ನಿಜವಾಗಲೂ ದರ್ಶನ್ ಅವರು ಕೊರೋನಾ ಕಷ್ಟಕ್ಕೆ ದಾನ ಮಾಡಿದ್ದು ಎಷ್ಟು ಗೊತ್ತಾ?

in ಕನ್ನಡ ಮಾಹಿತಿ 98 views

ಚೈನಾದಿಂದ ಆರಂಭವಾದ ಮಹಾಮಾರಿ ಕೊರೋನಾ ಇಂದ ಭಾರತ ದೇಶವು ಕೂಡ ಬಂದಾಗಿದ್ದು ಇದರಿಂದ ಬಡವರು ಬಹಳ ಕಷ್ಟವನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ. ಇದರ ನಡುವೆ ಸಿನಿಮಾ ರಂಗದ ಸೂಪರ್ ಸ್ಟಾರ್ ಗಳು , ಉದ್ಯಮಿಗಳು, ಸ್ವಯಂ ಸೇವಕ ಸಂಘದವರು ಬಡವರಿಗೆ ಸಹಾಯ ಮಾಡಲು ಮುಂದಾಗಿರುವುದು ನಿಜಕ್ಕೂ ಪ್ರತಿಯೊಬ್ಬರು ಮೆಚ್ಚುವಂತಹ ವಿಚಾರ. ಮೊನ್ನೆಯಷ್ಟೇ ದೊಡ್ಡಮನೆ ಹುಡುಗ ಕರುನಾಡ ಕುವರ ಡಾಕ್ಟರ್ ರಾಜ್ ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ ಅವರು ಐವತ್ತು ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ಕೊಟ್ಟಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಷ್ಟವೆಂದಾಗ ಬರುವ ದರ್ಶನ್ ಅವರು ಎಲ್ಲಿ ಕಾಣುತ್ತಿಲ್ಲ ಎಂಬ ಪ್ರಶ್ನೆಗಳು ಓಡಾಡುತ್ತಿದ್ದವು. ಆದರೆ ಇದೀಗ ದರ್ಶನ್ ಅವರು ಎಂತಹ ಕೆಲಸ ಮಾಡಿದ್ದಾರೆ, ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂಬುದು ಬಯಲಾಗಿದೆ.

Advertisement

 

Advertisement

Advertisement

 

Advertisement

ಹೌದು ಚಾಲೆಂಜಿಂಗ್ ಸ್ಟಾರ್ ,ಡಿ ಬಾಸ್ ಎಂದೇ ಖ್ಯಾತರಾಗಿರುವ ದರ್ಶನ್ ಅವರು ಮಾಡಿರುವ ಈ ಕೆಲಸಕ್ಕೆ ಅಭಿಮಾನಿಗಳು ಮಾತ್ರವಲ್ಲ ಮೈಸೂರಿನ ಸಂಸದರಾದ ಪ್ರತಾಪ್ ಸಿಂಹ ಅವರು ಕೂಡ ಫಿದಾ ಆಗಿದ್ದು ದರ್ಶನ್ ಅವರಿಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ . ತಮಗೆ ತಿಳಿದಿರುವ ಹಾಗೆ ದರ್ಶನ್ ಅವರು ತಾವು ಮಾಡುವ ಕೆಲಸವನ್ನು ಅಧಿಕೃತವಾಗಿ ಎಲ್ಲಿಯೂ ಕೂಡ ತೋರಿಸಿಕೊಳ್ಳುವುದಿಲ್ಲ. ಆದರೆ ಅವರ ಅಭಿಮಾನಿಗಳಿಂದ ಈ ಕೆಲಸಗಳು ಬಯಲಿಗೆ ಬರುತ್ತದೆ. ತಾವು ಮಾಡುವ ಕೆಲಸದ ಲೆಕ್ಕ ದೇವರಿಗೆ ಮಾತ್ರ ನೀಡುಬೇಕು ಎಂದು ಬದುಕುತ್ತಿರುವ ಅವರು, ಇದೀಗ ಭಾರತ ಬಂದ್ ಆಗಿರುವ ಕಾರಣ ಅದೆಷ್ಟೋ ಜನರು ಒಂದು ಹೊತ್ತು ಊಟವಿಲ್ಲದೆ ಬಳಲುತ್ತಿದ್ದಾರೆ.

 

 

ಅಂತಹ ಬಡವರಿಗೆ ತಮ್ಮ ಅಭಿಮಾನಿಗಳ ಮೂಲಕ ಆಹಾರ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹೌದು ಭಾರತ ಬಂದ್ ಆದ ದಿನದಿಂದ ರಸ್ತೆ ಬದಿಯಲ್ಲಿ ವಾಸಿಸುವ ಬಡವರಿಗೆ ಬೆಳಿಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಮೈಸೂರಿನ ನಂಜರಾಜ್ ಬಹದ್ದೂರ್ ಚಿತ್ರದಲ್ಲಿ ಊಟದ ವ್ಯವಸ್ಥೆಯನ್ನು ದರ್ಶನ್ ಮಾಡಿದ್ದಾರೆ. ಪ್ರತಿದಿನ ೫೦೦ ರಿಂದ ೬೦೦ ಜನರ ಹಸಿದ ಹೊಟ್ಟೆಯನ್ನು ತುಂಬಿಸುವ ಪುಣ್ಯದ ಕೆಲಸವನ್ನು ಮಾಡುತ್ತಿದ್ದು ಊಟದ ಜೊತೆಗೆ ಕಾಫಿ ಟೀ ಕೂಡ ಒದಗಿಸುತ್ತಿದ್ದು ನಿರ್ಗತಿಕರನ್ನು ತಮ್ಮ ಮನೆಯವರಂತೆ ನೋಡುತ್ತಿದ್ದಾರೆ .

 

 

ಈ ಕಾರ್ಯಕ್ರಮವನ್ನು ಕಣ್ಣಾರೆ ಕಂಡ ಸಂಸದ ಪ್ರತಾಪ್ ಸಿಂಹ ಅವರು ಐನೂರು ಜನರಿಗೆ ಊಟ ಒದಗಿಸುವುದು ತಮಾಷೆಯ ವಿಚಾರವಲ್ಲ. ತಾಯಿ ಚಾಮುಂಡೇಶ್ವರಿ ದರ್ಶನ ವರಿಗೆ ಈ ರೀತಿಯಾದ ಇನ್ನಷ್ಟು ಕೆಲಸವನ್ನು ಮಾಡುವ ಶಕ್ತಿಯನ್ನು ನೀಡಲಿ ಎಂದು ಮನ ತುಂಬಿ ಹಾರೈಸಿ ಕೈಮುಗಿದಿದ್ದಾರೆ. ಎಲ್ಲರ ಕಣ್ಣಿಗೆ ಕಾಣುವಂತೆ ಮಾಡುವುದು ಸಹಾಯವಲ್ಲ ಈ ರೀತಿ ಯಾರಿಗೂ ಗೊತ್ತಾಗದಂತೆ ಮಾಡುವುದೇ ನಿಜವಾದ ಸಹಾಯ. ಅದರಲ್ಲೂ ಹಸಿದವರಿಗೆ ಊಟ ಹಾಕುವುದು ನೂರು ಕೋಟಿ ದುಡ್ಡು ಕೊಟ್ಟಿದ್ದಕ್ಕಿಂತಲೂ ದೊಡ್ಡದು ಅಲ್ಲವೇ ?
All Rights Reserved Namma Kannada Entertainment.

Advertisement
Share this on...