ಮತ್ತೆ ದೊಡ್ಡ ನಗೆ ಬೀರುತ್ತಾ ನಿಮ್ಮ ಮುಂದೆ ಬರುತ್ತಿದ್ದಾರೆ ಕ್ರೇಜಿ ಕರ್ನಲ್​​​​​​​​​…!

in ಮನರಂಜನೆ 97 views

ಈಗ ಜನರಿಗೆ ಮನರಂಜನೆ ನೀಡಲು ಸಾಕಷ್ಟು ಮನರಂಜನಾ ವಾಹಿನಿಗಳಿವೆ. ಈ ವಾಹಿನಿಗಳು ಕೂಡಾ ನಾ ಮುಂದು, ತಾ ಮುಂದು ಎನ್ನುವಂತೆ ಕಾಂಪಿಟೇಷನ್ ಮೇಲೆ ಸಾಕಷ್ಟು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಎಷ್ಟೋ ಧಾರಾವಾಹಿಗಳು ಜನಪ್ರಿಯತೆ ಗಳಿಸಿ ಇದೀಗ ಆ ಧಾರಾವಾಹಿಗಳನ್ನು ಮರು ಪ್ರಸಾರ ಮಾಡಲಾಗುತ್ತಿದೆ. ಆದರೆ 30 ವರ್ಷಗಳ ಹಿಂದೆ ಚಂದನ ಬಿಟ್ಟರೆ ಬೇರಾವ ವಾಹಿನಿ ಇರಲಿಲ್ಲ. ಈ ವಾಹಿನಿ ಜನರು ಇಷ್ಟಪಡುವಂತ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದವು.

Advertisement

 

Advertisement

Advertisement

 

Advertisement

ಇನ್ನು ಆ ಸಮಯದಲ್ಲಿ ಪ್ರಸಾರವಾದ ಖ್ಯಾತ ಧಾರಾವಾಹಿಗಳಲ್ಲಿ ರಮೇಶ್ ಭಟ್ ಹಾಗೂ ಗಿರಿಜಾ ಲೋಕೇಶ್ ಅಭಿನಯದ ಕ್ರೇಜಿ ಕರ್ನಲ್ ಕೂಡಾ ಒಂದು. ಈ ಧಾರಾವಾಹಿಯಲ್ಲಿ ರಮೇಶ್ ರಿಟೈರ್ಡ್ ಕರ್ನಲ್ ರಾಜಾರಾಯ್ ಆಗಿ ಅಭಿನಯಿಸಿದ್ದಾರೆ. ಅವರ ದೊಡ್ಡ ಮೀಸೆ, ಸಿಗಾರ್, ಅವರ ದೊಡ್ಡ ನಗುವೇ ಧಾರಾವಾಹಿಯ ಪ್ಲಸ್ ಪಾಯಿಂಟ್ ಆಗಿತ್ತು. ಇದೀಗ ಈ ಧಾರಾವಾಹಿ ಮರು ಪ್ರಸಾರವಾಗುತ್ತಿದೆ.

 

 

1990 ರಲ್ಲಿ ಪ್ರಸಾರವಾದ ಈ ಧಾರಾವಾಹಿ ಇಂದಿಗೂ ಬಹಳ ಫೇಮಸ್. ರಮೇಶ್ ಭಟ್ ಅವರು ವಿದೇಶಕ್ಕೆ ಹೋದಾಗ ‘ಕ್ರೇಜಿ ಕರ್ನಲ್’ ಧಾರಾವಾಹಿಯ ಸಿಡಿ ನಮ್ಮ ಬಳಿ ಇದೆ. ಆಗ್ಗಾಗ್ಗೆ ನಾವು ನಿಮ್ಮ ಧಾರಾವಾಹಿಯನ್ನು ನೋಡುತ್ತೇವೆ’ ಎಂದು ಅಮೆರಿಕದಲ್ಲಿ ವಾಸಿಸುವ ಕನ್ನಡಿಗರು ಹೇಳುತ್ತಾರಂತೆ. ಈ ಧಾರಾವಾಹಿಯನ್ನು ಜನರು ಎಷ್ಟು ಮೆಚ್ಚಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ.

 

 

ಇನ್ನು ಈ ಧಾರಾವಾಹಿಯಲ್ಲಿ ಕರ್ನಲ್ ಆಗಿ ನಟಿಸಲು ಮೊದಲು ಸಿ.ಆರ್. ಸಿಂಹ, ಜೈ ಜಗದೀಶ್, ಲೋಕೇಶ್​​​​​ ಹೆಸರುಗಳೆಲ್ಲಾ ಕೇಳಿ ಬಂದಿತ್ತಂತೆ. ಆದರೆ ಅಂತಿಮವಾಗಿ ನಿರ್ದೇಶಕ ಲಿಂಗರಾಜು ರಮೇಶ್ ಭಟ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ನಟಿಸುವಾಗ ನಾನು ಸಿನಿಮಾಗಳಲ್ಲಿ ಬ್ಯುಸಿ ಇದ್ದೆ, ಆರಂಭದಲ್ಲಿ ಕೇವಲ 13 ಎಪಿಸೋಡ್​​​​​ಗಳನ್ನು ಮಾತ್ರ ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ ಧಾರಾವಾಹಿಗೆ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಸುಮಾರು 38 ಎಪಿಸೋಡ್​​​​​ಗಳು ಪ್ರಸಾರವಾದವು. ಖ್ಯಾತಿ ಹೆಚ್ಚುತ್ತಿದ್ದಂತೆ ನಾನು ಹೊರಗೆ ಎಲ್ಲೇ ಹೋಗಲಿ ಜನರು ನನ್ನೊಂದಿಗೆ ಮಾತನಾಡಿಸಲು ಸುತ್ತುವರೆದುಬಿಡುತ್ತಿದ್ದರು ಎಂದು ಹಿರಿಯ ನಟ ರಮೇಶ್ ಭಟ್ ಅಂದಿನ ದಿನಗಳನ್ನು ನೆನೆಯುತ್ತಾರೆ.

 

ಇನ್ನು ಈ ಧಾರಾವಾಹಿ ಮೊದಲ ಕಂತಿನಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ಧಾರಾವಾಹಿಯಲ್ಲಿ ರಮೇಶ್ ಭಟ್ ಪಾತ್ರದ ಬಗ್ಗೆ ಪರಿಚಯ ನೀಡಿದ್ದಾರೆ. ಈ ಧಾರಾವಾಹಿ ಮಾರ್ಚ್ 25 ರಿಂದ ಪ್ರತಿ ಭಾನುವಾರ ಸಂಜೆ 6 ಗಂಟೆಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಮತ್ತೆ ಕರ್ನಲ್ ನಗುವನ್ನು ನೀವು ಕೇಳಿ ಎಂಜಾಯ್ ಮಾಡಬಹುದು.

Advertisement
Share this on...