ಲವ್ ಮಾಕ್ಟೇಲ್ ಕೃಷ್ಣರ ಮುಂದಿನ ಚಿತ್ರಕ್ಕೆ ನಾಯಕಿ ರಾಧಿಕಾ ಕುಮಾರಸ್ವಾಮಿ ನಾ.. ! ?

in ಸಿನಿಮಾ 92 views

ಡಾರ್ಲಿಂಗ್ ಕೃಷ್ಣ ಎಂದೇ ಕರೆಸಿಕೊಳ್ಳುವ ಕೃಷ್ಣರವರು ಇತ್ತೀಚೆಗಷ್ಟೇ ಲವ್ ಮಾಕ್ಟೇಲ್  ಎಂಬ ಸಿನಿಮಾವನ್ನು ನಿರ್ದೇಶಿಸಿ ಅದರಲ್ಲಿ ನಾಯಕ ನಟರಾಗಿ  ಅಭಿನಯಿಸಿದ್ದರು. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್  ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ  ಮಾಕ್ಟೇಲ್ ಕೃಷ್ಣ ಎಂದು ಎಲ್ಲಾ ಕಡೆ ಫೇಮಸ್ ಆಗಿದ್ದಾರೆ. ಈ ಸಿನಿಮಾದ ಯಶಸ್ಸಿನ ನಂತರ ಕೃಷ್ಣರವರು ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಾಯಕ ನಟರಾಗಿದ್ದಾರೆ. ಕೃಷ್ಣ ಅವರು ತಮ್ಮ ಮುಂದಿನ ಸಿನಿಮಾ ಲವ್ ಮಾಕ್ಟೇಲ್ 2  ಸಿನಿಮಾದ ತಯಾರಿಯಲ್ಲಿದ್ದಾರೆ . ಲಾಕ್ ಡೌನ್ ಇದ್ದುದ್ದರಿಂದಾಗಿ ತಮ್ಮ ಮುಂದಿನ ಸಿನಿಮಾದ ಕತೆಯನ್ನು ಬರೆದು ರೆಡಿ ಮಾಡಿಕೊಳ್ಳುತ್ತಿದ್ದಾರೆ.

Advertisement

 

Advertisement

Advertisement

ಈ ಎಲ್ಲದರ ನಡುವೆ ಕೃಷ್ಣ ಅವರು ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.  ರೊಮಾಂಟಿಕ್  ಸಿನಿಮಾಗಳ ನಿರ್ದೇಶಕ ಎಂದೇ ಹೆಸರಾಗಿರುವ ನಾಗಶೇಖರ್ ಅವರು ಈ ಸಿನಿಮಾವನ್ನು  ನಿರ್ದೇಶನ ಮಾಡುತ್ತಿದ್ದಾರೆ . ರಾಧಿಕಾ ಕುಮಾರಸ್ವಾಮಿ ಈ ಸಿನಿಮಾದ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ . ಎಂದು  ಹೇಳಲಾಗುತ್ತಿದೆ. ಈಗಾಗಲೇ ಕೃಷ್ಣ ಮತ್ತು ರಾಧಿಕಾ ಕುಮಾರಸ್ವಾಮಿ  ಇಬ್ಬರು  ಕಥೆ ಕೇಳಿ  ಒಪ್ಪಿಗೆ  ನೀಡಿದ್ದಾರೆ  ಎಂದು  ಹೇಳಲಾಗುತ್ತಿದೆ.

Advertisement

 

ಎಲ್ಲ ಅಂದುಕೊಂಡಂತೆ ಆದರೆ ಲಾಕ್ ಡೌನ್   ಮುಗಿದ ಕೆಲವು ತಿಂಗಳುಗಳ ಬಳಿಕ ಈ ಸಿನಿಮಾ ಸೆಟ್ಟೇರಲಿದೆ…

ಈ ಸಿನಿಮಾಕ್ಕೆ ಹೆಸರು ಕೂಡ ಫೈನಲ್  ಆಗಿದ್ದು ಶ್ರೀ ಕೃಷ್ಣ@gmail.com ಎಂಬ ವಿಭಿನ್ನವಾದ ಹೆಸರನ್ನು ಇಟ್ಟಿದ್ದಾರೆ . ಇನ್ನು ಈ ಸಿನಿಮಾದ ಕಥೆ ಯಾವ ರೀತಿ ಇದೆ ಎಂಬುದನ್ನು ಕಾದು ನೋಡಬೇಕಾಗಿದೆ .

Advertisement
Share this on...