17 ರಿಂದ ಕಾಲೇಜ್ ಪ್ರಾರಂಭ: ಹೋಗೋದು ಬಿಡೋದು ವಿದ್ಯಾರ್ಥಿಗಳಿಗೆ ಬಿಟ್ಟದ್ದು

in ಕನ್ನಡ ಮಾಹಿತಿ/ರಾಜಕೀಯ 422 views

ಬೆಂಗಳೂರು: ನವೆಂಬರ್ 17 ರಿಂದ ಪದವಿ ಕಾಲೇಜು ಪ್ರಾರಂಭಿಸಲು ಸರ್ಕಾರದ ನಿರ್ಧರಿಸಿದ್ದು, ಕ್ಲಾಸ್ ಗಾದ್ರೂ ಹೋಗಬಹುದು, ಆನ್ ಲೈನ್ ಕ್ಲಾಸ್ ಆದ್ರೂ ಅಟೆಂಡ್ ಮಾಡಬಹುದು ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಹೇಳಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಪದವಿ ಕಾಲೇಜುಗಳನ್ನು ಪ್ರಾರಂಭಿಸುವ ಕುರಿತಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಭೆ ನಡೆಸಲಾಯಿತು. ಡಿಜಿಟಲ್ ಲರ್ನಿಂಗ್–ಎಲ್ ಎಂ ಎಸ್ ಬಗ್ಗೆಯೂ ಇಲಾಖೆಯ ಆಯುಕ್ತರು ವಿವರಿಸಿದರು. ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವಂತೆ ಟ್ಯಾಬ್ಲೆಟ್ಗಳನ್ನು ಖರೀದಿಸಲು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ಅಭಿವೃದ್ದಿ ಇಲಾಖೆಗಳಿಂದ ನೆರವು ಪಡೆಯಲು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಇನ್ನು ಕಾಲೇಜು ಆರಂಭಿಸುವುದಕ್ಕೆ ಇಲಾಖೆ ಮಾಡಿಕೊಂಡ ಸಿದ್ದತೆ ಹೇಗಿದೆ..? ಕೊವೀಡ್ 19 ಹಿನ್ನೆಲೆಯಲ್ಲಿ ಯಾವ ರೀತಿಯ ಕ್ರಮ ವಹಿಸಲಾಗಿದೆ ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಆ ಕ್ರಮಗಳ ಮೇಲೆ ಕಾಲೇಜು ಆರಂಭಿಸಬಹುದಾ..? ಅಥವಾ ಮತ್ತೆ ಸ್ವಲ್ಪ ದಿನ ಕಾಲೇಜು ಆರಂಭಿಸೋದು ಬೇಡ್ವಾ..? ಒಂದು ವೇಳೆ ಆರಂಭ ಮಾಡಿದ್ರೆ ಇನ್ನೂ ಏವೆಲ್ಲಾ ಕಠಿಣ ಮುಂಜಾಗ್ರತಾ ಕ್ರಮ ವಹಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು.

Advertisement

Advertisement

ಅಂತಿಮವಾಗಿ ಈ ಬಗ್ಗೆ ಚರ್ಚಿಸಿ ಕಾಲೇಜು ಆರಂಭದ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜು ಕಡ್ಡಾಯವಲ್ಲ. ಕಲಿಕೆಯನ್ನು ಕಾಲೇಜಿಗೆ ಬಂದು ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಎಂದರು.

Advertisement

ಚರ್ಚೆ ಬಳಿಕ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ಕಾಲೇಜು ತೆರೆಯುವಿಕೆಯ ಬಗ್ಗೆ ವಿದ್ಯಾರ್ಥಿಗಳಿಂದಲೇ ಬೇಡಿಕೆ ಬಂದಿದ್ದು, ಕ್ಯಾಂಪಸ್ ಇಂಟರ್ವ್ಯೂ, ಪ್ಲೇಸ್ಮೆಂಟ್ಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಇವರೆಲ್ಲರಿಗೂ ಸೂಕ್ತ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಲು ಇಲಾಖೆ ಸಜ್ಜಾಗಿದೆ. ಪದವಿ ಕಾಲೇಜನ್ನು ಪ್ರಾರಂಭ ಮಾಡಲು ಎಲ್ಲಾ ಇಲಾಖೆಯೂ ಒಪ್ಪಿಗೆಯನ್ನು ಸೂಚಿಸಿದೆ. ನವೆಂಬರ್ 17 ರಂದು ಪದವಿ ಕಾಲೇಜು ಪ್ರಾರಂಭ ಮಾಡಲಾಗುತ್ತದೆ.

Advertisement

ಇದರ ಜೊತೆಗೆ ಇಂಜನೀಯರಿಂಗ್ ಕಾಲೇಜ್, ಡಿಪ್ಲೊಮಾ ಕಾಲೇಜ್, ಡಿಗ್ರಿ ಕಾಲೇಜ್ ಸಹ ಪ್ರಾರಂಭ ಆಗುತ್ತೆ. ಸ್ಟೂಡೆಂಟ್ ಗಳಿಗೆ ಆಪ್ಷನ್ ಕೊಡಲಾಗಿದೆ. ಕ್ಲಾಸ್ ಗಾದ್ರೂ ಬರಬಹುದು, ಆನ್ ಲೈನ್ ಕ್ಲಾಸ್ ಆದ್ರೂ ಅಟೆಂಡ್ ಮಾಡ್ಬಹದು. ಆನ್ ಲೈನ್ ನಲ್ಲಿ ಅಟೆಂಡ್ ಮಾಡುವವರು ರಿಜಿಸ್ಟರ್ ಮಾಡಿಸ್ಕೊಳ್ಳಬಹುದು. ವಿದ್ಯಾರ್ಥಿಗಳ ಸಂಖ್ಯೆ ನೋಡಿ ಕ್ಲಾಸ್ ಗಳನ್ನು ಯಾವ ರೀತಿ ಮಾಡ್ಬಹುದು ಅಂತ ನಿರ್ಧರಿಸಲಾಗುತ್ತೆ ಎಂದರು.

ಎಸ್ಸಿ ಎಸ್ಟಿ ಹಾಸ್ಟಲ್, ಒಬಿಸಿ ಹಾಸ್ಟಲ್, ಸೋಷಿಯಲ್ ವೆಲ್ ಫೇರ್ ಹಾಸ್ಟಲ್ ಗಳಲ್ಲಿ ಸೇಪ್ಟಿಯಾಗಿರುವಂತೆ ನೋಡಿಕೊಂಡಿದ್ದೇವೆ. ಸಾರಿಗೆ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಾಲೇಜಿಗೆ ಬಂದು ಶಿಕ್ಷಣ ಪಡೆಯಲು ಎಲ್ಲಾ ಅವಕಾಶ ಮಾಡಲಾಗುತ್ತೆ. ಎಲ್ಲಾ ಕಾಲೇಜಿನಲ್ಲೂ ಟಾಸ್ಕ್ ಫೋರ್ಸ್ ಇರುತ್ತೆ. ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಕೋ ಆರ್ಡಿನೇಟ್ ಮಾಡ್ತಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Advertisement
Share this on...