gayana

ಸಿ ’ರಿಯಲ್’ ಜರ್ನಿ ತೆರೆದಿಟ್ಟ ಮಗಳು ಜಾನಕಿ….

in ಮನರಂಜನೆ/ಸಿನಿಮಾ 441 views

ಮಗಳು ಜಾನಕಿ ಕನ್ನಡ ನಾಡಿನ ಮನೆಮಾತಾದ ಧಾರಾವಾಹಿ. ಅದರಲ್ಲೂ ನಾಯಕಿ ಜಾನಕಿ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಗಳು ಜಾನಕಿ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್ ಇದೀಗ ಬೆಳ್ಳಿತೆರೆಗೆ ಕಾಲಿಟ್ಟಿದ್ದು, ರಿಷಬ್ ಶೆಟ್ಟಿ ನಿರ್ದೇಶನದ ಹಿರೋ ಚಿತ್ರದಲ್ಲಿ ರಿಷಬ್ ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿಕ್ಕಮಗಳೂರಿನ ಗಾನವಿ, ಸಿನಿಮಾ ಲೋಕಕ್ಕೆ ಬಂದಿದ್ದೇ ಒಂದು ರೋಚಕ ಕಥೆ. ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ಅವರ ಜರ್ನಿ ಹೇಗಿತ್ತು ಎಂಬ ಹಲವಾರು ಕುತೂಹಲಕರ ಮಾಹಿತಿಯನ್ನು ಗಾನವಿ ಹಂಚಿಕೊಂಡಿದ್ದಾರೆ. ಹೆಣ್ಣು ಮಕ್ಕಳು ಸಿನಿಮಾ ಕ್ಷೇತ್ರಕ್ಕೆ ಹೋಗುತ್ತಾರೆ ಎಂದರೆ ಯಾರ ಮನೆಯಲ್ಲಿ ವಿರೋಧ ಮಾಡಲ್ಲ ಹೇಳಿ, ಚಿತ್ರರಂಗ, ಅದರಲ್ಲೂ ನಮ್ಮ ಮನೆ ಮಗಳು ಸಿನಿಮಾಗೆ ಹೋಗ್ತಾಳೆ ಎಂದರೆ ಸುಮ್ಮನಿರುತ್ತಾರೆಯೇ? ಆತಂಕ, ವಿರೋಧ ಇದ್ದೇ ಇರುತ್ತೆ. ಗಾನವಿಗೂ ಕೂಡ ಮನೆಯಲ್ಲಿ ಚಿತ್ರರಂಗಕ್ಕೆ ಬರಲು ತೀವ್ರ ವಿರೋಧ ವ್ಯಕ್ತಪಡಿಸಿದ್ದರಂತೆ. ಆದರೆ ಗಾನವಿ ಮನೆಯವರನ್ನೆಲ್ಲ ಎದುರು ಹಾಕಿಕೊಂಡು ಬೆಂಗಳೂರಿಗೆ ಬಂದು ಬಿಟ್ಟರಂತೆ.

Advertisement

Advertisement

ಈ ಬಗ್ಗೆ ಸ್ವತ: ಗಾನವಿ ಲಕ್ಷ್ಮಣ್ ಹೇಳಿದ್ದು, ಮಗಳು ಜಾನಕಿ ಧಾರವಾಹಿಯಲ್ಲಿ ಅವಕಾಶ ಸಿಗುವುದಕ್ಕೂ ಮುನ್ನ ಮೆಜೆಸ್ಟಿಕ್ ನಿಂದ ಬ್ಯಾಗ್ ಹೊತ್ತುಕೊಂಡು ಚಪ್ಪಲಿ ಕಿತ್ತುಹೋಗುವವರೆಗೆ ಅವಕಾಶಕ್ಕಾಗಿ ಅಲೆದಾಡಿದ್ದೇನೆ. ನಾನು ಪಟ್ಟ ಕಷ್ಟ ಹೇಳಿದರೆ ಇಂದು ಯಾರೂ ನಂಬುವುದಿಲ್ಲ. ಹಲವು ವರ್ಷ ಬೆಂಗಳೂರಿನಲ್ಲಿ ಕಷ್ಟಪಟ್ಟಿದ್ದೇನೆ. ಕೊನೆಗೂ ಮಗಳು ಜಾನಕಿಗೆ ಆಡಿಷನ್ ನಲ್ಲಿ ಆಯ್ಕೆಯಾದೆ. ಟಿ.ಎನ್.ಸೀತಾರಾಮ್ ಅವರಂತಹ ಗುರುಗಳ ಬಳಿ ಕೆಲಸಮಾಡಿದ್ದು ಹೆಮ್ಮೆಯ ವಿಷಯ. ಇಂದು ನಾನು ಸಿನಿಮಾಗೆ ಆಯ್ಕೆಯಾಗಿದ್ದೇನೆ ಎಂದರೆ ಅದಕ್ಕೆ ಕಾರಣ ಮಗಳು ಜಾನಕಿ ಧಾರಾವಾಹಿಯ ಜನಪ್ರಿಯತೆ ಎಂದಿದ್ದಾರೆ.

Advertisement

ರಿಷಬ್ ಶೆಟ್ಟಿಯವರ ಹೀರೋ ಚಿತ್ರದಲ್ಲಿ ಸಿಕ್ಕ ಅವಕಾಶದ ಬಗ್ಗೆ ಮಾತನಾಡಿರುವ ಗಾನವಿ, ರಿಷಬ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿರುವ ನಾತೂರಾಮ್ ಸಿನಿಮಾಲ್ಲಿ ರಿಷಬ್ ಜೋಡಿಯಾಗಿ ನಾನು ಆಯ್ಕೆಯಾಗಿದ್ದೆ. ಆಗ ರಿಷಬ್ ಪರಿಚಯವಾಗಿತ್ತು. ಆ ಸಿನಿಮಾ ಸದ್ಯಕ್ಕೆ ಮುಂದೂಡಿಕೆಯಾಗಿದೆ. ಅದೇ ಪರಿಚಯದ ಮೇಲೆ ರಿಷಬ್ ಹೀರೋ ಸಿನಿಮಾಗಾಗಿ ನನ್ನನ್ನು ಸಂಪರ್ಕಿಸಿದ್ರು. ಕಥೆ ಇಷ್ಟವಾಗಿ ನಟಿಸಲು ಒಪ್ಪಿಕೊಂಡೆ. ಇದೀಗ ಸಿನಿಮಾ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ ಎಂದು ಹೇಳಿದರು.

Advertisement

ಲಾಕ್ ಡೌನ್ ವೇಳೆ ಕೆಲಸವಿಲ್ಲ ಹಾಗಾಗಿ ಊರಲ್ಲಿದ್ದೆ. ಅವಕಾಶ ಸಿಕ್ಕರೆ ಸಾಕು ಎನ್ನಿಸುತ್ತಿತ್ತು. ಇದೇ ವೇಳೆ ರಿಷಬ್ ಶೆಟ್ಟಿ ಹೀರೋ ಸಿನಿಮಾ ಬಗ್ಗೆ ಹೇಳಿದರು. ಅನ್ ಲಾಕ್ ಆರಂಭವಾಗುತ್ತಿದ್ದಂತೆಯೇ ಸಿನಿಮಾ ಶೂಟಿಂಗ್ ಆರಂಭವಾಗಿ, ಕಂಪ್ಲೀಟ್ ಕೂಡ ಆಯ್ತು. ಇಡೀ ಚಿತ್ರದ ಚಿತ್ರೀಕರಣ ನನ್ನ ಊರು ಚಿಕ್ಕಮಗಳೂರಿನಲ್ಲಿಯೇ ನಡೆದಿದ್ದರಿಂದ ಹೆಚ್ಚಿನ ಸಮಯ ಮನೆಯಲ್ಲಿ ಕುಟುಂಬದ ಜೊತೆಯೇ ಕಳೆಯಲು ಸಾಧ್ಯವಾಯಿತು. ಎಲ್ಲರ ವಿರೋಧ ಮಾಡಿಕೊಂಡು ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೆ. ಈಗ ಮಗಳು ತಾನು ಅಂದುಕೊಂಡಿದ್ದನ್ನು ಸಾಧಿಸಿದಳು ಎಂಬ ಖುಷಿ ಮನೆಯವರಿಗಿದೆ. ಈಗ ಎಲ್ಲರೂ ನನ್ನ ನೋಡಿ ಖುಷಿಪಡ್ತಾರೆ ಎಂದು ಸಂತಸ ಹಂಚಿಕೊಂಡರು.

ಇನ್ನು ನನಗೆ ಚಿಕ್ಕಂದಿನಿಂದಲೂ ಸಿನಾಮದಲ್ಲಿ ನಟಿಸಬೇಕು ಸಿನಿಮಾನೇ ಮಾಡಬೇಕು ಎಂಬ ಮಹದಾಸೆಯಿತ್ತು. ಆದರೆ ಧಾರಾವಾಹಿ ಮೂಲಕ ಚಿತ್ರರಂಗಕ್ಕೆ ಬರಬೇಕು ಎಂಬುದನ್ನು ದೇವರು ಬರೆದಿದ್ದ ಎನಿಸುತ್ತೆ. ಹಾಗಾಗಿ ಮಗಳು ಜಾನಕಿ ಮೂಲಕ ಈಗ ಸಿನಿಮಾಗೆ ಬಂದಿದ್ದೇನೆ. ಸಿನಿಮಾದಲ್ಲಿಯೇ ಮುಂದುವರೆಯುತ್ತೇನೆ ಹೊರತು ಮತ್ತೆ ಸಿರಿಯಲ್ ಕಡೆಗೆ ಹೋಗುವ ಯೋಚನೆ ಇಲ್ಲ ಎಂದು ಗಾನವಿ ಹೇಳಿದ್ದಾರೆ.

Advertisement
Share this on...