ಚಿರು ಸಾವಿನ ಪೋಸ್ಟ್ ಗಳನ್ನು ನೋಡಿ ಇನ್ಸ್ಟಾಗ್ರಾಮ್ ಮಾಡಿರುವ ಕೆಲಸ ನೀವೆ ನೋಡಿ !

in ಕನ್ನಡ ಮಾಹಿತಿ/ಸಿನಿಮಾ 141 views

ಕನ್ನಡದ ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಅವರು ನಮ್ಮನ್ನು ಅಗಲಿ ತಿಂಗಳು ಕೆಳೆದಿದೆ. ಅವರ ಸಾವನ್ನು ಕರುನಾಡ ಜನತೆಯಿಂದ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಇದೀಗ ಸಾಮಾಜಿಕ ಜಾಲತಾಣದ ಮೋಸ್ಟ್ ಫೇವರೇಟ್ ಅಪ್ಲಿಕೇಶನ್ ಆದ ಇನ್ಸ್ಟಾಗ್ರಾಮ್ ಕಂಪನಿಯು ಚಿರು ಅವರಿಗೆ ದೊಡ್ಡ ಮಟ್ಟದಲ್ಲಿ ಗೌರವ ತೋರುವ ಮುಖಾಂತರ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಕಳೆದ ತಿಂಗಳು ಚಿರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಭೂಮಿಗೆ ವಿಧಾಯ ಹೇಳಿ ಕುಟುಂಬಸ್ಥರನ್ನು ಶೋಕದಲ್ಲಿ ಮುಳುಗಿಸಿದ್ದಾರೆ.  ಮಡದಿ ಮೇಘಾನ ಅವರ ಆಕ್ರಂಧನ ಮುಗಿಲು ಮುಟ್ಟಿತ್ತು. ಇದೀಗ ನಿಧಾನವಾಗಿ  ಚೇತರಿಸಿಕೊಳ್ಳುತ್ತಿರುವ ಮೇಘನಾ, ಚಿರು ಅವರ ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ಖಾತೆಯನ್ನು ತಾವೇ ಉಪಯೋಗಿಸುತ್ತಿದ್ದಾರೆ. ತಮ್ಮ ಮನದಾಳದ ಮಾತನ್ನು ಚಿರು ಅವರ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಚಿರು ಇಲ್ಲ ಎಂಬ ಭಾವನೆ ಬಾರದಂತೆ ಸಾಮಾಜಿಕ ಜಾಲತಾಣದ ಅಕೌಂಟ್ ಅನ್ನು ಜೀವಂತವಾಗಿರಿಸಿದ್ದಾರೆ.

Advertisement

Advertisement

ಇನ್ನು ಚಿರು ಸಾವನ್ನು ಯುವ ಪೀಳಿಗೆಯಿಂದ ತಡೆದುಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಇಂದಿಗೂ ಕೂಡ ಚಿರು ಕುರಿತು ಕೆಲವೊಂದು ಭಾವನಾತ್ಮಕ ಪದಗಳನ್ನು ಬರೆದು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಳೆದ ತಿಂಗಳಿಂದ ಚಿರು ಅವರ ಬಗ್ಗೆ ಪೋಸ್ಟ್ ಗಳು ಮತ್ತು ಟ್ಯಾಗ್ ಗಳು ಹಾಗೂ ಅವರಿಗೆ ನಮನ ಸಲ್ಲಿಸುವ ಸಲುವಾಗಿ ಹಂಚಿಕೊಂಡಿದ್ದ ಸಾವಿರಾರು ಫೋಟೋಗಳು ಪೋಸ್ಟ್ ಆಗುತ್ತಲೆ ಇವೆ.  ಇದೆಲ್ಲವನ್ನು ಗಮನಿಸಿದಂತಹ  ಇನ್ಸ್ಟಾಗ್ರಾಮ್ ಇದೀಗ ತಿಂಗಳ ಬಳಿಕ ಚಿರು ಸರ್ಜಾ ಅವರಿಗೆ ಅಂತಿಮ ಗೌರವ ಸಲ್ಲಿಸಿದೆ.  ಇದೀಗ ಇನ್ಸ್ಟಾಗ್ರಾಂ ತನ್ನ ಗೌರವ ಸಲ್ಲಿಸಿ ಚಿರಂಜೀವಿ ಅವರ ಖಾತೆಯನ್ನು  ಚಿರಸ್ಮರಣೀಯ ಗೊಳಿಸಿದೆ. ಅದು ಹೇಗೆ ಎಂದರೆ  ಇನ್ನು ಮುಂದೆ ಚಿರಂಜೀವಿ ಸರ್ಜಾ ಅವರ ಇನ್ಸ್ಟಾಗ್ರಾಂ ಖಾತೆಯ  ಕೆಳಗೆ ‘ರಿಮೆಂಬರಿಂಗ್’ ಎಂದು ಬರಲಿದ್ದು ಇನ್ನೆಂದೂ ಚಿರು ಅವರ ಖಾತೆಯನ್ನು ಯಾರೂ ಸಹ ಡಿಲೀಟ್ ಮಾಡಲು ಅಥವಾ ಲಾಗ್ ಇನ್ ಆಗಲು ಸಾಧ್ಯವಿಲ್ಲ‌‌. ಮತ್ತು ಯಾವುದೇ ರೀತಿಯಾಗಿ ಪೋಸ್ಟ್ ಮಾಡಲು ಕೂಡ ಸಾಧ್ಯವಿಲ್ಲ.

Advertisement

Advertisement

ಚಿರಕಾಲ ಚಿರು ಅವರು ಮಾಡಿರುವ ಪೋಸ್ಟ್ ಗಳು,  ಕಮೆಂಟ್ ಗಳು  ಹಾಗೆಯೇ ಇರಲಿವೆ.. ಇದನ್ನು ನೋಡಿದ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಸಂತಸವಾಗಿದೆ ಎಂದೇ ಹೇಳಬಹುದು. ತಮ್ಮ ನೆಚ್ಚಿನ ನಟನನ್ನು ಈ ರೀತಿಯಾದರು ನೆನಪಿನಲ್ಲಿ ಇಟ್ಟುಕೊಳ್ಳಬಹುದು ಎಂದು. ಹಾಗೂ ಇನ್ಸ್ಟಾಗ್ರಾಮ್ ಮಾಡಿರುವ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಇನ್ಸ್ಟಾಗ್ರಾಂ ಈ ಗೌರವವನ್ನು ಸಲ್ಲಿಸಿತ್ತು..  ಇದೀಗ ಚಿರು ಅವರ ಅಕೌಂಟ್ ಅನ್ನು ಸಹ ರಿಮೆಂಬರಿಂಗ್ ಮಾಡುವ ಮೂಲಕ‌ ಇಂದು ಚಿರು ಸರ್ಜಾ ಅವರಿಗೆ ತನ್ನ ಗೌರವ ಸಲ್ಲಿಸಿದೆ.

Advertisement
Share this on...