ದಿನಭವಿಷ್ಯ 2 ಮಾರ್ಚ್ 2021

in ಕನ್ನಡ ಮಾಹಿತಿ/ಜ್ಯೋತಿಷ್ಯ 674 views

ಶಾರ್ವರಿ  ನಾಮ ಸಂವತ್ಸರೆ, ಉತ್ತರಾಯಣೆ, ಶಿಶಿರ ಋತು, ಮಾಘ ಮಾಸೆ, ಕೃಷ್ಣ  ಪಕ್ಷದ ತೃತೀಯ ತಿಥಿ, ಹಸ್ತಾ ನಕ್ಷತ್ರ, ಗಂಡ ಯೋಗ, ಭದ್ರಂಕ್ ಕರಣ,  2ನೇ ತಾರೀಕು ಮಾರ್ಚ್ 2021 ಮಂಗಳವಾರದ ಪಂಚಾಂಗ ಫಲವನ್ನು ರಾಶಿಗನುಗುಣವಾಗಿ ದಿನಭವಿಷ್ಯವನ್ನು ಶ್ರೀ ರವಿಶಂಕರ್ ಗುರೂಜಿರವರು ನೀಡಿದ್ದಾರೆ.

Advertisement

ಪ್ರತಿ ನಿತ್ಯ ಮನುಷ್ಯ ಏನನ್ನಾದರೂ ಒಂದು ಕಷ್ಟದ ಗೋಜಲನ್ನು  ತಂದಿಟ್ಟುಕೊಂಡು ಅದರಿಂದ ತೊಳಲಾಡುತ್ತಿರುತ್ತಾನೆ. ಜ್ಞಾನಿಗಳು ಇರುವುದನ್ನೇ ಬಳಸಿಕೊಂಡು ಅದರಲ್ಲೇ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಯೋಚಿಸುತ್ತಾರೆ. ನಮ್ಮ ಬಳಿ ಇರುವಂಥ ಸಾಧನವನ್ನು ಹೀಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದಕ್ಕೆ ಸತತವಾಗಿ ಪ್ರಯತ್ನ ಮಾಡಬೇಕು. ಭೂಮಿ ವಿಚಾರ ವಾಹನ ವಿಚಾರ ತಗಾದೆ ಪೋಲಿಸ್ ಸ್ಟೇಷನ್ ಕೋರ್ಟ್ ಅವಮಾನ ಜಗಳ ಪದೆಪದೇ ಕಿರಿಕಿರಿ ಇಂ’ಜುರಿ ಸಮಸ್ಯೆ ಪದೇಪದೇ ಆಕ್ಸಿಡೆಂಟ್ ಈ ರೀತಿಯ ತೊಳಲಾಟದಲ್ಲಿ ಇರುವವರು  ಇಂದು ಅಂಗಾರಕ ಸಂಕಷ್ಟ ಚತುರ್ಥಿ ಆದ್ದರಿಂದ ಒಂಬತ್ತು ಹೋಳಿಗೆಯನ್ನು ಮಾಡಿ ಇಲ್ಲವೇ ಆಚಾರರ ಕೈಯಲ್ಲಿ ಪ್ರಸಾದವನ್ನು ಮಾಡಿಸಿ ಹಂಚಿ. ಅಂಗಾರಕ ಸಂಕಷ್ಟ ಚತುರ್ಥಿ ದಿನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷರಾಶಿ :  ವ್ಯಾಪಾರ ವ್ಯವಹಾರ ಹಣಕಾಸಿನ ಲೆಕ್ಕಾಚಾರದ ವಿಷಯದಲ್ಲಿ ಸರ್ಪ್ರೈಸ್ ಗುಡ್ ನ್ಯೂಸ್ ವೊಂದಿದೆ.

ವೃಷಭ ರಾಶಿ : ಅತ್ತೆ ಸೊಸೆ ನಡುವೆ ಸ್ವಲ್ಪ ಕಿರಿಕಿರಿ ಇರುತ್ತದೆ ಮನೆಯಲ್ಲಿ ಹೆಚ್ಚಿನ ಸ್ತ್ರೀಯರಿದ್ದರೇ ಕಿರಿಕಿರಿ ಉಂಟಾಗುತ್ತದೆ. ಈ ಮಾತನ್ನು ಆಡುವಾಗ ಎಚ್ಚರಿಕೆಯಿಂದ ಮಾತನಾಡಿ ನಿಧಾನಿಸಿ. ದುರ್ಗಾ ದೇವಿ ಪೂಜೆ ಮಾಡಿಕೊಳ್ಳಿ ಒಳ್ಳೆಯದಾಗುತ್ತದೆ.

ಮಿಥುನ ರಾಶಿ : ಚೆನ್ನಾಗಿದೆ ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎಂಬ ರೀತಿಯಲ್ಲಿ ತೊಳಲಾಡುತ್ತೀರ. ದೇವರು ಕಣ್ಣೀರು ಕಷ್ಟ ಕೊಟ್ಟರೆ ಅದನ್ನು ಒರೆಸಲು ಕೈ ಕೊಟ್ಟಿರುತ್ತಾನೆ ಇಲ್ಲವೇ ಸಮಾಧಾನಪಡಿಸಲು ಯಾರ ನ್ನಾದರೂ ನಿಮ್ಮ ಬಳಿ ಇರಿಸಿರುತ್ತಾನೆ ಚಿಂತಿಸಬೇಡಿ.

ಕರ್ಕಾಟಕ ರಾಶಿ : ಆತ್ಮ ಸ್ಥೈರ್ಯ ಚುರುಕುತನ ಖುಷಿ ಸಂತೋಷ ಆನಂದ ಎಲ್ಲವನ್ನೂ ಒಟ್ಟಾಗಿ ನೋಡುವಂತಹ ದಿನ ಆತ್ಮೀಯರನ್ನು ಭೇಟಿ ಮಾಡುವಂತಹ ದಿನ.

ಸಿಂಹ ರಾಶಿ : ವೃತ್ತಿ ಕುಟುಂಬ ವ್ಯವಹಾರ ಒಡಹುಟ್ಟಿದವರಿಗೋಸ್ಕರ ಸ್ವಲ್ಪ ಖರ್ಚು ವೆಚ್ಚಗಳು ಆಗುತ್ತದೆ. ಅದಕ್ಕೆ ತಕ್ಕಂತೆ ಸಂಪಾದನೆ ಕೂಡ ಆಗುತ್ತದೆ ಚಿಂತಿಸಬೇಡಿ.

ಕನ್ಯಾ ರಾಶಿ : ತುಂಬ ಹತ್ತಿರದವರ ಮಾತಿನಿಂದ ನೀವು ನೋವು ತಿನ್ನುವಂತಹ ಪ್ರಸಂಗ ಬರುತ್ತದೆ. ವ್ಯವಹಾರದಲ್ಲಿ ಬುದ್ದಿ ಮಾತನ್ನು ಕೇಳಬೇಕು ಕುಟುಂಬದವರ ಜತೆ ಮನಸಿನ ಮಾತನ್ನು ಕೇಳಬೇಕು, ಇದನ್ನು ತಿಳಿದು ಮುಂದಕ್ಕೆ ಹೆಜ್ಜೆ ಇಡಿ.

ತುಲಾ ರಾಶಿ : ಸ್ವಂತ ವ್ಯಾಪಾರ ವ್ಯವಹಾರಗಳನ್ನು ಮಾಡುವವರಿಗೆ ಸ್ವಲ್ಪ ಖರ್ಚು ವೆಚ್ಚ ಗಳಾಗುತ್ತವೆ.  ಅದನ್ನು ಬಿಟ್ಟರೆ ಆದಾಯಕ್ಕೆ ಮೀರಿದ ಲಾಭವಾಗುತ್ತದೆ.

ವೃಶ್ಚಿಕ ರಾಶಿ : ಇಂದು ಖರ್ಚು ಇಲ್ಲದೆ ಆದಾಯ ಜಾಸ್ತಿಯಾಗುತ್ತದೆ ಮಾಡುವ ಎಲ್ಲಾ ಕೆಲಸ ಕಾರ್ಯಗಳು ಹಾಲು ಬೆಣ್ಣೆ ಮೊಸರು ತುಪ್ಪ ಕಮಿಷನ್ ಏಜೆಂಟ್ ಟ್ರಾವೆಲ್ ಸ್ಟೋಲ್ಸ್ ವೆಹಿಕಲ್ಸ್ ವಿಭಾಗದಲ್ಲಿರುವವರಿಗೆ ಅನುಕೂಲಕರ.

ಧನಸ್ಸು ರಾಶಿ :  ವೃತ್ತಿಯಲ್ಲಿ ನಿಮಗೆ ಯಾರೋ ಒತ್ತಡ ಹಾಕುತ್ತಾರೆ ಅದನ್ನು ಮನಸ್ಸಿಗೆ ತೀರಾ ಹಚ್ಚಿಕೊಳ್ಳಲು  ಹೋಗಬೇಡಿ.  ಮೂರ್ಖರ ಜತೆ ವಾದ ಮಾಡುವುದು ಒಳ್ಳೆಯದಲ್ಲ.

ಮಕರ ರಾಶಿ : ಕೊಡುವುದು ತೆಗೆದುಕೊಳ್ಳುವುದು ಕಲಾವಿದರು ಡ್ಯಾನ್ಸ್ ಮ್ಯೂಸಿಕ್ ಇನ್ಸ್ಟ್ರುಮೆಂಟ್ಸ್ ಕಮಿಷನ್ ಏಜೆಂಟ್ ಚೀಟಿ ಈ ವ್ಯವಹಾರಗಳ ತೊಡಗಿಸಿಕೊಂಡಿರುವವರಿಗೆ ಅನುಕೂಲಕರವಾದ ದಿನ.

ಕುಂಭ ರಾಶಿ : ಸ್ವಲ್ಪ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ ಇಂದು ತುಂಬಾ ಚುರುಕು ನಿಮ್ಮ ಯೋಜನೆ ಲೆಕ್ಕಾಚಾರ ಎಲ್ಲವೂ ನೀವು ಅಂದುಕೊಂಡಂತೆ ನಡೆಯುವಂತಹ ಅದ್ಭುತವಾದ  ದಿನ.

ಮೀನ ರಾಶಿ : ಬಹು ವಿಶೇಷವಾಗಿ ರುವಂತಹ ದಿನ ಮಕ್ಕಳ ವಿಚಾರದಲ್ಲಿ  ಜೊತೆಗಾರರಿಂದ ಲಾಭವಾಗುತ್ತದೆ ಹೆಸರು ಕೀರ್ತಿ  ನೋಡುತ್ತೀರ. ವಿಶೇಷ ಪ್ರಗತಿಯನ್ನು ತಂದುಕೊಡುವಂತಹ ದಿನ.

All Rights reserved Namma  Kannada Entertainment.

Advertisement