ಡಾರ್ಲಿಂಗ್ ಕೃಷ್ಣನ 10 ವರ್ಷದ ಬಣ್ಣದ ಬದುಕು ಹೇಗಿದೆ ಗೊತ್ತಾ..?

in ಸಿನಿಮಾ 35 views

ಲವ್ ಮಾಕ್ ಟೈಲ್ ಮೂಲಕ ಸಿನಿರಸಿಕರಿಗೆ ಹುಚ್ಚು ಹಿಡಿಸಿದ ಡಾರ್ಲಿಂಗ್ ಕೃಷ್ಣ ಒಮ್ಮೆಲೆ ಲವ್ ಮಾಕ್ ಟೈಲ್ ಸಿನಿಮಾ ಮಾಡಿ ಫೇಮಸ್ ಆದವರಲ್ಲ ಬದಲಿಗೆ ಸಿನಿಮಾರಂಗದಲ್ಲಿ ಹಲವು ವರ್ಷಗಳ ಕಾಲ ಮಣ್ಣು ಹೊತ್ತು ನಂತರವೂ ಅವಕಾಶಗಳು ಕಡಿಮೆಯಾದಾಗ ತಾವೇ ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಬಂಡವಾಳ ಹೂಡಿ ಸಿನಿಮಾ ಮಾಡಿದರು. ಈ ಸಿನಿಮಾ ಈಗ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Advertisement

Advertisement

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ ಟೈಲ್ ಸಿನಿಮಾ ಎಷ್ಟರ ಮಟ್ಟಿಗೆ ಸಕ್ಸಸ್ ಕಂಡಿದೆ ಎಂಬುದು ತಿಳಿದೇ ಇದೆ. ಇದರ ಸಕ್ಸಸ್ ಕಂಡು ಇದೀಗ ಡಾರ್ಲಿಂಗ್ ಕೃಷ್ಣರವರು ಲವ್ ಮಾಕ್ ಟೈಲ್-2 ಸಿನಿಮಾ ತಯಾರಿಗೂ ಇಳಿದಿದ್ದಾರೆ. ಅಷ್ಟರ ಮಟ್ಟಿಗೆ ಡಾರ್ಲಿಂಗ್ ಕೃಷ್ಣ ರವರಿಗೆ ಲವ್ ಮಾಕ್ ಟೈಲ್ ಸಕ್ಸಸ್ ತಂದುಕೊಟ್ಟಿದೆ. ಅಲ್ಲದೆ ಸ್ಯಾಂಡಲ್ ವುಡ್ ನಲ್ಲಿ ಕೃಷ್ಣರವರನ್ನು ಗುರುತಿಸುವಂತೆ ಮಾಡಿದೆ. ಪರಭಾಷಾ ನಟರು ಸಹ ಸಿನಿಮಾ ಕುರಿತು ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಡಾರ್ಲಿಂಗ್ ಕೃಷ್ಣ ಅವರು ತಮ್ಮ ಸಿನಿ ಜರ್ನಿಯನ್ನ ನೆನೆದಿದ್ದಾರೆ.

Advertisement

 

Advertisement

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಹುಡುಗರು’ ಸಿನಿಮಾದಲ್ಲಿ ಸೈಡ್ ಆಕ್ಟರ್ ಆಗಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರದೇ ‘ಜಾಕಿ’ ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಹೀಗೆ ಹಲವು ಸಿನಿಮಾಗಳಲ್ಲಿ ಸೈಡ್ ಆಕ್ಟರ್ ಆಗಿ ನಟಿಸಿ ನಂತರ ತಾವೇ ಹೀರೋ ಆಗಿ ಅಭಿನಯಿಸಲು ಪ್ರಾರಂಭಿಸಿದರು. ಚಾರ್ಲಿ, ಮದರಂಗಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅಷ್ಟೇನೂ ಸಕ್ಸಸ್ ಕಂಡಿಲ್ಲ ಹೀಗಾಗಿ ನಂತರ ಆಫರ್ಗಳು ಕಡಿಮೆಯಾದವು.

 

 

ಆದರೆ ಡಾರ್ಲಿಂಗ್ ಕೃಷ್ಣ ಇದಾವುದಕ್ಕೂ ಎದೆಗುಂದಲಿಲ್ಲ. ತಾವೇ ಸಿನಿಮಾ ಮಾಡಲು ಯೋಚಿಸಿ ಸ್ವತಃ ತಾವೇ ಸ್ಕ್ರಿಪ್ಟ್ ಬರೆದು ನಿರ್ದೇಶನ ಮಾಡಿ ನಟಿಸಿ ಗೆದ್ದಿದ್ದಾರೆ. ಹೀಗಾಗಿ ತಮ್ಮ ಕಷ್ಟದ ದಿನಗಳು ಹಾಗೂ ಹಿಂದಿನ ಚಿತ್ರಗಳನ್ನ ಕುರಿತು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

 

4 ಸಿನಿಮಾಗಳ ಫೋಟೋ, ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ್ದು ಇದು ನನ್ನ ಹತ್ತು ವರ್ಷಗಳ ಅದ್ಬುತ ಪಯಣಗಳನ್ನ ನೆನಪಿಸಿತು. ಡ್ರೀಮ್, ಡ್ರೀಮ್, ಡ್ರೀಮ್, ಎಸ್ ಡ್ರೀಮ್ ಕಂ ಟ್ರೂ. ನಿಮ್ಮ ಬಗ್ಗೆ ನೀವೇ ಸಂದೇಹ ಪಟ್ಟುಕೊಳ್ಳಬೇಡಿ ಎಂದಿದ್ದಾರೆ. ಅಲ್ಲದೆ ಪುನೀತ್ ರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ರವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಮೂಲಕ ತಮ್ಮ ಹಿಂದಿನ ಪಯಣವನ್ನ ನೆನೆದು ಭಾವುಕರಾಗಿದ್ದಾರೆ.

– ಸುಷ್ಮಿತಾ

Advertisement
Share this on...