ದರ್ಶನ್ ಪತ್ನಿ ಯಾರ ಮೇಲೆ ಕಿಡಿ ಕಾರಿದ್ದಾರೆ ಗೊತ್ತಾ ?

in ಮನರಂಜನೆ 59 views

ದ್ರೋಹಕ್ಕೆ ಮತ್ತೊಂದು ಹೆಸರೇ ಮಾನವರು ಎಂದು ಖ್ಯಾತ ನಟ ಡಿ ಬಾಸ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಷ್ಟಕ್ಕೂ ಈ ರೀತಿಯಾಗಿ ಅವರು ಯಾಕೆ ಬರೆದುಕೊಂಡಿದ್ದಾರೆ, ಯಾರ ಮೇಲೆ ಕಿಡಿ ಕಾರಿದ್ದಾರೆ ಗೊತ್ತಾ? ಹಸಿದು ಊಟಕ್ಕಾಗಿ ಕಾಡಿಂದ ನಾಡಿಗೆ ಬಂದಿದ್ದ ಗರ್ಭಿಣಿ ಆನೆಗೆ ಪಟಾಕಿ ಸಿಡಿಸಿ ಸಾಯಿಸಿದರಲ್ಲ ಆ ಮಾನವರಿಗೆ..ಕೇರಳದಲ್ಲಿ ಸಾವನಪ್ಪಿದ ಗರ್ಭಿಣಿ ಆನೆಯ ಕುರಿತು ದೇಶಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾರಂಗದವರು, ಆಟಗಾರರು, ರಾಜಕೀಯ ವರ್ಗದವರು ಖಂಡನೆ ವ್ಯಕ್ತಪಡಿಸಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಅವರ ಪತ್ನಿ ವಿಜಯ ಲಕ್ಷ್ಮಿಯವರು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದು, ನೀರಲ್ಲಿ ಮುಳುಗಿದ ಆನೆಯ ಗ್ರಾಫಿಕ್ ಫೋಟೋ ಹಂಚಿಕೊಂಡು, ಅಂತಿಮವಾಗಿ ಮಾನವೀಯತೆ ಸತ್ತಿತು ಎಂದು ಬರೆದುಕೊಂಡಿದ್ದಾರೆ.

Advertisement

 

Advertisement

ಆಕೆ ಗರ್ಭಿಣಿ ನಮ್ಮನ್ನು ನಂಬಿದ್ದಳು. ಆದರೆ ನಾವು ಆ ನಂಬಿಕೆಯನ್ನು ಹುಸಿ ಮಾಡಿದೆವು.. ದ್ರೋಹ ಎಂಬ ಪದಕ್ಕೆ ಮತ್ತೊಂದು ಹೆಸರೇ ಮಾನವರು ಎಂದು ಬರೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಕೇರಳದಲ್ಲಿ ಈ ಘ ಟನೆ ಸಂಭವಿಸಿದ್ದು, ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಗರ್ಭಿಣಿ ಆನೆಗೆ ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ತಿನ್ನಿಸಲಾಗಿತ್ತು. ಮದ್ದು ಬಾಯಿಯಲ್ಲಿಯೇ ಬ್ಲಾಸ್ಟ್ ಆಗಿದ್ದು, ತಕ್ಷಣವೇ ಹತ್ತಿರದಲ್ಲೇ ಇದ್ದ ನದಿಯಲ್ಲಿ ಆನೆ ಮುಳುಗಿತ್ತು.ಅಷ್ಟೊತ್ತಿಗೆ ಅರಣ್ಯಾಧಿಕಾರಿಗಳು ಸಹ ಘಟನಾ ಸ್ಥಳಕ್ಕೆ ಆಗಮಿಸಿದರು. ಆದರೆ ಆನೆ ಆಗಲೇ ಕೊನೆಯುಸಿರೆಳೆದಿತ್ತು. ಕೊನೆಗೂ ಪಾಪಿಗಳಿಂದ ಗರ್ಭಿಣಿ ಆನೆ ಹೊಟ್ಟೆಯಲ್ಲಿನ ತನ್ನ ಮಗುವಿನೊಂದಿಗೆ ಪ್ರಾಣ ಬಿಟ್ಟಿತ್ತು. ಇದೀಗ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಕ್ಕೆ ಕಾರಣವಾಗಿದ್ದು, ಟ್ವಿಟ್ಟರ್ ನಲ್ಲಿ ಹ್ಯುಮ್ಯಾನಿಟಿ ಇಸ್ ಡೆಡ್ ಎಂಬ ಹ್ಯಾಶ್ ಟ್ಯಾಗ್‍ನೊಂದಿಗೆ ಅಭಿಯಾನವೇ ಆರಂಭವಾಗಿದೆ.
All Rights Reserved Namma Kannada Entertainment.

Advertisement
Share this on...