ತಪ್ಪು ತಿಳಿದು ತೆಲುಗು ನಟ ಚಿರಂಜೀವಿಗೆ ಶ್ರದ್ಧಾಂಜಲಿ ಕೋರಿದ ಖ್ಯಾತ ಲೇಖಕಿ…! ಯಾರು ಗೊತ್ತಾ ?

in News/ಮನರಂಜನೆ 131 views

ಭಾನುವಾರ ಮಧ್ಯಾಹ್ನ ಬಂದ ಸುದ್ದಿಯೊಂದು ರಾಜ್ಯದ ಜನರಿಗೆ ಆಘಾತ ಉಂಟುಮಾಡಿತ್ತು. ಏನು ಚಿರಂಜೀವಿ ಸರ್ಜಾ ನಿಧನರಾದ್ರಾ, ಹೀಗಾಗಬಾರದಿತ್ತು. ಅವರು ಮದುವೆಯಾಗಿ 2 ವರ್ಷಗಳಾಗಿವೆ ಅಷ್ಟೇ, ವಿಧಿ ಈ ರೀತಿ ಮಾಡಬಾರದು ಎಂದು ನೊಂದುಕೊಂಡವರೇ ಎಲ್ಲರೂ.ಇನ್ನು ಚಿರಂಜೀವಿ ಸರ್ಜಾ ನಿಧನರಾದ ಸುದ್ದಿ ಇತರ ಭಾಷೆಗಳ ಮಾಧ್ಯಮಗಳಲ್ಲಿ ಕೂಡಾ ಪ್ರಸಾರವಾಗಿತ್ತು. ಆದರೆ ಆರಂಭದಲ್ಲಿ ಚಿರಂಜೀವಿ ಸರ್ಜಾ ಅವರನ್ನು ತೆಲುಗು ನಟ ಚಿರಂಜೀವಿ ಎಂದು ತಪ್ಪು ತಿಳಿದವರೇ ಹೆಚ್ಚು. ಖ್ಯಾತ ಲೇಖಕಿ ಶೋಭಾ ಡೇ ಒಂದು ಹೆಜ್ಜೆ ಮುಂದೆ ಹೋಗಿ ಮೆಗಾಸ್ಟಾರ್ ಅವರ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡುವ ಮೂಲಕ ಅವರಿಗೆ ಶ್ರದ್ಧಾಂಜಲಿ ಕೋರಿಯೇ ಬಿಟ್ರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಶೋಭಾ ಅವರಿಗೆ ಕರೆ ಮಾಡಿದ ಸ್ನೇಹಿತರು ನಿಧನರಾಗಿದ್ದು ಯಾರು ಎಂಬುದನ್ನು ತಿಳಿಸಿದ್ದಾರೆ. ಕೂಡಲೇ ತಾವು ಮಾಡಿದ ಎಡವಟ್ಟು ಅರಿವಾಗುತ್ತಿದ್ದಂತೆ ಶೋಭಾ ಡೇ ತಾವು ಮಾಡಿದ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಅವರು ಮಾಡಿದ ಪೋಸ್ಟ್​​​ ಸ್ಕ್ರೀನ್​ಶಾಟ್​​​ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Advertisement

 

Advertisement

Advertisement

ಇದು ಇಷ್ಟಕ್ಕೇ ಮುಗಿಯಲಿಲ್ಲ. ಮೆಗಾಸ್ಟಾರ್ ಅಭಿಮಾನಿಗಳು ಹಾಗೂ ಟ್ರೋಲ್ ಪೇಜ್​​​ಗಳು ಇದನ್ನೇ ಕಾಯುತ್ತಿದ್ದವಂತೆ ಶೋಭಾ ಅವರನ್ನು ಬಹಳ ಟ್ರೋಲ್ ಮಾಡುತ್ತಿದ್ಧಾರೆ. ‘ಮತ್ತೊಬ್ಬರು ಶೈನಿಂಗ್ ಸ್ಟಾರನ್ನು ನಾವು ಕಳೆದುಕೊಂಡಿದ್ದೇವೆ. ಇದು ಚಿತ್ರರಂಗಕ್ಕೆ ನಿಜಕ್ಕೂ ಆಘಾತ. ಅವರ ಕುಟುಂಬಕ್ಕೆ ದೇವರು ದು:ಖ ಭರಿಸುವ ಶಕ್ತಿ ನೀಡಲಿ @Chirusarja’ಎಂದು ಶೋಭಾ ಡೇ ಟ್ವೀಟ್ ಮಾಡಿದ್ದರು.

Advertisement

 

ಶೋಭಾ ರಾಜಾಧ್ಯಕ್ಷ ಈಗ ಶೋಭಾ ಡೇ ಎಂದೇ ಫೇಮಸ್. ಮಹಾರಾಷ್ಟ್ರಕ್ಕೆ ಸೇರಿದ ಇವರು ಅನೇಕ ಲೇಖನ, ಕಾದಂಬರಿಗಳನ್ನು ಬರೆದಿದ್ದಾರೆ. ಸೇಠ್ ಜಿ, ಶೋಭಾ ಅಟ್ 60, ಸಂಧ್ಯಾಸ್ ಸೀಕ್ರೇಟ್, ಸ್ನ್ಯಾಪ್​ಶಾಟ್, ಸ್ಪೀಡ್​ಪೋಸ್ಟ್, ಸಿಸ್ಟರ್ಸ್ ಸೇರಿ ಅನೇಕ ಪುಸ್ತಕಗಳನ್ನು ಶೋಭಾ ಬರೆದಿದ್ದಾರೆ. ಕೆಲವೊಂದು ವಿವಾದದಲ್ಲಿ ಕೂಡಾ ಶೋಭಾ ಡೇ ಸಿಲುಕಿದ್ದರು.

Advertisement
Share this on...