ಕಂಪ್ಯೂಟರ್ ಬಳಸುತ್ತಿದ್ದೀರಾ..ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ

in ಕನ್ನಡ ಮಾಹಿತಿ 197 views

ಜಗತ್ತು ಎಷ್ಟು ಮುಂದೆ ಹೋಗಿದೆ ಎಂದರೆ ಎಲ್ಲಾ ಕೆಲಸವನ್ನು ನೀವು ಇದ್ದ ಜಾಗದಲ್ಲೇ ಮಾಡುವಂತೆ ಎಲ್ಲವೂ ನಿಮ್ಮ ಬೆರಳ ಅಂಚಿನ ತುದಿಯಲ್ಲೇ ಸಿಗುತ್ತದೆ, ಕ್ಯಾಲ್ಕುಲೇಟರ್ ಬಳಸುವವರ ಕಂಡು ಬೆರಗಾಗುವ ಕಾಲವೊಂದಿತ್ತು ! ಆದರೆ ಈಗ ಕಾಲ ಸುಧಾರಿಸಿದೆ ಈಗ ಕಂಪ್ಯೂಟರ್ ಕರಾಮತ್ತು ಪ್ರಾರಂಭವಾಗಿದೆ ವೇಗ ಅನುಕೂಲ, ಸೌಲಭ್ಯಗಳ ಸಲುವಾಗಿ ಎಲ್ಲೆಡೆ ಕಂಪ್ಯುಟರ್ ಕೈಚಳಕಕ್ಕೆ ಜನ ಮಾರುಹೋಗುತ್ತಿದ್ದಾರೆ , ಹೌದು ಇದು ಇಂದಿನ ಕಥೆಯಾಗಿರುವುದು ನಿಜ, ಆದರೆ ಕಂಪ್ಯುಟರ್ ಬಳಕೆದಾರರ ಜೊತೆಗೆ ಕಂಪ್ಯುಟರ್ ನ ಅನುದಿನದ ಸಾಂಗತ್ಯದಿಂದ ವಿವಿಧ ಕಾಯಿಲೆಗಳ ಸಮೀಪಕ್ಕೆ ಹೋಗುತ್ತಿರುವರ ಸಂಖ್ಯೆಯೂ ಗಣಾನೀಯವಾಗಿ ಹೆಚ್ಚುತ್ತಿದೆ .
ಹೌದು ಕಂಪ್ಯೂಟರಿನ ದೈನಂದಿನ ಬಳಕೆ ಮಾಡುವರಲ್ಲಿ ಅನೇಕ ಕಾಯಿಲೆಗಳು ತೊಂದರೆಗಳು ಕಾಣಿಸಿಕೊಳ್ಳುತ್ತಿವೆ . ಪ್ರಮುಖವಾಗಿ ಬೆನ್ನು ನೋವು, ಕುತ್ತಿಗೆ ನೋವು, ಸೊಂಟನೋವು ,ಕಾಲುನೋವು,ತಲೆನೋವು,ಕಣ್ಣು ಉರಿ,ಕಣ್ಣು ನೋವು,ಶೀತ ,ಹೊಟ್ಟೆಯಲ್ಲಿ ಗ್ಯಾಸ್ ತುಂಬಿ ಕೊಳ್ಳುವುದು,ಹೆಚ್ಚಿನ ಜನರಲ್ಲಿ ಅನಿದ್ರೆ ,ಮಾನಸಿಕ ಒತ್ತಡ ಬಳಲಿಕೆ ಸಾಮಾನ್ಯ ಎನಿಸಿವೆ.

Advertisement

Advertisement

ಸಂಶೋಧನೆಯ ಪ್ರಕಾರ ಕಂಪ್ಯೂಟರ್ ಬಳಕೆದಾರರಲ್ಲಿ ಅಧಿಕ ರಕ್ತದೊತ್ತಡ,ಮಧುಮೇಹ, ಬಂಜೆತನ ಅಧಿಕ ಪ್ರಮಾಣದಲ್ಲಿ ಇರುವುದು ಕಂಡು ಬಂದಿದೆ.ಅತಿ ಬುದ್ದಿವಂತರು ಎಂದು ಕರೆಯಲ್ಪಡುವ ಇವರಿಗೆ ತಮ್ಮ ದೈಹಿಕ ತೊಂದರೆ ಕಂಪ್ಯೂಟರ್ ಇಂದನೆ ಬರುತ್ತದೆ ಎಂದು ಅರಿವಿಗೆ ಬರುವುದಿಲ್ಲ, ಬಂದರು ಕೆಲಸದ ಅನಿವಾರ್ಯತೆ ದುಡ್ಡಿನ ಅವಶ್ಯಕತೆ ಮುಂದೆ ಎಲ್ಲವನ್ನೂ ಕಡೆಗಣಿಸಲೆ ಬೇಕಾಗುತ್ತದೆ. ಕಂಪ್ಯೂಟರ್ ಜೊತೆಗೆ ಪ್ರತಿ ನಿತ್ಯ ಕನಿಷ್ಟ ಎರಡು ಗಂಟೆಗಳಿಗೂ ಹೆಚ್ಚು ಅವಧಿಯವರೆಗೆ ಕೆಲಸ ಮಾಡುವ ತಜ್ಞರು, ಉದ್ಯೋಗಸ್ಥರು, ವಿದ್ಯಾರ್ಥಿಗಳು ಮುಂತಾದ ಯಾರಿಗಾದರೂ ಇದಕ್ಕೆ ಸಂಬಂಧಪಟ್ಟ ಕಾಯಿಲೆಗಳು ಆಕ್ರಮಣ ಮಾಡಬಹುದಾಗಿದೆ .

Advertisement

ಕೈ ,ಕಾಲು ,ಬೆರಳು ,ಮುಂಗೈಗಳಲ್ಲಿ ಬಿಗಿತ ,ಅನಾನುಕೂಲ ಉರಿತ,ಕೈ ಗಳಲ್ಲಿ ಶೀತಾನುಭವ , ಸ್ಪರ್ಷ ಜ್ಞಾನ ಕೊರತೆ,ಬೆನ್ನು ,ಕುತ್ತಿಗೆಯಲ್ಲಿ ಆಗಾಗ ನೋವು ಬರುತ್ತಿದ್ದಾರೆ ಇವೆಲ್ಲವನ್ನೂ ಕಂಪ್ಯೂಟರ್ ಕಾಯಿಲೆಗಳು ಎನ್ನಬಹುದಾಗಿದೆ.ಇಷ್ಟೆಲ್ಲಾ ಸಮಸ್ಯೆಗಳಿಗೆ ಪರಿಹಾರವೂ ಇದೆ ಅವುಗಳೆಂದರೆ

Advertisement

– ನಾವು ಕುಳಿತುಕೊಳ್ಳುವ ರೀತಿ ಕಂಪ್ಯೂಟರ್ ಪರದೆಯು ಅತಿ ದೂರವೂ ಅಲ್ಲದ ಹತ್ತಿರವೂ ಅಲ್ಲದ ಸ್ಥಿತಿಯಲ್ಲಿ ಕುಳಿತುಕೊಳ್ಳಬೇಕು ಕೀಲಿಮಣೆ ತೊಡೆಯ ಮದ್ಯಕ್ಕೆ ಇರಬೇಕು, ಕುಳಿತು ಕೊಳ್ಳುವ ಕುರ್ಚಿ ಬೆನ್ನಿಗೆ ಪೂರ್ಣ ಆಸರೆ ಒದಗಿಸುವಂತೆ ಇರಲಿ .
– ಕೆಲಸ ಶುರು ಮಾಡುವ ಮುಂಚೆಯೇ ನೀವು ಮಾಡಬೇಕಿರುವ ಕೆಲಸವನ್ನು ಪಟ್ಟಿ ಮಾಡಿಕೊಂಡು ಶುರು ಮಾಡಿ ಇದರಿಂದ ಕಂಪ್ಯುಟರ್ ಮುಂದೆ ಕೂರುವ ಸಮಯ ಉಳಿಯುತ್ತದೆ.

 

 

– ಕೆಲಸ ಮಾಡುತ್ತಿದ್ದಾಗ ಯೋಚನೆಗಳು ಬಂದರೆ ಹಾಗೆ ಅವುಗಳನ್ನು ತಕ್ಷಣಕ್ಕೆ ಉಪಯೋಗಿಸಲು ಸಾಧ್ಯವಾಗದಿದ್ದರೆ ,ಅಲ್ಲಿಂದ ಹೊರಬಂದು ಬೇರೆ ಜಾಗದಲ್ಲಿ ಆರಾಮಾಗಿ ಕುಳಿತು ಯೋಚಿಸಿ ನಂತರ ಕೆಲಸ ಆರಂಭಿಸಿ
– ಕೆಲಸ ಹೆಚ್ಚಿದೆ ಎಂದು ಅಲ್ಲಿಯೇ ಫೋನ್ ನಲ್ಲಿ ಮಾತಾಡುವ,ಚಹಾ ಕಾಫಿ,ಧೂಮ ಸೇವಿಸುವ ರೀತಿ ಒಳ್ಳೆಯದಲ್ಲ
– ನಿರಂತರವಾಗಿ ಕಂಪ್ಯುಟರ್ ಕೆಲಸ ಮಾಡುವ ಬದಲು ಆಗಾಗ ಮಾಡಿ ಮದ್ಯದಲ್ಲಿ ಬೇರೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ ಕಂಪ್ಯೂಟರ್ ಇಂದ ಸ್ವಲ್ಪ ದೂರ ಉಳಿಯಬಹುದು.

ಜಾಗತೀಕರಣದ ಹೆಸರಿನಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡು ನಮ್ಮ ಅರೋಗ್ಯದ ಸ್ಥಿತಿಯನ್ನು ಹಾಳು ಮಾಡಿಕೊಳ್ಳುವಂತೆ ಆಗಿದೆ ನೆನಪಿನಲ್ಲಿ ಇಡೀ ಆರೋಗ್ಯವೇ ಭಾಗ್ಯ ಅರೋಗ್ಯ ಸರಿ ಇದ್ದರೆ ನಾವು ಎಂತಹ ಕೆಲಸ ಬೇಕಾದರೂ ಮಾಡಬಹುದು ಹಾಗಾಗಿ ನಿಮ್ಮ ಅರೋಗ್ಯದ ಮೇಲೆ ಸ್ವಲ್ಪ ಗಮನ ಹರಿಸಿ.
– ಶರತ್ ಕುಮಾರ್ ಟಿ.

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...