uppi aayudhapooja

ಇದು ಕನ್ನಡ ಸೆಲೆಬ್ರಿಟಿ ಮನೆಯ ಆಯುಧಪೂಜಾ ಫೋಟೊ ..! ಯಾರದಿರಬಹುದು ಕಮೆಂಟ್ ಮಾಡಿ ನೋಡೋಣ ?

in ಮನರಂಜನೆ/ಸಿನಿಮಾ 544 views

ಅಕ್ಟೋಬರ್ ಬಂತು ಎಂದರೆ ದೇಶಾದ್ಯಂತ ನವರಾತ್ರಿ ಸಂಭ್ರಮ. ಒಂದೊಂದು ರಾಜ್ಯದಲ್ಲೂ ಒಂದೊಂದು ರೀತಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಕೂಡಾ 9 ದಿನಗಳ ಕಾಲ ನವರಾತ್ರಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ದೇವಿಯ ಒಂದೊಂದು ಅವತಾರಗಳನ್ನು ಈ ಒಂಭತ್ತೂ ದಿನಗಳು ಪೂಜಿಸಲಾಗುತ್ತದೆ. ಮೈಸೂರಿನಲ್ಲಿ ದಸರಾ ಅಂಗವಾಗಿ ಜಂಬೂ ಸವಾರಿ ಮಾಡಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಕಾರಣದಿಂದ ಜಂಬೂ ಸವಾರಿಯನ್ನು ಅರಮನೆ ಒಳಗಷ್ಟೇ ಸೀಮಿತ ಮಾಡಲಾಗಿದೆ. ಬಹಳಷ್ಟು ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಲಾಗುತ್ತದೆ. ಆಯುಧಪೂಜೆಯಂದು ತಮ್ಮ ವಾಹನಗಳಿಗೆ ಹಾಗೂ ತಮ್ಮ ಜೀವನಕ್ಕೆ ಆಧಾರವಾಗಿರುವ ಸಾಧನಗಳಿಗೆ ಪೂಜೆ ಮಾಡುವ ಮೂಲಕ ಭಕ್ತಿ ಮೆರೆಯುತ್ತಾರೆ. ಅಷ್ಟೇ ಅಲ್ಲ ತಮ್ಮ ಆತ್ಮೀಯರಿಗೆ ಬನ್ನಿ ನೀಡಿ ಶುಭ ಕೋರಲಾಗುತ್ತದೆ. ವಿಜಯದಶಮಿಯಂದು ಕೂಡಾ ಈ ಸಂಭ್ರಮ ಮುಂದುವರೆಯುತ್ತದೆ. ಇನ್ನು ಹಬ್ಬ ಎಂದರೆ ಅದು ಜನ ಸಾಮಾನ್ಯರಿಗೆ ಮಾತ್ರವಲ್ಲ ಸೆಲಬ್ರಿಟಿಗಳಿಗೂ ಸಂಭ್ರಮ. ಸೆಲಬ್ರಿಟಿಗಳು ಕೂಡಾ ತಮ್ಮ ಕುಟುಂಬ ಹಾಗೂ ಬಂಧು ಬಳಗದೊಂದಿಗೆ ಪ್ರತಿ ಹಬ್ಬವನ್ನು ಬಹಳ ಸಡಗರದಿಂದ ಆಚರಿಸುತ್ತಾರೆ.

Advertisement

Advertisement

ಆಯುಧಪೂಜೆಯಂದು ಸೆಲಬ್ರಿಟಿಗಳು ತಮ್ಮ ತಮ್ಮ ವಾಹನಗಳಿಗೆ ಅಲಂಕಾರ ಮಾಡಿ ಪೂಜೆ ಪುನಸ್ಕಾರ ನೆರವೇರಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಕೂಡಾ ನಿನ್ನೆ ತಮ್ಮ ಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ್ದಾರೆ. ಉಪೇಂದ್ರ, ಪತ್ನಿ ಪ್ರಿಯಾಂಕ, ಮಕ್ಕಳು, ತಂದೆ ತಾಯಿ, ಅಣ್ಣ, ಅತ್ತಿಗೆ ಹಾಗೂ ಅವರ ಇಬ್ಬರು ಮಕ್ಕಳೊಂದಿಗೆ ಸಂತೋಷವಾಗಿ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಉಪೇಂದ್ರ ಕುಟುಂಬದ ಆಯುಧಪೂಜೆ ಫೋಟೋಗಳನ್ನು ಪ್ರಿಯಾಂಕ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ವಾಹನಗಳು, ಮನೆಯೊಳಗೆ ಬಳಸುವ ಕುಡುಗೋಲು, ಸುತ್ತಿಗೆ, ಗರಗಸ ಹಾಗೂ ಇನ್ನಿತರ ವಸ್ತುಗಳನ್ನು ಇಟ್ಟು ಉಪೇಂದ್ರ ಕುಟುಂಬ ಪೂಜೆ ಮಾಡಿದೆ.

Advertisement

 

Advertisement

ಉಪೇಂದ್ರ ಹಾಗೂ ಕುಟುಂಬ ಪ್ರತಿ ಹಬ್ಬವನ್ನೂ ಬಹಳ ಸಡಗರದಿಂದ ಆಚರಿಸುತ್ತಾರೆ. ವರ್ಷದ ಮೊದಲ ಹಬ್ಬ ಸಂಕ್ರಾಂತಿಯಿಂದ ಹಿಡಿದು ಕೊನೆಯ ಹಬ್ಬ ದೀಪಾವಳಿಯವರೆಗೆ ಮನೆಯವರೆಲ್ಲಾ ಜೊತೆ ಸೇರಿ ಒಟ್ಟಿಗೆ ಹಬ್ಬವನ್ನು ಆಚರಿಸಲಾಗುತ್ತದೆ. ಗೌರಿ ಹಬ್ಬ, ವರಮಹಾಲಕ್ಷ್ಮಿ ಹಬ್ಬದಂದು ನೆರೆಹೊರೆಯವರನ್ನು ಕರೆದು ಬಾಗಿನ ನೀಡಿ ಸಂಪ್ರದಾಯಬದ್ಧವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಭೀತಿ ಇರುವ ಕಾರಣ ಕುಟುಂಬದ ಸದಸ್ಯರು ಮಾತ್ರ ಹಬ್ಬವನ್ನು ಬಹಳ ಸರಳವಾಗಿ ಆಚರಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಉಪೇಂದ್ರ ಕಬ್ಜ ಚಿತ್ರದಲ್ಲಿ ಬ್ಯುಸಿ ಇದ್ಧಾರೆ. ಆರ್. ಚಂದ್ರು ನಿರ್ದೇಶನದ ಈ ಸಿನಿಮಾ 7 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಕೂಡಾ ಸೂಪರ್ ಸ್ಟಾರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ಉಪೇಂದ್ರ, ತನ್ನ ಅಣ್ಣನ ಮಗನಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಸುಧೀಂದ್ರ ಈ ಚಿತ್ರದಲ್ಲಿ ಡ್ಯಾನ್ಸರ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಒಟ್ಟಿನಲ್ಲಿ ಸ್ವಲ್ಪ ಸಿರಿತನ ದೊರೆತರೂ ತಾವು, ತಮ್ಮವರು ಎಂಬುದನ್ನು ಮರೆತು ಸ್ವಾರ್ಥದಿಂದ ಬದುಕುವವರ ನಡುವೆ ದೊಡ್ಡ ಸ್ಟಾರ್ ಆದರೂ ತುಂಬು ಕುಟುಂಬದಲ್ಲಿ ಜೀವಿಸುತ್ತಿರುವ ಉಪೇಂದ್ರ ದಂಪತಿಗೆ ಹ್ಯಾಟ್ಸಾಫ್ ಹೇಳಲೇಬೇಕು.

Advertisement
Share this on...