ಸ್ಟಾರ್ ಎಂಬ ಅಹಂ ಇಲ್ಲದೆ ಮಗುವಿನೊಂದಿಗೆ ಮಗುವಾದ ದರ್ಶನ್…ವಿಡಿಯೋ ವೈರಲ್ !

in ಕನ್ನಡ ಮಾಹಿತಿ/ಸಿನಿಮಾ 147 views

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಅವರು ನಟ ಎನ್ನುವುದಕ್ಕಿಂತ ಒಂದೊಳ್ಳೆ ಮನಸ್ಸಿರುವ ವ್ಯಕ್ತಿ ಎಂದರೂ ತಪ್ಪಿಲ್ಲ. ಆದ್ದರಿಂದ ಅಭಿಮಾನಿಗಳ ಬಳಿ ಪ್ರೀತಿಯಿಂದ ಯಜಮಾನ, ಡಿ ಬಾಸ್​, ಗಜ, ಯೋಧ, ದಚ್ಚು ಎಂದೆಲ್ಲಾ ಕರೆಸಿಕೊಳ್ಳುತ್ತಾರೆ.ಪ್ರಾಣಿ ಪಕ್ಷಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ದರ್ಶನ್,  ಮೈಸೂರು ರಸ್ತೆಯಲ್ಲಿ ದೊಡ್ಡ ಫಾರಂ ಹೌಸ್ ಹೊಂದಿದ್ದಾರೆ. ಸ್ವಲ್ಪ ಬಿಡುವು ದೊರೆತರೆ ಸಾಕು ಫಾರಂ ಹೌಸ್​​​​​ಗೆ ತೆರಳುವ ಅವರು, ಪ್ರೀತಿಯ ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ. ಫಾರಂಹೌಸ್​​​ನಲ್ಲಿ ಪ್ರಾಣಿಗಳಿಗಾಗಿ ಹುಲ್ಲು ಕತ್ತರಿಸುತ್ತಾರೆ, ಹಾಲು ಕರೆಯುತ್ತಾರೆ, ಕುದುರೆಗಳ ಮಾಲಿಶ್ ಮಾಡುತ್ತಾರೆ, ಫಾರಂಹೌಸ್ ಕ್ಲೀನ್ ಮಾಡುತ್ತಾರೆ, ಕುದುರೆ ಸವಾರಿ ಮಾಡುತ್ತಾರೆ.ಇದೀಗ ದರ್ಶನ್ ಪುಟ್ಟ ಮಗುವಿಗೆ ತುತ್ತು ತಿನ್ನಿಸಿ ಮಗುವಿನೊಂದಿಗೆ ಮಗುವಾಗಿ ಎಂಜಾಯ್ ಮಾಡಿದ್ದಾರೆ.

Advertisement

 

Advertisement

Advertisement

‘ಜಯಮ್ಮನ ಮಗ’ ಚಿತ್ರದ ನಿರ್ಮಾಪಕ ರಮೇಶ್ ದರ್ಶನ್ ಅವರಿಗೆ ಆತ್ಮೀಯರು. ರಮೇಶ್ ಅವರ ಅಳಿಯ ಚೇತನ್ ರಾಜ್​ ಕೂಡಾ ‘ಕಮರೊಟ್ಟು ಚೆಕ್​​ಪೋಸ್ಟ್’ ಚಿತ್ರವನ್ನು ನಿರ್ಮಿಸಿದ್ದಾರೆ. ರಮೇಶ್ ಅವರ ಮನೆಯಲ್ಲಿ ಏನೇ ಕಾರ್ಯಕ್ರಮ ಜರುಗಿದರೂ ದರ್ಶನ್​​ಗೆ ಆಹ್ವಾನವಿರುತ್ತದೆ. ಇತ್ತೀಚೆಗಷ್ಟೇ ದರ್ಶನ್ ಅವರಿಗೆ ರಮೇಶ್ ನಾನ್​​​​​ವೆಜ್ ಊಟಕ್ಕಾಗಿ ಆಹ್ವಾನಿಸಿದ್ದಾರೆ. ದರ್ಶನ್ ಕೂಡಾ ರಮೇಶ್ ಅವರ ಆಹ್ವಾನಕ್ಕೆ ಗೌರವ ನೀಡಿ ಪ್ರೀತಿಯಿಂದಲೇ ಅವರ ಮನೆಗೆ ಹೋಗಿದ್ದಾರೆ.

Advertisement

ರಮೇಶ್​ ಅವರ ಮನೆಯಲ್ಲಿ ಅವರ ಮೊಮ್ಮಗುವಿನೊಂದಿಗೆ ದರ್ಶನ್ ಆಟವಾಡಿದ್ದಾರೆ. ಮಗುವನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಅದಕ್ಕೆ ತುತ್ತು ತಿನ್ನಿಸಿದ್ದಾರೆ. ಊಟ ಆದ ನಂತರ ಕೂಡಾ ಮಗುವಿನೊಂದಿಗೆ ಸ್ವಲ್ಪ ಹೊತ್ತು ಆಟವಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಾನೊಬ್ಬ ಸ್ಟಾರ್ ಎಂಬ ಅಹಂ ಸ್ವಲ್ಪವೂ ಇಲ್ಲದೆ ಮಗುವಿನೊಂದಿಗೆ ಮಗುವಾಗಿರುವ ದರ್ಶನ್ ಅವರ ಸರಳತೆಯನ್ನು ನೋಡಿ ನೆಟಿಜನ್ಸ್ ಫಿದಾ ಆಗಿದ್ದಾರೆ.

Advertisement
Share this on...