ಕಾಗೆ ಕೂಗಿದ ಕೂಡಲೇ ಮನೆಗೆ  ನೆಂಟರು ಬರುತ್ತಾರ ? ಏನಾದರೂ ಸತ್ಯ ಇದೆಯಾ..? ಬಲವಾದ ಕಾರಣ ಇಲ್ಲಿದೆ ನೋಡಿ

in ಕನ್ನಡ ಮಾಹಿತಿ 217 views

ಕಾಗೆ ಕೂಗಿದ ಕೂಡಲೇ ಮನೆಗೆ  ನೆಂಟರು ಬರುತ್ತಾರ ?  ಪುರಾತನ ಕಾಲದಿಂದ ನಡೆದು ಬಂದಂತ ಸಂಪ್ರದಾಯದಲ್ಲಿ ಏನಾದರೂ ಸತ್ಯ ಇದೆಯಾ , ಈ ಸಂಪ್ರದಾಯದಲ್ಲಿ ಏನಾದರೂ ಸತ್ಯ ಇದೆಯಾ ಈ ಸಂಪ್ರದಾಯ ಶುರುವಾಗಿದ್ದು  ಏಗೆ ಬಿಳಿ ಬಣ್ಣ ವಿದ್ದ ಕಾಗೆ ಕಪ್ಪು ಬಣ್ಣ ವಾಗಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳೋಣ.
ಸಿಟಿಯಲ್ಲಿ ಕಾಗೆಗಳು ಕೂಗಿದರೆ ಅದು ಕಾಮನ್ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಯಾರ ಮನೆಯ ಮೇಲೆ ಕೂತು ಕೂಗುತ್ತದೆ ಎಂಬುದೇ ಗೊತ್ತಾಗುವುದಿಲ್ಲ .  ಆದರೆ ಹಳ್ಳಿಗಳಲ್ಲಿ ಆಗಲ್ಲ ಮನೆ ಮೇಲೆ ಅಥವಾ ಸುತ್ತಮುತ್ತ ಕಾಗೆಗಳು ಬಂದು ಕುಳಿತು ಕೂಗಿದರೆ ಮನೆಗೆ ನೆಂಟರು ಬರುತ್ತಾರೆ ಎಂದು ಅರ್ಥ. ಅದು ಸುಮ್ನೆ ಅಲ್ಲ  ಅದರ ಹಿಂದೆ ಒಂದು ಬಲವಾದ ಕಾರಣವಿದೆ.

Advertisement

 

Advertisement


ಹಿಂದೆ ಪೋಸ್ಟ್ ಆಫೀಸ್ ಫೋನ್ ಯಾವುದೂ ಇರಲಿಲ್ಲ ಆ ಪಕ್ಷಿಗಳ ಮೂಲಕ ಸಂದೇಶವನ್ನು ಕಳಿಸಲಾಗುತ್ತಿತ್ತು . ಒಂದು ಊರಿನ ಪಕ್ಷಿಗಳು ಮತ್ತೊಂದು ಊರಿಗೆ ಸಂದೇಶವನ್ನು ಹೊತ್ತು ಹೋಗುತ್ತಿದ್ದವು. ಆದರೆ ಕಾಗೆಗಳಿಗೆ ಒಂದು ವಿಚಿತ್ರವಾದ  ಸ್ವಭಾವವಿದೆ . ತಮ್ಮ ಜಾಗಕ್ಕೆ ಬೇರೆಯ ಪಕ್ಷಿಗಳು ಬಂದರೆ ಗಂಟಲು ಹರಿದು ಹೋಗುವ ರೀತಿ ಕೂಗುತ್ತವೆ. ಈ ರೀತಿ ಬೇರೆ ಊರಿನ ಪಕ್ಷಿಗಳು ಸಂದೇಶವನ್ನು ಹೊತ್ತು ಬಂದಾಗ ಕಾಗೆಗಳು ಕೂಗುತ್ತಾ  ಇದ್ದವು . ಹೀಗೆ ಶನಿಯ ವಾಹನ ಸಂದೇಶವನ್ನು ಹೊತ್ತು ತರುತ್ತಿತ್ತು.
ಇದರಿಂದ ಜನ ಯಾವುದೇ ಸಂದೇಶ ಬಂದಿದೆ ಎಂದು ಊಹಿಸುತ್ತಿದ್ದರು. ಇದು ಹಾಗೇ ಮುಂದುವರೆದು ಕಾಗೆಗಳು ಕೂಗಿದರೆ ನೆಂಟರು ಬರುತ್ತಾರೆ ಎಂಬ ಸಂಪ್ರದಾಯ ಬಂದಿದೆ.

Advertisement

 

Advertisement

ಕಾಗೆಗಳಲ್ಲಿ ಎರಡು ಬಣ್ಣದ ಕಾಗೆಗಳಿವೆ ಒಂದು ಕಪ್ಪು ಕಾಗೆ ಇನ್ನೊಂದು ಬಿಳಿಯ ಕಾಗೆ ಅದರಲ್ಲಿ ಬಿಳಿಯ ಹಾಗೆ ತುಂಬಾ ವಿರಳ. ಬಿಳಿ ಕಾಗೆ ಎಲ್ಲಾದರು  ಕಾಣಿಸಿಕೊಂಡರೆ ಅದೇ ಒಂದು ದೊಡ್ಡ ಸುದ್ದಿಯಾಗಿ ಪರಿಣಮಿಸುತ್ತದೆ  ಪರಿಣಮಿಸುತ್ತದೆ. ಕಪ್ಪು ಬಣ್ಣದ ಕಾಗೆ ಅಶುಭ ಮತ್ತು ಬಿಳಿ ಬಣ್ಣದ ಕಾಗೆ ಶುಭ ಎಂದು ನಂಬಲಾಗಿದೆ. ಆದರೆ ಇನ್ನೊಂದು ವಿಚಾರವೆಂದರೆ ಮೊದಲು ಕಾಗೆಗಳೆಲ್ಲಾ ಬಿಳಿಯ ಬಣ್ಣವಾಗಿದ್ದವು ಶಾಪದಿಂದ ನಂತರ ಕಾಗೆಗಳು ಕಪ್ಪಾದವು. ಒಮ್ಮೆ ಋಷಿಯೊಬ್ಬರು ಕಾಗೆಯನ್ನು ಕರೆದು ಅಮೃತವನ್ನು ಹಾಕಿಕೊಂಡು ಸಂದೇಶವನ್ನು ತರಲು ಹೇಳುತ್ತಾರೆ .

ಆದರೆ ಅಮೃತವನ್ನು ಕುಡಿಯಬಾರದು ಎಂದು ಷರತ್ತನ್ನು ವಿಧಿಸಿರುತ್ತಾರೆ. ವರ್ಷಗಳ ಕಾಲ ಕಷ್ಟಪಟ್ಟು ಕಾಗೆ ಅಮೃತವನ್ನು ಹುಡುಕುತ್ತದೆ. ಕಾಗೆ ದುರಾಸೆಯಿಂದ ಸ್ವಲ್ಪ ಅಮೃತವನ್ನು ಕುಡಿದು ತದನಂತರ ಸಾಧುವಿನ ಬಳಿ ಹೋಗಿ ಅಮೃತ ಹುಡುಕಿದ ವಿಷಯವನ್ನು ತಿಳಿಸುತ್ತದೆ. ಅಮೃತ ಕುಡಿದ ವಿಚಾರ ತಿಳಿದ ಋಷಿ  ಕಾಗೆಗೆ ಶಾಪವನ್ನು ಕೊಡುತ್ತಾರೆ. ನಿನ್ನನ್ನು ಎಲ್ಲರೂ ಅಶುಭ ಎಂದು ಭಾವಿಸುತ್ತಾರೆ . ನಿನಗೆ ಕೆಟ್ಟದನ್ನೇ ಮಾಡುತ್ತಾರೆ ಎಂದು ಹೇಳಿ ಕಾಗೆಯನ್ನು ತನ್ನ ಬಳಿ ಇದ್ದ  ಕಪ್ಪು ಬಣ್ಣದ ನೀರಿನ ಕಮಂಡಲದಲ್ಲಿ ಮುಳುಗಿಸುತ್ತಾರೆ ಅಂದಿನಿಂದ ಕಾಗೆಯ ಬಣ್ಣ ಶಾಶ್ವತವಾಗಿ  ಕಪ್ಪಾಗಿ ಬದಲಾಗಿ ಹೋಯಿತು.

Advertisement
Share this on...