ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಕಲಿತ ಈಕೆ ಮಿಂಚಿದ್ದು ನಟನೆಯಲ್ಲಿ!

in ಮನರಂಜನೆ/ಸಿನಿಮಾ 143 views

ಕನ್ನಡ ಸಿನಿರಂಗದಲ್ಲಿಯೇ ಹೊಸ ಅಲೆಯನ್ನೇ ಸೃಷ್ಟಿ ಮಾಡಿರುವಂತಹ ಚಿತ್ರಗಳಲ್ಲಿ ದಿಯಾ ವೂ ಒಂದು‌. ಈ ವರುಷವಷ್ಟೇ ಬಿಡುಗಡೆಯಾಗಿರುವ ದಿಯಾ ಸಿನಿಮಾ ಬಿಡುಗಡೆಯಾದ ಕೊಂಚ ಸಮಯದಲ್ಲಿಯೇ ದಾಖಲೆಯನ್ನು ಬರೆದಿರುವುದು ಸಿನಿ ಪ್ರಿಯರಿಗೆ ತಿಳಿದೇ ಇದೆ. ವಿಭಿನ್ನ ಶೈಲಿಯ ಕಥಾ ಹಂದರದ ಮೂಲಕ ಸಿನಿ ವೀಕ್ಷಕರ ಮನ ಸೆಳೆದಿರುವ ದಿಯಾ ಸಿನಿಮಾದಲ್ಲಿ ಕಿರುತೆರೆಯ ಕಲಾವಿದರುಗಳು ಬಣ್ಣ ಹಚ್ಚಿದ್ದಾರೆ. ದಿಯಾದಲ್ಲಿ ರೋಹಿತ್ ಆಗಿ ಅಭಿನಯಿಸಿದ್ದ ದೀಕ್ಷಿತ್ ಶೆಟ್ಟಿ ಹಾಗೂ ಆದಿ ಆಗಿ ನಟಿಸಿರುವ ಪೃಥ್ವಿ ಅಂಬರ್ ಇಬ್ಬರೂ ಕಿರುತೆರೆ ಮೂಲದವರು ಎಂಬ ವಿಚಾರ ತಿಳಿದೇ ಇದೆ. ಇದರ ಜೊತೆಗೆ ಇನ್ನೊಬ್ಬ ಕಿರುತೆರೆ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ! ಅದು ಬೇರಾರೂ ಅಲ್ಲ. ನಾಯಕಿ ದಿಯಾಳ ಚಿಕ್ಕಮ್ಮನ ಮಗಳಾಗಿ ಅಭಿನಯಿಸಿರುವ ದೀಪಾ ಕಟ್ಟೆ. ದಿಯಾ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ದೀಪಾ ಅಭಿನಯಿಸಿದ್ದು ಸಣ್ಣ ಪಾತ್ರದಲ್ಲಿಯಾದರೂ ನಟನೆಯ ಮೂಲಕ ಸಿನಿ ಪ್ರಿಯರ ಮನ ಸೆಳೆದಿದ್ದಾರೆ.ಕಿರುತೆರೆಯಿಂದ ನಟನಾ ಪಯಣ ಶುರು ಮಾಡಿರುವ ಕಲಾವಿದರುಗಳು ಬೆಳ್ಳಿತೆರೆಗೆ ಕಾಲಿಡುವುದು ತೀರಾ ಮಾಮೂಲಿ ಸಂಗತಿ. ಅದೇ ರೀತಿ ದೀಪಾ ಕಟ್ಟೆ ಕೂಡಾ. ದಿಯಾ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ದೀಪಾ ನಾಯಕಿಯ ತಂಗಿಯಾಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೇ ಮನೋಜ್ಞ ಅಭಿನಯದ ಮೂಲಕ ಮನೆ ಮಾತಾಗಿದ್ದಾರೆ.

Advertisement

Advertisement

 

Advertisement

 

Advertisement

ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನ ರಾಶಿ ಧಾರಾವಾಹಿಯಲ್ಲಿ ನಾಯಕ ಮಿಥುನ್ ತಂಗಿ ಭಾವನಾ ಆಗಿ ನಟಿಸುತ್ತಿರುವ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರೆ. ವಿದ್ಯಾಭ್ಯಾಸ ಮುಗಿದ ಬಳಿಕ ಕಾಕತಾಳೀಯವಾಗಿ ಕೆಲಸವೂ ಗಿಟ್ಟಿಸಿಕೊಂಡರು. ಒಂದಷ್ಟು ಸಮಯ ಕೆಲಸ ಮಾಡಿದ ಬಳಿಕ ತದ ನಂತರ ಕೆಲಸಕ್ಕೆ ಬಾಯ್ ಹೇಳಿದ ದೀಪಾ ನಿರೂಪಕಿಯಾಗಿ ಬಣ್ಣದ ಪಯಣ ಶುರು ಮಾಡಿದರು. ಇಂಚರಾ ಟಿವಿಯ ನಿರೂಪಕಿಯಾಗಿದ್ದಾಗಲೇ ದೀಪಾ ಅವರಿಗೆ ಬಣ್ಣದ ಲೋಕದ ವ್ಯಾಮೋಹ ಜಾಸ್ತಿಯಾಯಿತು. ಮುಂದೆ ನಟನಾ ಕ್ಷೇತ್ರಕ್ಕೆ ಬರುವ ಆಲೋಚನೆಯೂ ಮಾಡಿದರು.

 

ಯಾವಾಗ ಬಣ್ಣದ ಲೋಕಕ್ಕೆ ಕಾಲಿಡಲು ನಿರ್ಧರಿಸಿದರೋ, ಆಗ ನಟ‌ನೆಯ ರೀತಿ ನೀತಿ ಕಲಿಯುವ ಸಲುವಾಗಿ ಅಭಿನಯತರಂಗ ಸೇರಿದರು. ಅಲ್ಲಿ ಒಂದು ವರ್ಷದ ಡಿಪ್ಲೊಮಾ ಪದವಿ ಪಡೆದಿರುವ ಈಕೆ ನಟನೆಯ ರೀತಿ ನೀತಿಗಳು, ಹೇಗೆ ನಟಿಸುವುದು, ನಟೆಯಾಗಲು ಬೇಕಾಗಿರುವ ಕ್ವಾಲಿಟಿಗಳು ಯಾವುದು ಇದೆಲ್ಲವನ್ನು ತಿಳಿದುಕೊಂಡರು.

ಅಭಿನಯ ತರಂಗ ಎಂಬ ನಟನಾ ಗರಡಿಯಲ್ಲಿ ಪಳಗಿದ ಈಕೆ ಮುಂದೆ ಒಂದಿಪ್ಪತ್ತು ‌ನಾಟಕಗಳಲ್ಲಿ ನಟಿಸಿದ್ದರು. ತದ ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶಾಂತಂ ಪಾಪಂ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. ಮುಂದೆ ಏನು ಎಂದು ಯೋಚಿಸುತ್ತಿದ್ದಾಗ ಉತ್ತಮ ಆಫರ್ ಕೂಡಾ ಆಕೆಗೆ ದೊರಕಿತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನ ರಾಶಿ ಧಾರಾವಾಹಿಯಲ್ಲಿ ಭಾವನಾ ಪಾತ್ರಕ್ಕೆ ಜೀವ ತುಂಬುವಲ್ಲಿ ದೀಪಾ ಕಟ್ಟೆ ಬ್ಯುಸಿಯಾಗಿದ್ದಾರೆ.
– ಅಹಲ್ಯಾ

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...