್ಟು ಬೇಗವೇ? ಓ ದೇವರೆ ಈ ಸಾವು ನ್ಯಾಯವೆ? ಈ ರೀತಿಯಾಗಿ ನವರಸನಾಯಕ ಜಗ್ಗೇಶ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

Advertisement
Share this on...