ಬ್ಯಾಗ್ರೌಂಡ್ ಡ್ಯಾನ್ಸರ್ ಗಳಾಗಿದ್ದ ಇವರು ಈಗ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ನಟರು….!

in ಮನರಂಜನೆ 97 views

ಹಾಡುಗಳಲ್ಲಿ ಹೀರೋ ಹಾಗೂ ಹೀರೋಯಿನ್ ಗಳ ಹಿಂದೆ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿ ಈಗ ಟಾಪ್ ಸೆಲೆಬ್ರಿಟಿಯಾಗಿರುವ ಕೆಲವು ಅದೃಷ್ಟ ಸ್ಟಾರ್ ಇದ್ದಾರೆ. ನೂರಾರು ಸಾವಿರಾರು ಡ್ಯಾನ್ಸರ್ ಗಳ ಮಧ್ಯೆ ಒಬ್ಬರಾಗಿದ್ದ ಅವರು ನಂತರ ಸ್ಟಾರ್ ಆಗಿರುವುದು ಸುಲಭದ ಮಾತಲ್ಲ. ಆದರೆ ಅದನ್ನು ಸಾಧಿಸಿರುವ ಕೆಲವು ಸ್ಟಾರ್  ಇದ್ದು ಅವರು ಈಗ ಟಾಪ್ ಪೋಜಿ಼ಶನ್ ನಲ್ಲಿ ಇದ್ದಾರೆ. ಅವರು ಯಾರು ಗೊತ್ತಾ..? ಧೋನಿ ಬಯೋಪಿಕ್ ಚಿತ್ರದಲ್ಲಿ ನಟಿಸಿ ಒಂದೇ ಚಿತ್ರದ ಮೂಲಕ ಸ್ಟಾರ್ ನಟ ಪಡೆದ ಈ ನಟ ಮೊದಲು ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಹಾಗೂ ಸ್ಟೇಜ್ ಡ್ಯಾನ್ಸ್ ಗಳಲ್ಲಿ ಹಿನ್ನಲೆ ಡ್ಯಾನ್ಸರ್ ಆಗಿ ತಮ್ಮ ಕ್ಯಾರಿಯರ್ ಪ್ರಾರಂಭಿಸಿದರು. ಆದರೆ ಅದೃಷ್ಟ ಹೇಗಿತ್ತೆಂದರೆ ನಂತರದಲ್ಲಿ ಬಾಲಿವುಡ್ ನಲ್ಲಿ ಬೇಡಿಕೆಯ ನಟರಾಗಿದ್ದರು.

Advertisement

 

Advertisement


ನಟಿ ನೀತೂ ಚಂದ್ರ ಕನ್ನಡದ ಪವರ್ ಚಿತ್ರದಲ್ಲಿ ನಟಿಸಿರುವ ಈ ನಟಿ ಮೊದಲು ಹಿನ್ನೆಲೆ ಡ್ಯಾನ್ಸರ್ ಆಗಿ ಹಲವಾರು ಚಿತ್ರಗಳಲ್ಲಿ ಡ್ಯಾನ್ಸ್ ಮಾಡಿ ನಂತರ ಸಿನಿಮಾಗಳಲ್ಲಿ ಅವಕಾಶ ಪಡೆದು ಈಗ ಒಳ್ಳೆಯ ಸ್ಟಾರ್ ನಟಿಯಾಗಿ ಹೆಸರು ಗಳಿಸಿದ್ದಾರೆ.
ಶೃತಿ ಹರಿಹರನ್ ಕನ್ನಡದ ಖ್ಯಾತ ನಟಿ. ಶ್ರುತಿ ಹರಿಹರನ್ ಕೂಡ ಮೊದಲು ಹಲವಾರು ಚಿತ್ರಗಳ ಹಾಡುಗಳಲ್ಲಿ ಹೀರೋಯಿನ್ ಹಿಂದೆ ನಿಂತು ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿ ಅದೃಷ್ಟಕ್ಕೆ ಲೂಸಿಯಾ ಚಿತ್ರದ ಮೂಲಕ ಅವಕಾಶ ಪಡೆದು ನಂತರ ಬೇಡಿಕೆ ನಟಿಯಾಗಿ ಬೆಳೆದರು.
ಕಾಜ಼ಲ್ ಅಗರ್ವಾಲ್ ದಕ್ಷಿಣ ಭಾರತದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ಈ ನಟಿ ಮೊದಲು ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ತಮ್ಮ ಕೇರಿಯರ್ ಪ್ರಾರಂಭಿಸಿದರು. 2004 ರಲ್ಲಿ ಬಂದ ಕ್ಯೂನ್ ಹೋಗಯಾ ಚಿತ್ರದಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಈ ನಟಿ ಮೊದಲು ಕ್ಯಾಮರಾ ಮುಂದೆ ಬಂದರು. ಈಗ ಊಹೆಗೂ ಮೀರದಷ್ಟು ದೊಡ್ಡ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ.

Advertisement


ಶಾಹಿದ್ ಕಪೂರ್ ಬಾಲಿವುಡ್ ನಲ್ಲಿ ಟಾಪ್ ನಟನಾಗಿರುವ ಶಾಹಿದ್ ಕಪೂರ್ ದಿಲ್ ತೋ ಪಾಗಲ್ ಹೈ ಹಾಗೂ ತಾಲ್ ಚಿತ್ರಗಳ ಹಾಡುಗಳಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿ ನಂತರ ಚಿತ್ರರಂಗದಲ್ಲಿ ಅವಕಾಶ ಪಡೆದು ಈಗ ಬಾಲಿವುಡ್ ನ ಭಾರಿ ಬೇಡಿಕೆಯ ನಟರಾಗಿದ್ದಾರೆ. ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ತೃಪ್ತಿ ಪಡೆದುಕೊಂಡಿದಿದ್ದರೆ ಇವರು ಯಾರು ಈಗ ದೊಡ್ಡ ಸ್ಟಾರ್  ಆಗುತ್ತಿರಲಿಲ್ಲ. ಹಾಗಾಗಿ ಪ್ರಯತ್ನ ಅದರ ಜೊತೆ ಹೊಸ ಹೆಜ್ಜೆ ಇಡುತ್ತಿದ್ದರೆ ಒಂದಲ್ಲಾ ಒಂದು ದಿನ ಯಶಸ್ಸು ನಮ್ಮದಾಗುತ್ತದೆ.

Advertisement

– ಸುಷ್ಮಿತಾ

Advertisement
Share this on...