ಕಲರ್ ಫುಲ್ ಆಗಿರುವ ಈ ಸ್ಥಳದಲ್ಲಿ ನರಪಿಳ್ಳೆಯೂ ಸಿಗಲ್ಲ, ಕಾರಣವೇನು ಗೊತ್ತಾ?

in ಕನ್ನಡ ಮಾಹಿತಿ 13 views

ವಿಶ್ವದಲ್ಲಿ ಅನೇಕ ವಿಚಿತ್ರವಾದ ಸಂಗತಿಗಳು ನಮಗೆ ಅಚ್ಚರಿಯನ್ನು ಉಂಟು ಮಾಡುತ್ತವೆ. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಸಹ ಅಂತಹುದೇ ಒಂದು ಸ್ಥಳದ ಬಗ್ಗೆ. ಈ ಭೂಮಿಯ ಮೇಲೆ ಸಾಕಷ್ಟು ನೀರಿರುವ ಸ್ಥಳಗಳಿವೆ. ಅಲ್ಲಿ ವಿವಿಧ ರೀತಿಯ ಜೀವಿಗಳು ವಾಸಿಸುತ್ತವೆ. ಆದರೆ ನಾವಿಲ್ಲಿ ಹೇಳುತ್ತಿರುವ ಸ್ಥಳದಲ್ಲಿ ಮನುಷ್ಯರಿರಲಿ, ಪ್ರಾಣಿಗಳು ಸಹ ವಾಸಿಸುವುದಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಹೌದು, ಯುರೋಪಿಯನ್ ಸಂಶೋಧಕರು ಭೂಮಿಯ ಮೇಲೆ ಸಾಕಷ್ಟು ನೀರು ಇರುವ, ಆದರೆ ಯಾವುದೇ ಜೀವಿ ವಾಸಿಸದ ಸ್ಥಳವನ್ನು ಕಂಡುಹಿಡಿದಿದ್ದಾರೆ. ಇಲ್ಲಿ ಚಳಿಗಾಲದಲ್ಲಿ ಸಹ ಗರಿಷ್ಠ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ ಮತ್ತು ಇಲ್ಲಿನ ಹವಾಮಾನವು ಮಂಗಳ ಗ್ರಹದ ವಾತಾವರಣಕ್ಕೆ ಹೋಲುತ್ತದೆ. ಈ ಸ್ಥಳವು ಯಾವುದೋ ಗ್ರಹದಲ್ಲಿ ಇಲ್ಲ, ಇಥಿಯೋಪಿಯಾದಲ್ಲಿದೆ. ನೇಚರ್ ಎಕಾಲಜಿ ಮತ್ತು ಎವಲ್ಯೂಷನ್ ನಿಯತಕಾಲಿಕದಲ್ಲಿ (ಎನ್ಇಇ) ಇತ್ತೀಚೆಗೆ ಪ್ರಕಟವಾದ ಸುದ್ದಿಯ ಪ್ರಕಾರ, ನೀರು, ಗಾಳಿ ಮತ್ತು ವಾತಾವರಣದಲ್ಲಿ ಹೆಚ್ಚು ಆಮ್ಲ, ಉಪ್ಪು ಮತ್ತು ವಿಷಕಾರಿ ಅನಿಲಗಳಿರುತ್ತವೆ. ಆದರೆ ಈ ಸ್ಥಳದಲ್ಲಿ ಪಿಹೆಚ್ ಮೌಲ್ಯವು ಋಣಾತ್ಮಕವಾಗಿರುತ್ತದೆ. ಈ ಕಾರಣಕ್ಕಾಗಿ, ಇಲ್ಲಿ ಜೀವಿಗಳು ವಾಸಿಸುವುದಿಲ್ಲ.

Advertisement

 

Advertisement

Advertisement

ಇಲ್ಲಿ ಅತ್ಯಂತ ಅಪಾಯಕಾರಿ ಮತ್ತು ಕೆಟ್ಟ ವಾತಾವರಣವಿದೆ ಎಂದು ಹೇಳಲಾಗುತ್ತದೆ. ಹೇರಳವಾಗಿರುವ ಮೆಗ್ನೀಶಿಯಮ್ ಇಲ್ಲಿ ಕಂಡುಬರುತ್ತದೆ. ಏಕೆಂದರೆ ಸರೋವರದೊಳಗೆ ಸಣ್ಣ ಜ್ವಾಲಾಮುಖಿಗಳಿವೆ. ಇದು ವರ್ಷಪೂರ್ತಿ ವಿಷಕಾರಿ ಅನಿಲಗಳು ಮತ್ತು ರಾಸಾಯನಿಕಗಳನ್ನು ಹೊರಹಾಕುತ್ತದೆ. ಅಂದಹಾಗೆ ಈ ಸ್ಥಳದ ಹೆಸರು ಡಲ್ಲೋಲ್ ಜಿಯೋಥರ್ಮಲ್ ಫೀಲ್ಡ್. ನೀವು ಪ್ರಪಂಚದ ಎಲ್ಲಾ ಬಣ್ಣಗಳನ್ನು ಇಲ್ಲಿ ನೋಡಬಹುದು. ಇಲ್ಲಿರುವ ಡಾನಾಕ್ವಿಲ್ ಸರೋವರದಲ್ಲಿ ವಿಷಕಾರಿ ಅನಿಲಗಳು, ಉಪ್ಪು ಮತ್ತು ಆಮ್ಲಗಳು ಕಂಡುಬರುತ್ತವೆ.

Advertisement

 

ಡಲ್ಲೋಲ್ ಜಿಯೋಥರ್ಮಲ್ ಫೀಲ್ಡ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲವು ಪ್ರಮುಖ ಸಂಗತಿಗಳೆಂದರೆ ಇದು ಪೂರ್ವ-ಆಫ್ರಿಕಾದ ದೇಶವಾದ ಇಥಿಯೋಪಿಯಾದಲ್ಲಿರುವ ಭೂಮಿಯ ಜಲವಿದ್ಯುತ್ ವ್ಯವಸ್ಥೆಯಾಗಿದೆ. ಇದು ಭೂಮಿಯ ಅತ್ಯಂತ ಬಿಸಿಯಾದ ಸ್ಥಳಗಳಲ್ಲಿ ಒಂದಾಗಿದೆ. ಮೊದಲೇ ಹೇಳಿದ ಹಾಗೆ ಚಳಿಗಾಲದಲ್ಲೂ ದೈನಂದಿನ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗುತ್ತದೆ. ಈ ಪ್ರದೇಶವು ಚಿತ್ರವಿಚಿತ್ರ ಬಣ್ಣಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ನಿರಂತರವಾಗಿ ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಈ ಪ್ರದೇಶವು ಸರಾಸರಿ ಸಮುದ್ರ ಮಟ್ಟಕ್ಕಿಂತ 410 ಅಡಿ ಕೆಳಗೆ ಇದೆ.

Advertisement
Share this on...