ಟಿಕ್ ಟಾಕ್ ಖಾತೆ ಡಿಲಿಟ್ ಮಾಡಿ ದೇಶಪ್ರೇಮ ತೋರಿದ ಡಿಬಾಸ್ !

in ಕನ್ನಡ ಮಾಹಿತಿ/ಮನರಂಜನೆ 91 views

ದೇಶದಲ್ಲಿ ಚೀನಾ ವಸ್ತುಗಳನ್ನು ನಿಷೇಧ ಮಾಡಬೇಕು ಎಂದು ಸಾಕಷ್ಟು ಯುವ ಪೀಳಿಗೆಗಳು ಧ್ವನಿ ಎತ್ತಿದ್ದಾರೆ. ಬರೀ ಅಭಿಯಾನವಾಗಿಯೇ ಉಳಿಯದೇ ಸಾಕಷ್ಟು ಮಂದಿ ಚೀನಾ ವಸ್ತುಗಳನ್ನು ಮತ್ತು ಅಪ್ಲಿಕೇಷನ್ ಗಳನ್ನು ಬಳಸದಂತೆ ಸ್ವಯಂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೇ ಚೀನಾ ವಸ್ತುಗಳನ್ನು ಬಳಸಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವೆ ಪ್ರಾರಂಭವಾಗಿದೆ.ಇದೀಗ ಕನ್ನಡದ ಹೆಮ್ಮೆಯ ನಟ, ಅಭಿಮಾನಿಗಳ ಡಿ.ಬಾಸ್ ಸ್ಯಾಂಡಲ್ ವುಡ್ ನ ಬ್ರಾಂಡ್ ಅಂತೆಲ್ಲ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕೂಡ ಚೀನಾ ವಸ್ತು ಹಾಗೂ ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿದ್ದು, ಈ ವಿಚಾರವಾಗಿ ದರ್ಶನ್ ಫ್ಯಾನ್ಸ್ ಮೊದಲು ಟಿಕ್ ಟಾಕ್ ಗೆ ಗುಡ್ ಬೈ ಹೇಳಿದ್ದಾರೆ. ಟಿಕ್ ಟಾಕ್ ನಲ್ಲಿಯೂ ಡಿಬಾಸ್ ಹೆಸರು ದಾಖಲೆ ನಿರ್ಮಿಸಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ದರ್ಶನ್ ಅಭಿಮಾನಿಗಳು ಖಾತೆ ಡಿಲೀಟ್ ಮಾಡಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ.

Advertisement

 

Advertisement

Advertisement

ಟಿಕ್ ಟಾಕ್ ನಲ್ಲಿ ಡಿ ಖಾತೆ ಅತೀ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದ ಖಾತೆಯಾಗಿತ್ತು. 23 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಂತಹ ಈ ಖಾತೆ ಸಾಕಷ್ಟು ವಿಡಿಯೋಗಳನ್ನು ಕೂಡ ಶೇರ್ ಮಾಡಿದ್ದರು. ಶೇರ್ ಮಾಡಿದ್ದ ವಿಡಿಯೋಗಳೆಲ್ಲಾ ಲಕ್ಷಗಟ್ಟಲೆ ಲೈಕ್ಸ್ ಗಳನ್ನು ಡಿ ಖಾತೆ ಗಿಟ್ಟಿಸಿಕೊಳ್ಳುತ್ತಿತ್ತು. ಆದರೀಗ ಡಿ ಖಾತೆ ಡಿಲೀಟ್ ಮಾಡಲಾಗಿದ್ದು, ಚೀನಾ ವಸ್ತುಗಳನ್ನು, ಅಪ್ಲಿಕೇಷನ್ ಅನ್ನು ಬಳಸದಂ ತೆ ಸಂದೇಶ ನೀಡಿದ್ದಾರೆ.

Advertisement

ತಮಗೆಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಮತ್ತು ಡಿ ಬಾಸ್ ಎಂಬ ಹೆಸರು ಎಲ್ಲಿ ನೋಡಿದರು ಸಹ ಟ್ರೆಂಡಿಂಗ್ ನಲ್ಲಿ ಇದ್ದೇ ಇರುತ್ತದೆ. ಇನ್ನೂ ಟಿಕ್ ಟಾಕ್ ನಲ್ಲಿಯೂ ಕೂಡ ದರ್ಶನ್ ಅವರ ಹೆಸರು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದು ಟಿಕ್ ಟಾಕ್ ನಲ್ಲಿ ಅತೀ ಹೆಚ್ಚು ಬಳಕೆಯಾದ ಹ್ಯಾಶ್ ಟ್ಯಾಗ್ ದರ್ಶನ್ ಅವರ ಹೆಸರು. ಇತ್ತೀಚಿಗೆ ಸುದ್ದಿ ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗಿದ್ದು, ದರ್ಶನ್ ಸಿನಿಮಾದ ಡೈಲಾಗ್ ಮತ್ರು ಹಾಡುಗಳನ್ನು ಹೆಚ್ಚಾಗಿ ಬಳಸಿಕೊಂಡು ಅಪ್ ಲೋಡ್ ಮಾಡುತ್ತಿದ್ದರು. ಇನ್ನು ಡಿ ಬಾಸ್ ಹ್ಯಾಶ್ ಟ್ಯಾಗ್ 3 ಬಿಲಿಯನ್ ಗೂ ಹೆಚ್ಚು ಬಾರಿ ಬಳಸಲಾಗಿದ್ದು, ದಾಖಲೆಯನ್ನೆ ಬರೆದಿತ್ತು.

 

ಇದೀಗ ಈ ಖಾತೆಯನ್ನು ಡಿಲಿಟ್ ಮಾಡಲಾಗಿದ್ದು, ‘ಟಿಕ್ ಟಾಕ್ ಅಪ್ಲಿಕೇಷನ್ ಅಲ್ಲಿ ಇದ್ದ ನಮ್ಮ ತೂಗುದೀಪ ‘ಡಿ’ ಟೀಮ್ ಖಾತೆಯನ್ನು ಪರಮನೆಂಟ್ ಆಗಿ ಡಿಲೀಟ್ ಮಾಡಲಾಗಿದೆ ಚೀನಾದ ಅಪ್ಲಿಕೇಷನ್ ಗಳನ್ನ ಮೊಬೈಲಿನಿಂದ ಕಿತ್ತು ಬಿಸಾಕೋಣ. ಟಿಕ್ ಟಾಕ್ ಸೇರಿದಂತೆ ಹಲವು ಅಪ್ಲಿಕೇಷನ್ ಗಳನ್ನು ಅನ್ ಇನ್ಸ್ಟಾಲ್ ಮಾಡಿದ್ದೇವೆ. ಇದು ಚೀನಾದ ವಿರುದ್ಧದ ನಮ್ಮ ಹೋರಾಟ. ನೀವೂ ಮಾಡಿ.. ಒತ್ತಾಯಿಸ್ತಿಲ್ಲ.’ ಎಂದು ಬರೆದುಕೊಂಡಿದ್ದಾರೆ.

Advertisement
Share this on...