ದೀಪಿಕಾ ಈ ಪೋಸ್ಟ್ ನೋಡಿ ಅಭಿಮಾನಿಗಳು ಮಾಡಿದ ಕಾಮೆಂಟ್ಸ್ ಏನ್ ಗೊತ್ತಾ?

in ಮನರಂಜನೆ 20 views

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಾಲಿವುಡ್ನ ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದು. ಅಭಿಮಾನಿಗಳು ಸಹ ಇವರಿಬ್ಬರನ್ನು ತುಂಬಾ ಇಷ್ಟಪಡುತ್ತಾರೆ. ರಣವೀರ್ ಮತ್ತು ದೀಪಿಕಾ ಮದುವೆಯಾಗಿ ಕೆಲವೇ ತಿಂಗಳಾಗಿತ್ತು. ಅಂದಿನಿಂದ ಅವರಿಬ್ಬರಿಗೆ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ ಒಂದೇ. ಹೌದು, ರಣವೀರ್ ಮತ್ತು ದೀಪಿಕಾ ಮದುವೆಯ ನಂತರ ಅಭಿಮಾನಿಗಳು ಇಬ್ಬರಿಂದಲೂ ಒಳ್ಳೆಯ ಸುದ್ದಿ ಕಾಯುತ್ತಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಲಾಕ್ ಡೌನ್ ಆದ ನಂತರ ಬಾಲಿವುಡ್’ನ ಖ್ಯಾತನಾಮರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರ ಅಭಿಮಾನಿಗಳು ಸಹ ಅವರ ನೆಚ್ಚಿನ ನಟರ ಎಲ್ಲಾ ಫೋಟೋಗಳನ್ನು ಇಷ್ಟಪಟ್ಟು ಲೈಕ್ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ದೀಪಿಕಾ ಪಡುಕೋಣೆ ಒಂದು ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದರು. ಇದನ್ನು ನೋಡುತ್ತಿದ್ದಂತೆ ಮತ್ತೆ ಅಭಿಮಾನಿಗಳಿಂದ ಅದೇ ಪ್ರಶ್ನೆ ‘ಏನಾದರೂ ಒಳ್ಳೆಯ ಸುದ್ದಿ ಇದೆಯೇ?’.

Advertisement

 

Advertisement

Advertisement

 

Advertisement

ಹೌದು, ದೀಪಿಕಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹೋಳು ಮಾಡಿ, ಉಪ್ಪು ಕಾರದಪುಡಿ ಹಚ್ಚಿರುವ ಮಾವಿನ ಕಾಯಿ ಚಿತ್ರವನ್ನು ಹಂಚಿಕೊಂಡಿದ್ದರು. ಈ ಚಿತ್ರವನ್ನು ನೋಡಿದ ನಂತರ ಅಭಿಮಾನಿಗಳು ಈ ಪೋಸ್ಟ್ಗೆ ಹಲವಾರು ಪ್ರಶ್ನೆಗಳನ್ನು ಹಾಕಿದ್ದಾರೆ. ಆದರೆ ಚಿತ್ರವನ್ನು ಹಂಚಿಕೊಳ್ಳುವಾಗ, ದೀಪಿಕಾ ಅಭಿಮಾನಿಗಳು ಕೇಳುವ ರೀತಿ ಬರೆದುಕೊಂಡಿಲ್ಲ. ಬದಲಿಗೆ ಚಿತ್ರದ ಕ್ಯಾಪ್ಷನ್ನಲ್ಲಿ ದೀಪಿಕಾ, ‘ನೀನು ಅತ್ಯುತ್ತಮ, ಎಲ್ಲರಿಗಿಂತ ಉತ್ತಮ, ನಾನು ಭೇಟಿಯಾದೆ’ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರವನ್ನು ಅಪ್ಲೋಡ್ ಮಾಡಿದ ನಂತರ ದೀಪಿಕಾ ಮತ್ತು ರಣವೀರ್ ಅವರ ಅಭಿಮಾನಿಗಳು ಕಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಅಭಿಮಾನಿಗಳು ತಕ್ಷಣ ಈ ಚಿತ್ರವನ್ನು ನೋಡಿ ಅವರಿಬ್ಬರಿಗೂ ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. “ದೀಪಿಕಾ ಗರ್ಭಿಣಿಯೇ?” ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಇನ್ನೊಬ್ಬ ಬಳಕೆದಾರರು ಸಹ ಅದೇ ರೀತಿ ಅರ್ಥ ಕೊಡುವ ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ಎಲ್ಲಾ ಅಭಿಮಾನಿಗಳದ್ದು ಒಂದೇ ರೀತಿಯ ಪ್ರಶ್ನೆ. ದೀಪಿಕಾ ಯಾವುದಾದರೂ ಒಳ್ಳೆಯ ಸುದ್ದಿ ನೀಡಲು ಹೊರಟಿದ್ದಾರೆಯೇ? ಎಂದು ವಿಭಿನ್ನ ರೀತಿಯಲ್ಲಿ ಪ್ರಶ್ನೆ ಕೇಳುತ್ತಲೇ ಇದ್ದಾರೆ.

 

 

View this post on Instagram

 

You’re simply the best, better than all the rest Better than anyone, anyone I ever met…?

A post shared by Deepika Padukone (@deepikapadukone) on

ವಿಶೇಷವೆಂದರೆ ರಣವೀರ್ ಮತ್ತು ದೀಪಿಕಾ ಮದುವೆಯಾದಾಗಿನಿಂದ ಜನರು ಅವರಿಬ್ಬರಿಗೂ ಇದೇ ರೀತಿ ಪ್ರಶ್ನಿಸಲು ಪ್ರಾರಂಭಿಸಿದರು. ಇಂತಹ ಪ್ರಶ್ನೆಗಳಿಗೆ ಇಬ್ಬರೂ ತಮ್ಮ ಪ್ರತಿಕ್ರಿಯೆ ನೀಡಿದ್ದರೂ, ಅಭಿಮಾನಿಗಳಿಗೆ ತೃಪ್ತಿಯಿಲ್ಲ. ಹಾಗೆಯೇ ದೀಪಿಕಾ ಮತ್ತು ರಣವೀರ್ ಸಹ ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಸಾಹಸಕ್ಕೆ ಕೈ ಹಾಕುವುದಿಲ್ಲ.

Advertisement
Share this on...