ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ ಸಂತೋಷ್…!

in Kannada News/ಮನರಂಜನೆ 78 views

ಇತ್ತೀಚೆಗಷ್ಟೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಖ್ಯಾತಿಯ ಗೋವಿಂದೇಗೌಡ ಹಾಗೂ ದಿವ್ಯ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮತ್ತೊಬ್ಬ ಕಲಾವಿದ ದಾಂಪತ್ಯ ಜೀವನಕ್ಕೆ ಕಾಲಿಟಿದ್ದು ಲಾಕ್ ಡೌನ್ ಹಿನ್ನಲೆ ಸರಳವಾಗಿ ವಿವಾಹವಾಗಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕಾಮಿಡಿ ಕಿಲಾಡಿಗಳು ತಂಡದ ಕೆಲವು ನಟರು ಸಹ ವಿವಾ‌ಹದಲ್ಲಿ ಭಾಗಿಯಾಗಿದ್ದರು.

Advertisement

 

Advertisement

Advertisement

 

Advertisement

ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿರುವುದರಿಂದ ಅದ್ದೂರಿಯಾಗಿ ಮದುವೆ ಮಾಡುವಂತಿಲ್ಲ, ಹೆಚ್ಚು ಜನರನ್ನು ಕರೆಯುವಂತಿಲ್ಲ. ಈಗಾಗಲೇ ನಿಗದಿಯಾಗಿರುವ ಕೆಲವು ಮದುವೆಗಳನ್ನ ಮುಂದೂಡಲಾಗಿದ್ದು ಇನ್ನೂ ಹಲವು ಜೋಡಿಗಳು ಸರಳವಾಗಿ 10-20 ಜನರ ಸಮ್ಮುಖದಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಅದೇ ರೀತಿ ಇದೀಗ ಸಂತೋಷ್ ಸಹ ಮದುವೆಯಾಗಿದ್ದು ಹೆಚ್ಚು ಜನರನ್ನ ಕರೆಯದೆ ತಮ್ಮ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಸರಳ ವಿವಾಹವಾಗಿದ್ದಾರೆ. ಏಪ್ರಿಲ್ 10 ರಂದು ಸಂತೋಷ್ ವಿವಾಹ ನಿಗದಿಯಾಗಿತ್ತು. ನಂತರ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಸಂಭ್ರಮದ ಮದುವೆಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಅನುಮತಿ ಪಡೆದು ಸರಳವಾಗಿ 20 ಜನರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

 

 

ಸಂತೋಷ್ ರವರ ಸಹ ನಟ ಮಡೆನೂರು ಮನು ಸಹ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹೆಚ್ಚು ಜನ ಸೇರದಿದ್ದರೂ ಫುಲ್ ಎಂಜಾಯ್ ಮಾಡಿದ್ದರು. ಈ ಕುರಿತು ಮಡೆನೂರು ಮನು ಟಿಕ್ ಟಾಕ್ ನಲ್ಲಿ ವಿಡಿಯೋವನ್ನ ಹಾಕಿದ್ದು ವಿವಾಹದ ಸಂದರ್ಭದಲ್ಲಿನ ಲಕ್ಷಣಗಳನ್ನು ಸೆರೆಹಿಡಿದಿದ್ದಾರೆ.

 

 

ವಿಡಿಯೋ ಹಾಗೂ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕಾಮಿಡಿ ಕಿಲಾಡಿಗಳು ಸೀಜ಼ನ್- 3 ರ ರನ್ನರ್ ಅಪ್ ಆಗಿ ಹೊರಹೊಮ್ಮಿದ ತುಕಾಲಿ ಸ್ಟಾರ್ ಸಂತು ಎಂದೇ ಖ್ಯಾತಿ ಪಡೆದಿದ್ದ ಸಂತೋಷ್ ಕನ್ನಡಿಗರ ಮನೆ ಮಾತಾಗಿದ್ದರು. ಸಂತೋಷ್ ಕಾಮಿಡಿ ಕಿಲಾಡಿಗಳು ಸೀಜ಼ನ್- 3ರ ವಿನ್ನರ್ ಆಗುತ್ತಾರೆ ಅಂತ ಕೆಲವರು ಉಹಿಸಿದ್ದರು. ಆದರೆ ಕೊನೆಗೆ ರಾಕೇಶ್ ಪೂಜಾರಿ ಟ್ರೋಫಿ ಗೆದ್ದರು.

 

 

ಸಂತೋಷ್ ರನ್ನರ್ ಅಪ್ ಆದರು, ಆದರೆ ಇವರ ಜನಪ್ರಿಯತೆ ಮಾತ್ರ ಇಡೀ ಕರ್ನಾಟಕಕ್ಕೆ ಪಸರಿಸಿತ್ತು. ಹೀಗಾಗಿಯೇ ಇವರಿಗೆ ಸಿನಿಮಾ ಆಫರ್ ಗಳು ಹೆಚ್ಚು ಬರಲಾರಂಭಿಸಿತು. ಸಂತೋಷ್ ಈಗಾಗಲೇ ಕನ್ನಡದ 12 ಸಿನಿಮಾಗಳಲ್ಲಿ ನಟಿಸಿದ್ದು ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೆಚ್ಚು ಹೆಚ್ಚು ಆಫರ್ ಗಳು ಬರುತ್ತಾ ಇದ್ದು ನಟನೆಯಲ್ಲಿ ಬಿಜಿ಼ಯಾಗಿದ್ದಾರೆ. ಇದೀಗ ಲಾಕ್ ಡೌನ್ ಸಂದರ್ಭದಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂತೋಷ್ ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮುದ್ದೂರು ಹೊಸಹಳ್ಳಿಯವರು. ಲಾಕ್ ಡೌನ್ ಇರುತ್ತಿರುವುದರಿಂದ ಊರಿನಲ್ಲೇ ಕಾಲ ಕಳೆಯುತ್ತಿದ್ದಾರೆ.

– ಸುಷ್ಮಿತಾ

Advertisement
Share this on...