ಹಿಂದಿ ದಿವಸ್ ಆಚರಣೆ ಕುರಿತು ಡಿಬಾಸ್ ದರ್ಶನ್ ಯಾವ ರೀತಿ ಹೇಳಿದ್ದಾರೆ ಗೊತ್ತಾ?

in ಮನರಂಜನೆ/ಸಿನಿಮಾ 100 views

‘ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು,
ಕಾಮನ ಬಿಲ್ಲನು ಕಾಣುವ ಕವಿಯೊಳು
ತಕ್ಕನೆ ಮನ ಮೈ ಮರೆಯುವುದು.
ಕನ್ನಡ ಕನ್ನಡ ಹ! ಸವಿಗನ್ನಡ,
ಕನ್ನಡದಲಿ ಹರಿ ಬರೆಯುವನು,
ಕನ್ನಡದಲಿ ಹರ ತಿರಿಯುವನು,
ಕನ್ನಡದಲ್ಲಿಯೇ ಬಿನ್ನಹ ಗೈದೊಡೆ
ಹರಿ ವರಗಳ ಮಳೆ ಕರೆಯುವನು
ಹರ ಮುರಿಯದೆ ತಾ ಪೊರೆಯುವನು.
ಬಾಳುಹುದೇತಕೆ ? ನುಡಿ, ಎಲೆ ಜೀವ
ಸಿರಿಗನ್ನದದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ ಕನ್ನಡ ತಾಯಿಯ ಸೇವೆಯ ಮಾಡೆ.

Advertisement

Advertisement

ಅಬ್ಬಾ ಎಂತಹ ಕವಿತೆ. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಕುವೆಂಪು ಅವರ ಈ ಸಾಲುಗಳು ನಮ್ಮ ಕನ್ನಡದ ಮಹತ್ವವನ್ನು ಸಾರುತ್ತದೆ.  ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕುವೆಂಪು ಅವರ ಕವಿತೆಗಳನ್ನು ಓದುತ್ತಿದ್ದರೇ ನಮ್ಮ ನಾಡಲ್ಲಿ ಜನಿಸಿರುವುದೇ ನಮ್ಮ ಪುಣ್ಯ ಎಂದೆನೆಸುತ್ತದೆ. ನಮ್ಮ ಭಾಷೆಗೆ ಸಾವಿರಾರು ವರುಷದ ಇತಿಹಾಸವಿದೆ. ನಮ್ಮ ರಾಜ್ಯದಲ್ಲಿ ಜನಿಸಿದ ರಾಜರು, ಸ್ವಾತಂತ್ರ್ಯ ಹೋರಾಟಗಾರರು , ಕವಿಗಳು ಎಲ್ಲರೂ ಕೂಡ ಭಾರತ ದೇಶದ ಇತಿಹಾಸದಲ್ಲಿ ದಂತಕತೆಯಾಗಿ ಉಳಿದು ಬಿಟ್ಟಿದ್ದಾರೆ. ವಿಜಯನಗರದ ಸಂಸ್ಥಾನ, ಮೈಸೂರು ಸಾಮ್ರಾಜ್ಯ ,ಇವೆಲ್ಲವನ್ನೂ ಒಮ್ಮೆ ಕೇಳಿದರೆ ಈ ರಾಜ್ಯದಲ್ಲಿ ನಾವು ಹುಟ್ಟಿರುವುದೇ ಕೋಟಿ ಜನ್ಮದ ಪುಣ್ಯ ಎನಿಸುತ್ತದೆ.

Advertisement

ಅಲ್ಲದೇ ಪ್ರಾಚೀನ ಕಾಲದಿಂದಲೂ ಸಾಹಿತ್ಯ ಪ್ರಾಕೃತವು ಕರ್ನಾಟಕದಲ್ಲಿ ಮೇಲುಗೈ ಸಾಧಿಸಿದಂತೆ ತೋರುತ್ತದೆ. ರನ್ನ,ಪಂಪ,ಕುವೆಂವು,ಮಾಸ್ತಿ ಈ ರೀತಿಯಾ ಹಲವಾರು ಕವಿಗಳು ನಮ್ಮ ರಾಜ್ಯದ ಹಿರಿಮೆ ಮತ್ತು ಗೌರವವನ್ನು ಶಿಕರಕ್ಕೇರಿಸಿದ್ದಾರೆ. ಇನ್ನು ಗಾನಗಂಧರ್ವ ಡಾ. ರಾಜಕುಮಾರ್ ರವರಂತಹ ಅನೇಕ ಕಲಾವಿದರನ್ನು ದೇವರಂತೆ ಆರಾಧಿಸುವ ನಾಡು ನಮ್ಮ ಈ ಕರುನಾಡು. ನಮ್ಮ ನಾಡಿನ ಜನತೆ ಹೇಗೆಂದರೆ ಕರುಣೆಯಿಂದ ಬಂದವರಿಗೆ ಭಾವಾನತ್ಮಕ ದೃಷ್ಟಿಯಿಂದ ಬದುಕಲು ಜಾಗ ಮಾಡಿಕೊಟ್ಟಿದ್ದಾರೆ.

Advertisement

ಬಂದವನು ಯಾವ ರಾಜ್ಯದವನಾಗಲಿ,ಯಾವ ದೇಶದವನಾಗಲಿ ಕರುನಾಡಲ್ಲಿ ನೆಲೆಯೂರಲು ಅವಕಾಶ ಮಾಡಿಕೊಡುತ್ತಾರೆ. ಆದರೆ ಸದ್ಯದ ಬೆಂಗಳೂರಿನ ಪರಿಸ್ಥತಿ ನೋಡಿದರೆ ನಾವು ಬೇರೆ ರಾಜ್ಯದಲ್ಲಿ ಬದುಕುತ್ತಿದ್ದೇವೋ ಅಥವಾ ಅವರು ನಮ್ಮ ರಾಜ್ಯದಲ್ಲಿ ಬದುಕುತ್ತಿದ್ದಾರೋ ಅನ್ನೋ ಗೊಂದಲ ಉಂಟಾಗುತ್ತದೆ.
ಅದೇನಾಯ್ತೋ ಏನೋ ದಿನಗಳು ಉರುಳಿದಂತೆ ಕನ್ನಡದ ಮಹತ್ವವೇ ಕಡಿಮೆಯಾದಂತೆ ಕಾಣುತ್ತಿದೆ.  ರಾಜಧಾನಿ ಬೆಂಗಳೂರಿನಲ್ಲಂತು ಪರಭಾಷಿಗರ ಹಾವಳಿಯೇ ಜಾಸ್ತಿಯಾಗಿ ಬಿಟ್ಟಿದೆ. ಬೀದಿ ಬೀದಿಯಲ್ಲಿಯೂ ಕನ್ನಡ ಬರದೆಯಿದ್ದರೂ ಪಾನಿಪೂರಿ ಮಾರುತ್ತ ಜೀವನ ಸಾಗಿಸುತ್ತಿದ್ದಾರೆ. ಮೆಟ್ರೋ ಸೆಕ್ಯುರಿಟಿಗಳಿಂದ ಹಿಡಿದು ದೊಡ್ಡ ಐ,ಟಿ ಕಂಪನಿಯವರೆಗೂ ಪರಭಾಷೆಗರ ಪ್ರಮಾಣವೇ ಜಾಸ್ತಿಯಾಗಿದೆ. ಅಲ್ಲ ನಮ್ಮ ಪ್ರಶ್ನೆ ಏನಂದರೆ ಕನ್ನಡಿಗರಿಗೆ ಯಾಕೆ ಅವಕಾಶಗಳು ನೀಡುತ್ತಿಲ್ಲಾ? ಕನ್ನಡಿಗರೇನು ಕೆಲಸಕ್ಕೆ ಬಾರದವರ ಅಥವಾ ದಡ್ಡರ? ಇನ್ನು ಅನ್ಯ ರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಸರಿ. ಆದರೆ ಇಲ್ಲಿಗೆ ಬಂದು ವರುಷಾನುವರುಷಗಳಾದರು ಕನ್ನಡವನ್ನು ಮತ್ರ ಕಲಿಯುತ್ತಿಲ್ಲ. ನಮ್ಮರಾಜ್ಯದಲ್ಲಿಬದುಕು ಕಟ್ಟಿಕೊಳ್ಳಲು, ನೆಲೆಯೂರಲು, ಜೀವಿಸಲು ಎಲ್ಲಾ ರೀತಿಯ ಅವಕಾಶಗಳು ಕೊಟ್ಟರು ಅವರಿಗೆ ಮಾತ್ರ ಕನ್ನಡ ಬಾಷೆ ಬೇಡ. ಇದು ಯಾವ ಮಟ್ಟಿಗೇ ಸರಿ?

ಇದೀಗ ಹಿಂದಿ ದಿವಸ್ ಆಚರಣೆ ಹಾಗೂ ಹಿಂದಿ ಹೇರಿಕೆ ಬೇರಿ ನಡಿಯುತ್ತಿದೆ. ಈ ಕುರಿತು ಕರುನಾಡಲ್ಲಿ ಬಾರಿ ಪ್ರಮಾಣದ ವಿರೋಧ ಹೆಚ್ಚಾಗಿದ್ದು, ಇದಕ್ಕೆ ಕನ್ನಡ ಚಿತ್ರರಂಗದ ನಟರು ಹಾಗೂ ನಿರ್ದೇಶಕರು ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿರುವುದನ್ನು ಖಂಡಿಸಿದ್ದಾರೆ. ಇಗಾಗಲೇ ಆ ದಿನಗಳು ಸಿನಿಮಾದ ನಾಯಕ ನಟ ಕನ್ನಡ ಪ್ರೇಮಿ ಚೇತನ್, ಖ್ಯಾತ ಖಳನಾಯಕ ಪ್ರಕಾಶ್ ರಾಜ್ , ಡಾಲಿ ಧನಂಜಯ್ ಹೀಗೆ ಸಾಕಷ್ಟು ಕಲಾವಿದರುಗಳು ಟ್ವೀಟ್ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ಅಭಿಮಾನಿಗಳ ಬಾಸ್ , ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸ್ ಆಚರಣೆ ಕುರಿತು ಖಂಡಿಸಿದ್ದು, ತನ್ನ ಕೊನೆಯುಸಿರಿರುವವರೆಗೂ ಕನ್ನಡ ಪರ ನಿಲುತ್ತೇನೆ ಎಂದು ಕನ್ನಡ ಪರ ನಿಂತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು “”ಬಹಳ ವರ್ಷಗಳಿಂದಲೂ ಈ ಹಿಂದಿ ಹೇರಿಕೆ ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಬಾರ್ಡರ್ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ಇದನ್ನು ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಮುಂದೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನಗಳು ಹತ್ತಿರದಲ್ಲೇ ಇದೆ.”ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಭಾರತ ಸಂವಿಧಾನದ ಪ್ರತೀಕವಾಗಿದೆ.”ಯಾವುದೋ ಉತ್ತರದ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯಕರ ಸಂಗತಿಯೆಂದರೆ ತಪ್ಪಾಗಲಾರದು. ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ”  ಎಂದು ದರ್ಶನ್ ಟ್ವೀಟ್ ಮಾಡುವ ಮೂಲಕ  ತಮ್ಮ ಆಕ್ರೋಶ ವನ್ನು ಹೊರಹಾಕಿದ್ದಾರೆ.

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...