ನಟಿ ಚಿತ್ರಾ ಶೆಣೈರವರ ಬಗ್ಗೆ ನಿಮಗೆ ಗೊತ್ತಾ…?

in ಮನರಂಜನೆ 221 views

ಚಿತ್ರಾ ಶೆಣೈ ವಯಸ್ಸಾದಂತೆ ಹೆಚ್ಚು ಹೆಚ್ಚು ಎನರ್ಜಿಟಿಕ್ ಆಗಿ ಕಾಣುವ ನಟಿ ಇವರು. ಇವರನ್ನು ನೋಡಿದರೆ ಹೊಸ ಹುಮ್ಮಸ್ಸು ಹುಟ್ಟುತ್ತದೆ. ತಮ್ಮ ಮಾತುಗಳ ಮೂಲಕ ತನ್ನ ಸುತ್ತಮುತ್ತ ಇರುವವರನ್ನು ಲವಲವಿಕೆಯಿಂದ ಇರಿಸುವ ಇವರು ಕನ್ನಡದ ಅಪರೂಪದ ನಟಿ. 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕನ್ನಡದ ಕೆಲವೇ ಕೆಲವು ನಟಿಯರಲ್ಲಿ ಚಿತ್ರಾ ಅವರು ಕೂಡ ಒಬ್ಬರು. ಕನ್ನಡ, ತಮಿಳಿನಲ್ಲಿ ಸಖತ್ ಫೇಮಸ್ ಆಗಿರುವ ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ ಗೊತ್ತಾ…?
ಚಿತ್ರಾರವರು ಮೂಲತಃ ಹಾಸನದವರು. ಚಿಕ್ಕವಯಸ್ಸಿನಿಂದ ನಟನೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದ ಇವರು ತಾನು ಇಷ್ಟು ದೊಡ್ಡ ನಟಿಯಾಗುತ್ತೇನೆ ಎಂದು ಕನಸಲ್ಲೂ ಊಹಿಸಿರಲಿಲ್ಲ. 1980 ರಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ ಚಿತ್ರಾರವರಿಗೆ ದೂರದರ್ಶನದ ಸೀರಿಯಲ್ ನಲ್ಲಿ ಒಂದು ಪಾತ್ರ ಸಿಕ್ಕಿತ್ತು. ಆ ಪಾತ್ರ ಏನು ಗೊತ್ತಾ…?
ಗಾಯಗೊಂಡಿರುವ ಹೀರೋ ಪಕ್ಕದಲ್ಲಿ ನಿಂತುಕೊಳ್ಳುವುದು. ಅದರಲ್ಲಿ ಚಿತ್ರಾರವರಿಗೆ ಒಂದು ಡೈಲಾಗ್ ಕೂಡ ಇರಲಿಲ್ಲ ಆದರೆ ಆ ಎಪಿಸೋಡ್ ದೂರದರ್ಶನದಲ್ಲಿ ಪ್ರಸಾರವಾದ ಮೇಲೆ ಚಿತ್ರಾರವರಿಗೆ ಅದೃಷ್ಟ ಖುಲಾಯಿಸಿತು. ಅವಕಾಶಗಳು ಬರತೊಡಗಿದವು. ಅದರ ಭಾಗವಾಗಿ ‘ಮೌನ ಹೋರಾಟ’ ಅನ್ನುವ ಸಿನಿಮಾದಲ್ಲಿ ನಟಿಸಿದ್ದರು ನಟಿ ಚಿತ್ರಾರವರು.

Advertisement

 

Advertisement


ನಂತರ ಮೂರು ವರ್ಷ ಗ್ಯಾಪ್ ತೆಗೆದುಕೊಂಡು ತಂದೆಯ ಮಾತಿನಂತೆ ಡಿಗ್ರಿ ಮುಗಿಸಿದ ಚಿತ್ರಾರವರು ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟರು. ಅವತ್ತು ನಟನೆಯನ್ನು ಸ್ಟಾರ್ಟ್ ಮಾಡಿದ ಇವರು ಈಗಲೂ ಬಿಜಿ಼ ನಟಿಯಾಗಿದ್ದಾರೆ. ಡೈರೆಕ್ಟರ್ ಹಾಗೂ ಪ್ರೊಡ್ಯೂಜ಼ರ್ ಆಗಿರುವ ಗುರುದಾಸ್ ರವರನ್ನು ಮದುವೆಯಾಗಿರುವ ಚಿತ್ರಾರವರಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ. ಅವಳ ಹೆಸರು ಖುಷಿ ಶೆಣೈ. ಹತ್ತಾರು ಸೀರಿಯಲ್ ಗಳಲ್ಲಿ ನಟಿಸಿರುವ ಚಿತ್ರಾರವರು ಎರಡು ಪ್ರೊಡಕ್ಷನ್ ಕಂಪನಿಗಳನ್ನು ತೆರೆದಿದ್ದು ಅದರ ಮೂಲಕ ಸೀರಿಯಲ್ ಗಳನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ.

Advertisement

 

Advertisement


ಮಳೆಯಾಳಂ ನಲ್ಲಿ ಸಖತ್ ಫೇಮಸ್ ಆಗಿರುವ ಚಿತ್ರಾರವರು ಈಗ ಅಲ್ಲಿ ಎರಡು ಧಾರವಾಹಿಗಳನ್ನು ತಮ್ಮ ಪ್ರೋಡಕ್ಷನ್ ಕಂಪನಿಯ ಅಂಡರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಕುಟುಂಬಕ್ಕೆ ಹೆಚ್ಚು ಒತ್ತು ಕೊಡುವ ಚಿತ್ರಾರವರು ಸಮಯ ಸಿಕ್ಕಾಗಲೆಲ್ಲಾ ಮಗಳ ಜೊತೆ ಆಟವಾಡುತ್ತ ಕಾಲ ಕಳೆಯುತ್ತಾರೆ. 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಹತ್ತಾರು ಸೀರಿಯಲ್ ಗಳಲ್ಲಿ ಪೋಷಕ ನಟಿಯಾಗಿ ಚಿತ್ರಾ ಶಣೈರವರು ನಟಿಸಿದ್ದಾರೆ. ಇಷ್ಟು ವಯಸ್ಸಾದರೂ ಚಿತ್ರಾರವರು ಈಗಲೂ ಸಹ ಸಿನಿಮಾ ಸೇಟ್ ನಲ್ಲಿ ಲವಲವಿಕೆಯಿಂದಿರುತ್ತಾರೆ.

– ಸುಷ್ಮಿತಾ

Advertisement
Share this on...