ದರ್ಶನ್ ಅವರ ಮಗ ಮಾಡಿದ್ದನ್ನು ನೋಡಿ ಸ್ವತಃ ದರ್ಶನ್ ಅವರಿಗೆ ಶಾಕ್ ಆಗಿದೆ !

in ಮನರಂಜನೆ/ಸಿನಿಮಾ 422 views

ತಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಮೇರು ನಟ ಮತ್ತು ಬಾಕ್ಸ್ ಆಫೀಸ್ ಸುಲ್ತಾನಾ, ಅಗ್ರ ನಾಯಕ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್. ಚಿತ್ರರಂಗದಲ್ಲಿ ಅವರಿಗೆ ತಮ್ಮದೇ ಆದ ಒಂದು ಸ್ಥಾನ ಘನತೆ ಗೌರವವಿದೆ. ಇದರ ಜೊತೆ ಅಸಂಖ್ಯಾತ ಅಭಿಮಾನಿಗಳ ಪ್ರೀತಿಯೂ ಕೂಡ ಅವರ ಮೇಲಿದೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಇವರು ಬ್ರ್ಯಾಂಡ್ ಆಗಿಬಿಟ್ಟಿದ್ದಾರೆ. ಚಿತ್ರರಂಗದಲ್ಲಿ ಬರೀ ಸ್ಟಾರ್ ಆಗಿ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಾ ಸುಮ್ಮನೆ ಕೂರದ ಈ ಡಿ ಬ್ರ್ಯಾಂಡ್, ಚಿತ್ರರಂಗದಲ್ಲಿರುವ ಹಿರಿಯ ಕಲಾವಿದರಿಗೆ ಧನ ಸಹಾಯ ಮಾಡುತ್ತಾ ಅವರ ಕಷ್ಟಕ್ಕೆ ಸ್ಪಂಧಿಸುತ್ತಾ ಜೊತೆಗೆ ಅನೇಕ ಸಾರ್ವಜನಿಕರಿಗೆ ಅವರು ಮಾಡುವ ಸೇವಾ ಕಾರ್ಯಗಳಿಂದಲೂ ಅಪಾರ ಜನಮನ್ನಣೆಯನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ ತನ್ನ ತಂದೆ ಕನ್ನಡ ಚಿತ್ರರಂಗದ ಹೆಮ್ಮೆಯ ಖಳನಾಯಕ ತೂಗುದೀಪ ಶ್ರೀನಿವಾಸ್ ಅವರ ಹೆಸರನ್ನು ಹೆಮ್ಮೆಯಿಂದ ತೂಗುತ್ತಲೇ ಇದ್ದಾರೆ. ತನ್ನ ತಂದೆ ಖ್ಯಾತ ಖಳ ನಾಯಕನಾಗಿದ್ದರೂ ಇವರ ಸಿನಿ ಜೀವನ ಸುಗಮವಾಗಿರಲಿಲ್ಲ. ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡು ಹಾಲು ಮಾರುತ್ತಾ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಾ ಇದೀಗ ಬ್ರ್ಯಾಂಡ್ ಆಗಿ ನಿಂತಿರುವ ಈ ಕಲಾವಿದನ ಜೀವನವೂ ಯುವ ನಾಯಕರಿಗೆ ಮಾದರಿ ಎಂದರೆ ತಪ್ಪಾಗಲಾರದು.

Advertisement

 

Advertisement

Advertisement

ಇನ್ನು ಡಿ ಬಾಸ್ ಮನೆಯ ಬಳಿ ಕಷ್ಟ ಎಂದು ಹೇಳಿಕೊಂಡು ಯಾರೇ ಬಂದರೆ ದರ್ಶನ್ , ಎಂದಿಗೂ ಕೂಡ ಬರಿಗೈಯಲ್ಲಿ ವಾಪಸ್ಸು ಕಳಿಸುವುದಿಲ್ಲ. ಅವರ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ. ಇದೀಗ ಅವರ ಮಗ ವಿನೀಶ್ ತೂಗುದೀಪ್ ಅವರು ಮಾಡಿದಂತಹ ಆ ಒಂದು ಕೆಲಸದ ಬಗ್ಗೆ ಕೇಳಿದರೆ ನಿಮಗೆ ನಿಜಕ್ಕೂ ಖುಷಿಯಾಗುತ್ತದೆ. ಡಿ ಬಾಸ್ ದರ್ಶನ್ ಅವರ ಹಾಗೆಯೇ ಅವರ ಮಗ ಕೂಡ ಸರಳತೆಯ ಮನುಷ್ಯ ಅಂತ ಈ ಒಂದು ಘಟನೆಯಿಂದಲೇ ನಿಮಗೆ ತಿಳಿಯುತ್ತದೆ.

Advertisement

 

ಅದೊಂದು ದಿನ ಡಿಬಾಸ್ ಅವರ ಮನೆಯ ಬಳಿ ಅಭಿಮಾನಿಗಳು ತೆರಳಿದ್ದರು. ಆದರೆ ದರ್ಶನ್ ಅವರು ಚಿತ್ರೀಕರಣದ ಮೇಲೆ ಬೇರೆ ಊರಿಗೆ ತೆರಳಿದ್ದರು. ಆಗ ಅಭಿಮಾನಿಗಳು ದರ್ಶನ್ ಅವರನ್ನು ಭೇಟಿ ಮಾಡಲೇಬೇಕು ಅಂತ ಹಠ ಮಾಡಿ ಕುಳಿತಿದ್ದರು. ಆಗ ದರ್ಶನ್ ಅವರ ಮಗ ವಿನೀಶ್ ತೂಗುದೀಪ್ ಅವರು ಬಂದು ಅಭಿಮಾನಿಗಳಿಗೆ ಮನವೊಲಿಕೆ ಮಾಡಿದ್ದಾರೆ. ಮಗ ವಿನೀಶ್ ಅವರು ಅಭಿಮಾನಿಗಳ ಮುಂದೇ ಬಂದು ನಿಂತು,ಸದ್ಯಕ್ಕೆ ದರ್ಶನ್ ಅವರು ಮನೆಯಲ್ಲಿ ಇಲ್ಲ,  ದರ್ಶನ್ ಅವರು ಬಂದ ಮೇಲೆ ನೀವು ಮತ್ತೆ ಬನ್ನಿ, ಖಂಡಿತಾ ದರ್ಶನ್ ಅವರನ್ನು ಭೇಟಿ ಮಾಡಿಕೊಂಡೇ ಹೋಗಿ ಎಂದು ದರ್ಶನ್ ಅವರ ಅಭಿಮಾನಿಗಳನ್ನು ಮನವೊಲಿಕೆ ಮಾಡಿದ್ದಾರೆ.ಈ ಒಂದು ಕೆಲಸ ಡಿ ಬಾಸ್ ಗೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ತಂದಿದ್ದು, ಅಪ್ಪನಂತೆಯೇ ಮಗ ಕೂಡ ಸರಳ ಜೀವಿ ಎಂಬುದು ಈ ಘಟನೆಯಿಂದ ತಿಳಿದು ಬರುತ್ತದೆ

Advertisement
Share this on...