ದೇವರ ನಾಡಲ್ಲಿ ದೆವ್ವದ ಕೆಲಸ ಮಾಡಿದವರಿಗೆ ದರ್ಶನ್ ಮಾಡಿದ್ದೇನು ಗೊತ್ತಾ ?

in News/ಸಿನಿಮಾ 28 views

ಗರ್ಭಿಣಿ ಆನೆಯೊಂದು ತನಗೆ ಆಹಾರ ಸಿಕ್ಕ ಖುಷಿಯಲ್ಲಿ ಸ್ಫೋಟಕ ಹಣ್ಣನ್ನು ತಿಂದು ಹೊಟ್ಟೆಯೊಳಗೆ ಸಿಡಿದ ಪರಿಣಾಮವಾಗಿ ನೀರಲ್ಲಿ ಇಳಿದು ಆನೆ ಮೃತಪಟ್ಟಿದೆ. ಈ ಸುದ್ದಿ ದೇಶದಾದ್ಯಂತ ಎಲ್ಲಾ ಕಡೆ ಹರಡಿದೆ. ಆನೆ ಯಾವುದೇ ಸಿಕ್ಕಂತ ಹಣ್ಣನ್ನು ತಿಂದಿಲ್ಲ ಬೇಕಂತಲೇ ಯಾರೋ ಕಿಡಿಗೇಡಿಗಳು ಅನಾನಸ್ ಹಣ್ಣಿಗೆ ಸ್ಫೋಟಕವನ್ನು ತುಂಬಿ ಆನೆಗೆ ಕೊಟ್ಟಿದ್ದಾರೆ ಹೀಗಾಗಿ ಆನೆ ಸಾವನ್ನಪ್ಪಿದೆ . ಈ ಘಟನೆಗೆ ದೇಶದಾದ್ಯಂತ ಖಂಡನೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಇದೊಂದು ಅಮಾನವೀಯ ಕೃತ್ಯ ಎಂದು ಹೇಳುತ್ತಿದ್ದಾರೆ.
ಪ್ರಾಣಿ ಪ್ರಿಯರಾದ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೊಂದು ಹೀನ ಕೃತ್ಯ ಎಂದು ಹೇಳುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇಂತಹ ಹೀನವಾದ ಘಟನೆ ಎಲ್ಲಿಯೂ ಕೂಡ ನಡೆಯಬಾರದು.  ಮಾನವನಿಗಿಂತ ಪ್ರಪಂಚದಲ್ಲಿ ಕೆಟ್ಟದಾದ ಪ್ರಾಣಿ ಇನ್ನೊಂದಿಲ್ಲ . ಸಾಮಾಜಿಕ ಜಾಲತಾಣದಲ್ಲಿ ಕೇರಳದಲ್ಲಿ  ಮೃತಪಟ್ಟ ಈ ಆನೆಯ ಸುದ್ದಿಯೇ ಹರಿದಾಡುತ್ತಿದೆ. ಎಲ್ಲರೂ ಹೀನ ಕೃತ್ಯದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.

Advertisement

 

Advertisement

Advertisement

ಈ ಘಟನೆಯನ್ನು ಖಂಡಿಸಿ ಇಂತಹ ಅಮಾನುಷ ಕೃತ್ಯವನ್ನು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಅಭಿಯಾನಗಳನ್ನು ಆರಂಭಿಸಿದ್ದಾರೆ. ಈ ವಿಷಾದಕರ ಘಟನೆಗೆ ಚಿತ್ರರಂಗದ ಸ್ಟಾರ್ ನಟ ನಟಿಯರು ಕೂಡ ತಮ್ಮ ಸಿಟ್ಟು, ಕೋಪ, ಅಸಮಾಧಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಇಂತಹ ಘಟನೆಯನ್ನು ವಿರೋಧಿಸುತ್ತಿದ್ದಾರೆ. ಈ ಘಟನೆಯ ಬಗ್ಗೆ ಚಿತ್ರರಂಗ ಮಾತ್ರವಲ್ಲದೆ ವಿರಾಟ್ ಕೊಹ್ಲಿ, ರತನ್ ಟಾಟಾ ಸೇರಿದಂತೆ ಎಲ್ಲ ಕ್ಷೇತ್ರದ ದೊಡ್ಡ ಗಣ್ಯರು ಕೂಡಾ ಈ ಘಟನೆಯ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಸಾಲಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಸೇರಿದ್ದು ನಿನ್ನೆಯಿಂದ ನನಗೆ ನಿದ್ದೆಯೇ ಬರುತ್ತಿಲ್ಲ ನನ್ನ ನೆಚ್ಚಿನ ಪ್ರಾಣಿ ಆನೆ, ಯಾವ ಪ್ರಾಣಿಯನ್ನು ಕೂಡ ಮನುಷ್ಯ ಇಷ್ಟು ಕೆಟ್ಟದಾಗಿ ನಡೆಸಿ ಕೊಳ್ಳಬಾರದು.

Advertisement

 

ಇಷ್ಟು ಕ್ರೂರವಾಗಿ ಕೊಲ್ಲಬಾರದು. ನಿಜಕ್ಕೂ ಎಲ್ಲಕ್ಕಿಂತ ಕೆಟ್ಟ ಪ್ರಾಣಿ ಎಂದರೆ ಅದು ಮನುಷ್ಯ. ಆದರೆ ಈ ಘಟನೆಯ ನಂತರ ನಾನು ಮನುಷ್ಯ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತಿದೆ ಎಂದು ಆಪ್ತರ ಬಳಿ ಕಣ್ಣೀರು ಹಾಕಿದ್ದಾರೆ. ಮೊದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಾಣಿ ಪ್ರೇಮಿ. ತಮ್ಮ ಫಾರ್ಮ್ ಹೌಸ್ ನಲ್ಲಿ ಹಲವು ಪ್ರಾಣಿಗಳನ್ನು ಸಾಕಿದ್ದಾರೆ ಅಲ್ಲದೆ ಹಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಇಂತಹ ಪ್ರಾಣಿ ಪ್ರೇಮಿಗಳಿಗೆ ಈ ಘಟನೆಯಿಂದ ನೋವಾಗುವುದು  ಸಹಜ  ಈ ಘಟನೆಯಿಂದ ನಿಮಗೂ ನೋವಾಗಿದ್ದರೆ ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

Advertisement
Share this on...