ಏನಿದು ವಿವಾದ ? ಸಾಮಾಜಿಕ ಜಾಲತಾಣದಲ್ಲೇಕೆ ಆಕ್ರೋಶ !

in ಮನರಂಜನೆ/ಸಿನಿಮಾ 64 views

ಧೈರ್ಯ, ಸಾಹಸ, ರಾಷ್ಟ್ರಪ್ರೇಮ, ನಿಸ್ವಾರ್ಥ ಗುಣಗಳಿಂದಲೇ ಪ್ರಜೆಗಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ನಾಡಪ್ರಭು ಕೆಂಪೇಗೌಡ ಅವರನ್ನು ಆಗಿನ ಜನರು ಜೀವಂತ ದೇವರಂತೆ ಕಾಣುತ್ತಿದ್ದರು. ಕನ್ನಡ ನಾಡಿನಲ್ಲಿ ಅತಿ ಶ್ರೇಷ್ಠ ಪ್ರಜಾ ಪರಿಪಾಲಕರ ಪೈಕಿ ಕೆಂಪೇಗೌಡರು ವಿಶೇಷ ಸ್ಥಾನ ಗಳಿಸಿದ್ದಾರೆ. ಯಲಹಂಕದಲ್ಲಿ ಕ್ರಿ.ಶ 1510ರಲ್ಲಿ ಜನಿಸಿದ ಕೆಂಪೇಗೌಡರು, ವಿಜಯನಗರ ಚಕ್ರೇಶ್ವರ ಶ್ರೀಕೃಷ್ಣದೇವರಾಯರ ಪರಮಾಪ್ತ ಮಾಂಡಲೀಕರಾಗಿದ್ದರು. ಕುಲದೇವತೆಯಾದ ಕೆಂಪಮ್ಮ ಹಾಗೂ ಭೈರವರ ಅನುಗ್ರಹದಿಂದ ಜನಿಸಿದ ಕಾರಣ ಕೆಂಪನಂಜೇಗೌಡ ದಂಪತಿಗಳು ಮಗುವಿಗೆ ಕೆಂಪ, ಕೆಂಪಯ್ಯ, ಕೆಂಪಣ್ಣ ಎಂಬ ಹೆಸರಿನಿಂದ ಕರೆಯುತ್ತಿರುತ್ತಾರೆ. ಬಾಲಕ ಕೆಂಪಯ್ಯನನ್ನು ಪ್ರಜೆಗಳು ಗೌರವಾದರದಿಂದ, ಚಿಕ್ಕರಾಯ, ಕೆಂಪರಾಯ ಎಂದು ಸಂಭೋಧಿಸುತ್ತಿರುತ್ತಾರೆ. ಕ್ರಿ.ಶ 1537ರಲ್ಲಿ ಈ ಅತ್ಯದ್ಭುತ ಬೆಂಗಳೂರು ನಗರ ಹಾಗೂ ಆಗಿನ ಬೆಂದಕಾಳೂರನ್ನು ಕಟ್ಟಿದರು. ಎಲ್ಲವೂ ಅಂದುಕೊಂಡಂತೆ ನಡೆದುದರ ಪರಿಣಾಮ ಕೆಂಪೇಗೌಡರ ಕನಸಿನ ಬೆಂಗಳೂರು ನಗರದ ನಿರ್ಮಾಣ ಕಾರ್ಯ 1537ರಲ್ಲಿ ನಾಡಿನ ಪ್ರಮುಖರ ಸಮ್ಮುಖದಲ್ಲಿ ಗುದ್ದಲಿ ಪೂಜೆಯೊಂದಿಗೆ ಶುರುವಾಗುತ್ತದೆ.

Advertisement

 

Advertisement

Advertisement

ಮೂಲತಃ ಕೃಷಿಕ ಕುಟುಂಬದಿಂದ ಬಂದವರಾದ ಕೆಂಪೇಗೌಡರು ಹೊನ್ನಾರು ಕಟ್ಟುವ ಆಚರಣೆಯಿಂದ ರಾಜಧಾನಿಯ ನಿರ್ಮಾಣ ಕಾರ್ಯ ಆರಂಭಿಸುತ್ತಾರೆ. ಅರ್ಚಕರು ನಿರ್ಧರಿಸಿದಂಥ ಶುಭಕಾಲದಲ್ಲಿ ಈಗಿನ ದೊಡ್ಡಪೇಟೆ ಮತ್ತು ಚಿಕ್ಕಪೇಟೆ ರಸ್ತೆಗಳು ಸಂಧಿಸುವ ಪ್ರದೇಶದಲ್ಲಿ ನಾಲ್ಕು ನೇಗಿಲಿಗೆ ಆರು ಕಟ್ಟಿ ತಯಾರಾಗಿ ನಿಂತಿದ್ದ ನಾಲ್ವರು ರೈತರನ್ನೂ ನಾಲ್ಕು ದಿಕ್ಕಿಗೆ ಸಾಗುವಂತೆ ತಿಳಿಸಿದರು. ಎತ್ತುಗಳು ನಿಂತ ಜಾಗವೇ ಎಲ್ಲೆಯೆಂದು ತಿಳಿದುಕೊಳ್ಳುವ ತೀರ್ಮಾನಕ್ಕೆ ಬರಲಾಗಿತ್ತು. ಪೂರ್ವಕ್ಕೆ ಹಲಸೂರು ಬಾಗಿಲು, ಪಶ್ಚಿಮಕ್ಕೆ ಅರಳೇ ಪೇಟೆ, ಉತ್ತರದಲ್ಲಿ ಯಲಹಂಕ ಮತ್ತು ದಕ್ಷಿಣದಲ್ಲಿ ಆನೆಕಲ್ (ಸಿಟಿ ಮಾರುಕಟ್ಟೆ) ಬಾಗಿಲವರೆಗೆ ಈ ಎತ್ತುಗಳು ಸಾಗಿ ನಿಂತವು ಅಲ್ಲೆಲ್ಲ ಗುರುತಿಗಾಗಿ ಕಲ್ಲುಗಳನ್ನು ನೆಡಲಾಯಿತು. ಈ ಜಾಗಗಳಲ್ಲಿ ಪ್ರಮುಖ ಪ್ರವೇಶದ್ವಾರಗಳನ್ನು ನಿರ್ಮಿಸಲು ತೀರ್ಮಾನಿಸಲಾಯಿತು. ಕೋಟೆಯ ಹೆಬ್ಬಾಗಿಲು ಈಗಿನ ವಿಕ್ಟೋರಿಯಾ ಆಸ್ಪತ್ರೆಯ ಬಳಿಯ ಕೋಟೆಯಲ್ಲಿತ್ತು. ರಾಜಧಾನಿಗೆ ನವದ್ವಾರಗಳಿರಬೇಕು, ದೇವಾಲಯಗಳಲ್ಲಿ ಪ್ರತಿದಿನವೂ ಪೂಜೆಗಳು ನಡೆಯುತ್ತಿರಬೇಕು ಮತ್ತು ಒಂಬತ್ತು ಕೆರೆಗಳು ಸದಾ ಕಾಲ ನೀರಿನಿಂದ ತುಂಬಿರಬೇಕೆಂಬುದು ಗೌಡರ ಆಶಯವಾಗಿತ್ತು, ಗೌಡರ ಇಚ್ಛೆಯಂತೆ ಕೋಟೆಗೆ ನಾಲ್ಕು ಮಹಾದ್ವಾರಗಳನ್ನೂ, ಐದು ಕಿರಿ ದ್ವಾರಗಳನ್ನು ನಿರ್ಮಿಸಲಾಯಿತು. ಮತ್ತು ರಕ್ಷಣೆಗಾಗಿ ಕೆಲ ರಹಸ್ಯ ದ್ವಾರಗಳನ್ನು ಇಡಲಾಯಿತು.

Advertisement

 

 

ಕೆಂಪೇಗೌಡರೂ ಸಹ ತಂದೆಯವರಂತೆ ಕೃಷಿ ಮತ್ತು ಗೃಹ ಬಳಕೆಗೆ ಸಂಬಂಧಿಸಿದಂತೆ ನೀರಿನ ಪೂರೈಕೆ ವಿಷಯದಲ್ಲಿ ಆಸಕ್ತಿ ಉಳ್ಳವರಾಗಿದ್ದರು. ಇನ್ನು ನಗರ ನಿರ್ಮಾಣಕ್ಕೆ ನಿಂತ ಮೇಲೆ ನೀರಿನ ಸಮರ್ಪಕ ಸರಬರಾಜು ಅಗತ್ಯವೆಂಬ ಅರಿವು ನಾಡಪ್ರಭುಗಳಿಗಿತ್ತು. ಇದರಿಂದಾಗಿಯೇ ಕೆಂಪೇಗೌಡರು ಸುಭದ್ರವಾದ ರಾಜಧಾನಿಯ ನಿರ್ಮಾಣದ ಜೊತೆಗೆ ಬೆಂಗಳೂರು ಸೇರಿದಂತೆ ನಾಡಿನ ತುಂಬಾ ಹಲವು ಕೆರೆ ಕಟ್ಟೆಗಳನ್ನೂ ನಿರ್ಮಿಸಿದರು. ನಾಡಿನ ಇತಿಹಾಸದಲ್ಲಿ ಯಾವುದೇ ಸ್ವತಂತ್ರ ರಾಜರೂ ಸಹ ತಮ್ಮ ಅವಧಿಯಲ್ಲಿ ಇಷ್ಟು ಕೆರೆಗಳನ್ನು ಕಟ್ಟಿಸಿರುವುದು ಕಂಡುಬರುವುದಿಲ್ಲ ಎಂಬುದು ಇವರ ಹೆಗ್ಗಳಿಕೆ. ಇನ್ನು ಅವರ ಮಾಡಿರುವ ಕಾರ್ಯ ಮತ್ತು ಕೆಲಸಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಇನ್ನು ನೆನ್ನೆ ಈ ನಾಡಫ್ರಭು ಕೆಂಪೇಗೌಡರ ಜಯಂತಿ.. ಈ ವಿಶೇಷ ದಿನದಂದು ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಡವಟ್ಟು ಮಾಡಿಕೊಂಡಿದ್ದು, ಬಾರಿ ಚರ್ಚೆಗೆ ಕಾರಣವಾಗಿದೆ !

 

ಬೆಂಗಳೂರಿನ ಉಗಮಕ್ಕೆ ಕಾರಣರಾದವರು ನಾಡಪ್ರಭು ಕೆಂಪೇಗೌಡರು. ಅವರು ಕಟ್ಟಿದ ಈ ನಗರ ಇಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ನಿನ್ನೆ ಕೆಂಪೇಗೌಡರ ಜಯಂತಿ. ಈ ವೇಳೆ ಅನೇಕರು ಶುಭಾಶಯ ತಿಳಿಸಿದ್ದರು. ಜೊತೆಗೆ ನಟ ದರ್ಶನ್​ ಕೂಡ ಶುಭಾಶಯ ತಿಳಿಾಿದ್ದಾರೆ. ಆದರೆ, ಈ ವೇಳೆ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.
ಕೆಂಪೇಗೌಡರ ಜಯಂತಿ ಇದ್ದ ಕಾರಣ ಡಿಬಾಸ್ ಈ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಶುಭಾಶಯ ತಿಳಿಸಿದ್ದು, ಹಾರ್ದಿಕ ಎಂದು ಬರೆಯುವ ಬದಲು ಹಾರ್ಧಿಕ ಎಂದು ಬರೆದಿದ್ದಾರೆ. ಈ ಬಗ್ಗೆಯೂ ಅನೇಕರು ಅಪಸ್ವರ ಎತ್ತಿದ್ದಾರೆ.

ದರ್ಶನ್​ ನಿನ್ನೆ ಕೆಂಪೇಗೌಡರ ಫೋಟೋ ಹಾಕಿ ಶುಭಾಶಯ ಕೋರಿದ್ದರು. “ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು. ಆದಷ್ಟು ಬೇಗ ನಮ್ಮ ಬೆಂಗಳೂರು ಸಹಜ ಸ್ಥಿತಿಗೆ ಮರಳಲಿ,” ಎಂದಿದ್ದರು. ಆದರೆ, ಫೋಟೋ ಹಾಕುವಾಗ ದರ್ಶನ್​ ತಪ್ಪು ಮಾಡಿದ್ದಾರೆ. ದರ್ಶನ್​​, ಕೆಂಪೇಗೌಡರ ಫೋಟೋ ಬದಲು ಮದಕರಿ ನಾಯಕನ ಫೋಟೋ ಹಾಕಿದ್ದಾರೆ.ಫೇಸ್‌ಬುಕ್‌ ಹಾಗೂ ಟ್ವೀಟ್​ ಮಾಡಿದ ಕೆಲವೇ ಹೊತ್ತಿನಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ಆರಂಭಗೊಂಡಿವೆ. ಕೆಲವರು ‘ರಾಜ ಮದಕರಿ ನಾಯಕರ ಪ್ರತಿಮೆಗೆ ಕೆಂಪೇಗೌಡರ ಪ್ರತಿಮೆ ಅಂದರೆ ಹೆಂಗೆ?’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನು, ದರ್ಶನ್​ ಟ್ವೀಟ್​ನಲ್ಲಿ ಹಾರ್ದಿಕ ಎಂದು ಬರೆಯುವ ಬದಲು ಹಾರ್ಧಿಕ ಎಂದು ಬರೆದಿದ್ದಾರೆ. ಈ ಬಗ್ಗೆಯೂ ಅನೇಕರು ಅಪಸ್ವರ ಎತ್ತಿದ್ದಾರೆ.

 

“ಇದು ಚಿತ್ರದುರ್ಗದ ದೊರೆ ವೀರ ಮದರಿನಾಯಕ ಪ್ರತಿಮೆ, ನಾಡ ದೊರೆ ಕೆಂಪೇಗಡರ ಮತ್ತು ವೀರ ಮದಕರಿನಾಯಕ ರ ಪ್ರತಿಮೆಗೆ ವ್ಯತ್ಯಾಸವೇನು ಎಂದರೆ, ಕಿರೀಟ ದಲ್ಲಿರುವ “”ಕೋಡು””, ಮದಕರಿ ನಾಯಕರ ಕಿರೀಟದ “”ಕೋಡು”” ಬಾಗಿದ ಹಾಗಿರುತ್ತದೆ, ಕೆಂಪೇಗೌಡ ಅವರ ಕಿರೀಟದ ಕೋಡು ನೇರವಾಗಿರುತ್ತದೆ, ಇದು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ತಿಳಿಯುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಜೀವನದ ಉತ್ತುಂಗದ ಸ್ಥಾನದಲ್ಲಿ ಇರುವವರು ಚಿತ್ರ ಪ್ರತಿಮೆ ಹಾಕುವಾಗ ಸೂಕ್ಷ್ಮವಾಗಿ ಪರಿಶೀಲಿಸಿ ಹಾಕಬೇಕೆಂದು ಮನವಿ” ಹೀಗೆಂದು ಒಬ್ಬ ವ್ಯಕ್ತಿ ಟ್ವೀಟ್ ಮಾಡಿದರೆ, ಮತ್ತೊಬ್ಬರು ‘ನಾಡ ಪ್ರಭು ಪೋಟೋ ಯಾವುದು,
ನಾಡ ದೊರೆಯ ಪೋಟೋ ಯಾವುದು, ಅನ್ನೊ ಸಾಮಾನ್ಯ ಜ್ಞಾನ ಕೂಡ ಇಲ್ಲದ ನೀನು ಒಬ್ಬ ಹೀರೋ ಛೇ ??? ಮೋದಲು ಪೋಟೋ ಬದಲಾಯುಸು ‘ ಎಂದು ಹರಿ ಹಾಯ್ದಿದ್ದಾರೆ

ಇನ್ನು ಕೆಲವರು ದರ್ಶನ್​ ಪರ ಬ್ಯಾಟ್​ ಬೀಸಿದ್ದು, ದರ್ಶನ್​ ಮಾಡಿರೋದು ತಪ್ಪಿರಬಹುದು. ಅದು ಅವರ ಕಣ್ತಿಪ್ಪಿನಿಂದ ಆಗಿದ್ದೇ ಹೊರತೂ ಉದ್ದೇಶ ಪೂರ್ವಕವಲ್ಲ. ಅದಕ್ಕೆ ಈ ರೀತಿ ಟ್ರೋಲ್​ ಮಾಡುವುದು ಸರಿಯಲ್ಲ ಎಂದು ಬರೆದುಕೊಂಡಿದ್ದಾರೆ..

Advertisement
Share this on...