ಚಿತ್ರವೊಂದರ ಅಂತರಂಗ ಅರಿಯಲು ಪೂರ್ತಿ ಚಿತ್ರ ನೋಡಬೇಕಿಲ್ಲ ! ಚಿತ್ರದ ಟೀಸರ್ ಕುತೂಹಲ ಹುಟ್ಟುಹಾಕಿದೆ..

in Uncategorized 48 views

ಚೌಕಿ ದಕ್ಷಿಣ ಕನ್ನಡದ ಗಂಡುಕಲೆ ಯಕ್ಷಗಾನಧಾರಿತ ಚಿತ್ರ. ಹೊಸಬರನ್ನೇ ಸೇರಿಸಿಕೊಂಡು , ಯಕ್ಷಗಾನಕ್ಕೆ ಅದರ ನೈಜತೆಗೆ ಒತ್ತುಕೊಟ್ಟು ಚಿತ್ರ ಮಾಡಿದ್ದಾರೆ ನಿರ್ದೇಶಕ ಜಯ ಪ್ರಕಾಶ್ ರವರು. ಒಬ್ಬ ಕಲಾವಿದನ ಪಾತ್ರ ಮತ್ತು ಅವನ ವ್ಯಕ್ತಿತ್ವ ಇವೆರಡರ ನಡುವಿನ ದ್ವಂದತೆ ಯನ್ನಿಟ್ಟುಕೊಂಡು ಚೌಕಿಯ ಕಥೆಗೆ ಪೂರಕವಾಗಿ ಪೋಸ್ಟರ್ ಮಾಡಿ ಜೀವ ತುಂಬಿದ್ದು ಹಾಸನ ದ ಸುಹಾಸ್ ರವರು . ಅದು ಜನಮನ್ನಣೆಯನ್ನು ಗಳಿಸಿದ್ದು ಸತ್ಯ. ಚಿತ್ರವೊಂದರ ಅಂತರಂಗ ಅರಿಯಲು ಪೂರ್ತಿ ಚಿತ್ರ ನೋಡಬೇಕಿಲ್ಲ, ಅದರ ಒಟ್ಟು ಆಶಯ ಒಂದು ಸಂಭಾಷಣೆ ಅಥವಾ ಒಂದು ದೃಶ್ಯ ದಲ್ಲಿಯೋ ಅಡಗಿರಬಹುದು . ಅದನ್ನರಿಯುವ ಪ್ರೇಕ್ಷಕನಿರಬೇಕಷ್ಟೆ . ಯಾವ ಸುಳಿವನ್ನೂ ಬಿಟ್ಟುಕೊಡದೆ ಪ್ರೇಕ್ಷಕನ ಮನಸ್ಸಿಗೆ ಅದರಲ್ಲೂ ಕಲಾವಿದನಿಗೆ ಕುತೂಹಲ ಹುಟ್ಟುಹಾಕುವಲ್ಲಿ ಚಿತ್ರ ಗೆದ್ದಿದೆ ಎಂದು ಇದಾಗಲೇ ಬಿಡುಗಡೆಗೊಂಡಿರುವ ಚಿತ್ರದ ಟೀಸರ್ ಗೆ ಬಂದಿರುವ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳೇ ಸಾಕ್ಷಿ .

Advertisement

Advertisement

ಕಲಾತ್ಮಕತೆಯ ಜೊತೆಗೆ ಕಮರ್ಷಿಯಲ್ ಟಚ್ ಕೊಟ್ಟು ತಯಾರಾಗಿದೆ ಚೌಕಿ .ಯಾಕೆಂದರೆ ಚಿತ್ರದ ಕಥಾಹಂದರವೇ ಅಂತಹುದು . ಇಲ್ಲಿ ಕಥೆಯೇ ಕಥಾನಾಯಕ . ಯಕ್ಷಗಾನವೇ ಜೀವನ ಚೌಕಿಯೇ ತನ್ನ ಪ್ರಪಂಚ ಅಲ್ಲಿ ಯಾರಿಗೂ ಜಾಗವಿಲ್ಲ, ಪಾತ್ರ ಮತ್ತು ಪಾತ್ರಧಾರಿಯ ಮನಸ್ಸಿನ ಹೊಯ್ದಟ ಅದರೊಳಗಿನ ಅನಿರೀಕ್ಷಿತ ತಿರುವನ್ನು. ಅಪರೂಪದ ವ್ಯಕ್ತಿತ್ವವನ್ನು ಇಟ್ಟುಕೊಂಡು ಚಿತ್ರ ಮಾಡಿದ್ದಾರೆ ನಿರ್ದೇಶಕರು . ಚಿತ್ರ ಇಷ್ಟವಾಗಲು ಮತ್ತೊಂದು ಕಾರಣ ಚಿತ್ರದ ಹಾಡುಗಳು. ಬಿಡುಗಡೆಗೊಂಡ ಎಲ್ಲ ಹಾಡುಗಳು ಲಕ್ಷಕ್ಕೂ ಅಧಿಕ ಪ್ರೇಕ್ಷರಿಂದ ವೀಕ್ಷಿಸಲ್ಪಟ್ಟು ಅಭೂತವಾದ ಪ್ರಶಂಶೆಗಳ ಸುರಿಮಳೆ ಸುರಿಯಲು ಕಾರಣ ನಿಶ್ಚಲ್ ದಂಬೆಕೋಡಿ ಹಾಗು ವಿಜೇಶ್ ದೇವಾಡಿಗ ರವರ ಅದ್ಭುತ ಸಾಹಿತ್ಯವೂ ಹೌದು , ಜೊತೆಗೆ ರಾಜೇಶ್ ಕೃಷ್ಣನ್ , ಅನುರಾಧಭಟ್, ಪ್ರಿಯ ಯಾದವ್, ಹಾಗು ಚೇತನ್ ರಾಮ್ ರವರ ಕಂಠ ಸಿರಿಯೂ ಹಾಗು ಸಂಗೀತ ನಿರ್ದೇಶಕ ಶಕೀಲ್ ಅಹ್ಮದ್ ರವರ ಸಂಗೀತ ಮಾಂತ್ರಿಕತೆಯೂ ಹೌದು.

Advertisement

Advertisement

ಡ್ರೀಮ್ಸ್ ಸ್ಟುಡಿಯೋ ದ ನಿರ್ಮಾಣ ಚಾಮುಂಡೇಶ್ವರಿ ಸ್ಟುಡಿಯೋ ದ ಸಹಕಾರದೊಂದಿಗೆ ತಯಾರಾಗಿರುವ ಈ ಚಿತ್ರಕ್ಕೆ ಬೆನ್ನೆಲುಬು ಎಂಬಂತೆ ರಾಷ್ಟ್ರೀಯ ಪುರಸ್ಕೃತ ವಿಜೇತ M N ಸ್ವಾಮಿ ಯವರ ಸಂಕಲನವಿದೆ . ಚೌಕಿಗೆ ಮತ್ತೊಂದು ಗರಿ ಶಕೀಲ್ ಅಹ್ಮದ್ ರವರ ಹಿನ್ನಲೆ ಸಂಗೀತ. ಯಕ್ಷಗಾನದ ಲೋಪದೋಷಗಳ ಜೊತೆಗೆ ಪ್ರೇಮಕಥೆಯನ್ನು ಹೇಳುವ ಭಿನ್ನ ಸಿನೆಮ ಇದು. ಪರಾಕಾಯ ಪ್ರಕಾರದ ತಲ್ಲಣದ ಪಾತ್ರದ ಸೃಷ್ಟಿ ಯೇ ಚಿತ್ರಕ್ಕೆ ಬೆನ್ನೆಲುಬು. ಸಿನೆಮಾ ಪ್ರೇಕ್ಷಕರಿಗೆ ಚೌಕಿ ಹೊಸದಾಗಿ ಕಾಣುವುದರಲ್ಲಿ ಎರಡು ಮಾತಿಲ್ಲ . ಚಿತ್ರ ವೀಕ್ಷಿಸಿ ಗೆಲ್ಲಿಸಿ …

ದೇರಳಕಟ್ಟೆ ಸುರೇಶ್ ಮಂಗಳೂರು
(ಚೌಕಿ ಚಿತ್ರದ ಛಾಯಾಗ್ರಹಕ )

Advertisement
Share this on...