ಅಸಿಡಿಟಿ ಇಂದ ಕ್ಯಾನ್ಸರ್ ವರೆಗೂ ಈ ಹಣ್ಣಿನಲ್ಲಿದೆ ದಿವ್ಯೌಷಧ..!

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,030 views

ಈ ಹಣ್ಣನ್ನ ನೋಡಿದರೆ ಒಂದಷ್ಟು ಜನ ಮೂಗು ಮುರಿಯುತ್ತಾರೆ ಮತ್ತಷ್ಟು ಜನ ಅಮೃತವೇ ಸಿಕ್ಕಿದ ಹಾಗೆ ಚಪ್ಪರಿಸುತ್ತಾರೆ. ಒಂದು ಕಾಲದಲ್ಲಿ ನೆಗ್ಲೆಟೆಡ್ ಫ್ರೂಟ್ ಆಗಿದ್ದ ಇದು ಈಗ ಮನುಷ್ಯನ ಆರೋಗ್ಯಕ್ಕೆ ಉತ್ತಮ ಮದ್ದಾಗಿ ಗುರುತಿಸಿಕೊಂಡಿದೆ. ಮಹಾಮಾರಿ ಕ್ಯಾನ್ಸರ್ ಸಹ ಮನುಷ್ಯನ ಹತ್ತಿರ ಸುಳಿಯದಂತೆ ಮಾಡುತ್ತೆ ಈ ಹಣ್ಣು. ಹಾಗಿದ್ದರೆ ಯಾವುದು ಆ ಹಣ್ಣು ಅಂತೀರಾ..? ಈ ಹಣ್ಣನ್ನ ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ಇದನ್ನು ಸೀತಾಫಲ ಅಂತಾರೆ. ನಮ್ಮ ದಕ್ಷಿಣ ಭಾರತದಲ್ಲಿ ಈ ಹಣ್ಣಿನ ಉಪಯೋಗ ಹೆಚ್ಚು. ಗುಡ್ಡಪ್ರದೇಶಗಳಲ್ಲಿ ಹೊಲದ ಬದುಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಈ ಗಿಡ ಮನುಷ್ಯನನ್ನು ಕಾಡುವ ಅದೆಷ್ಟೋ ರೋಗಗಳಿಗೆ ರಾಮಬಾಣ. ಅದರಲ್ಲೂ ಸೀತಾಫಲ ಹಾಗೂ ಇದರ ಜಾತಿಗೆ ಸೇರಿದ ರಾಮಫಲ ಮತ್ತು ಲಕ್ಷ್ಮಣಫಲ ಹಣ್ಣುಗಳು ಕ್ಯಾನ್ಸರ್ ಕಾರಕ ಜೀವಕೋಶಗಳಿಗೆ ಯಮಸ್ವರೂಪಿ ಅಂತಲೂ ಹೇಳಬಹುದು. ಹಾಗಾಗಿಯೇ ಕ್ಯಾನ್ಸರ್ ರೋಗಿಗಳು ಈ ಹಣ್ಣನ್ನ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಇನ್ನು ಸೀತಾಫಲದಲ್ಲಿ ರೆಬೋಪ್ಲಮಿನ್ ಹಾಗೂ ವಿಟಮಿನ್ ಸಿ ಪ್ರಮಾಣ ಹೆಚ್ಚಿರುವುದರಿಂದ ಈ ಹಣ್ಣಿನ ಸೇವನೆ ಕಣ್ಣಿನ ಬಲವನ್ನ ಹೆಚ್ಚಿಸುತ್ತದೆ.

Advertisement

Advertisement

ಅಷ್ಟೇ ಅಲ್ಲ ಈ ಸೀತಾಫಲದಲ್ಲಿ ಇರುವ ವಿಟಮಿನ್ ಬಿ ಹಾಗೂ ಹೆಚ್ಚಿನ ಪ್ರಮಾಣದ ಫೈಬರ್, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಇನ್ನು ಮೆಗ್ನೀಷಿಯಂ, ಹೃದ್ರೋಗ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಊಟ ಆದ ನಂತರ ಸೀತಾಫಲವನ್ನ ತಿನ್ನುವುದರಿಂದ ಜೀರ್ಣಕ್ರಿಯೆ ಹೆಚ್ಚಿಸಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿಡುತ್ತದೆ. ಅಷ್ಟೇ ಅಲ್ಲ ಕಾನ್ಸ್ಟಿಪೇಶನ್ ಸಮಸ್ಯೆ ಇದ್ದವರಿಗೆ ಈ ಹಣ್ಣು ಅದ್ಭುತವಾದ ಮದ್ದು.

Advertisement

ನಿಮಗೇನಾದರೂ ಬಾಯಾರಿಕೆ ಹೆಚ್ಚಿದರೆ ಸೀತಾಫಲ ಹಣ್ಣಿನ ಜೊತೆ ಸಕ್ಕರೆ ಬೆರೆಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ದಾಹ ನಿಶಕ್ತಿಯನ್ನ ಕಡಿಮೆ ಮಾಡಿಕೊಳ್ಳಬಹುದು. ಇದಿಷ್ಟೇ ಅಲ್ಲ ಸೀತಾಫಲ ಹಣ್ಣಿನ ಬೀಜವನ್ನ ನೀರಿನಲ್ಲಿ ಅರೆದು ಗಾಯ ಆಗಿರುವ ಜಾಗಕ್ಕೆ ಹಚ್ಚಿದರೆ ಗಾಯ ಬೇಗ ಗುಣವಾಗುತ್ತದೆ. ಅದೇ ಬೀಜವನ್ನ ಮೇಕೆ ಹಾಲಿನಲ್ಲಿ ಅರೆದು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಸೀತಾಫಲ ವಾತ ಮತ್ತು ಪಿತ್ತವನ್ನು ಕಡಿಮೆ ಮಾಡುವ ಗುಣವನ್ನ ಹೊಂದಿದೆ.

Advertisement

ಈ ಹಣ್ಣಿನಲ್ಲಿ ವಿಟಮಿನ್ ‘ಎ’, ‘ಬಿ’ ಸೇರಿದಂತೆ ಕ್ಯಾಲ್ಸಿಯಂ, ಫೈಬರ್, ಮೆಗ್ನೀಷಿಯಂ, ಪೊಟ್ಯಾಶಿಯಂ ಸೇರಿದಂತೆ ಸಾಕಷ್ಟು ಉಪಯುಕ್ತ ಅಂಶಗಳಿದ್ದು ಸೀತಾಫಲ ಆರೋಗ್ಯವನ್ನ ಕಾಪಾಡುವ ರಾಮಬಾಣವಾಗಿದೆ ಅಂದರೆ ಅತಿಶಯೋಕ್ತಿ ಆಗುವುದಿಲ್ಲ. ಇದು ಬೇಸಿಗೆಯಲ್ಲಿ ಸಿಗುವ ಸೀಜ಼ನಲ್ ಫ್ರೂಟ್. ದೇಹವನ್ನ ತಂಪಾಗಿಡುವ ಶಕ್ತಿಯ ಜೊತೆಗೆ ಬೇಸಿಗೆಯಲ್ಲಿ ಹರಡಬಹುದಾದ ಹಲವಾರು ಕಾಯಿಲೆಗಳಿಂದ ನಮ್ಮನ್ನ ಕಾಪಾಡುವ ಶಕ್ತಿ ಕೂಡ ಇರುವುದರಿಂದಲೇ ಪ್ರಕೃತಿ ಈ ಹಣ್ಣನ್ನ ನಮಗೆ ಬೇಸಿಗೆ ಕಾಲದಲ್ಲಿ ಒದಗಿಸುತ್ತಿದೆ. ವರ್ಷಕೊಮ್ಮೆ ಸಿಗುವ ಈ ಅಪರೂಪದ ಹಣ್ಣನ್ನ ತಿನ್ನುವುದಕ್ಕೆ ಮರೆಯಬೇಡಿ.

– ಸುಷ್ಮಿತಾ

Advertisement
Share this on...