ದೀಪಿಕಾ ಬಾಡಿಗಾರ್ಡ್ ಸಂಬಳ ಕೇಳಿದ್ರೆ ಹೌಹಾರ್ತೀರಾ !!!

in ಮನರಂಜನೆ 123 views

ಹೆಚ್ಚಿನ ಬಾಲಿವುಡ್ ಸೆಲೆಬ್ರಿಟಿಗಳು ಜನಸಂದಣಿಯಿಂದ ತಪ್ಪಿಸಿಕೊಳ್ಳಲು ತಮ್ಮ ಬಳಿ ಪರ್ಸನಲ್ ಬಾಡಿಗಾರ್ಡ್ಸ್ ಇಟ್ಟುಕೊಳ್ಳುತ್ತಾರೆ. ಸಲ್ಮಾನ್ ಮತ್ತು ಶಾರುಖ್ ಅವರಂತಹ ದೊಡ್ಡ ಸ್ಟಾರ್’ಗಳ ಬಾಡಿಗಾರ್ಡ್ಸ್ ಈಗಾಗಲೇ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅದೇ ರೀತಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ತಮ್ಮ ಪರ್ಸನಲ್ ಬಾಡಿಗಾರ್ಡ್ ಅನ್ನು ಅನೇಕ ವರ್ಷಗಳಿಂದ ತಮ್ಮೊಂದಿಗೆ ಇಟ್ಟುಕೊಂಡಿದ್ದಾರೆ. ದೀಪಿಕಾ ಜೊತೆಗಿರುವ ಪರ್ಸನಲ್ ಬಾಡಿಗಾರ್ಡ್ ಹೆಸರು ಜಲಾಲ್. ದೀಪಿಕಾ ಜಲಾಲ್ ಅವರನ್ನು ತಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರೆಂದು ಪರಿಗಣಿಸಿದ್ದಾರೆ. ಅಷ್ಟೇ ಅಲ್ಲ, ದೀಪಿಕಾ ತನ್ನ ಬಾಡಿಗಾರ್ಡ್ ಅನ್ನು ಸಹೋದರ ಎಂದೇ ಪರಿಗಣಿಸುತ್ತಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ವೆಬ್ಸೈಟ್ ವರದಿಯ ಪ್ರಕಾರ, 2017 ರಲ್ಲಿ ಜಲಾಲ್ ಅವರ ವೇತನ ವರ್ಷಕ್ಕೆ 80 ಲಕ್ಷ ರೂಪಾಯಿ. ಈ ಸಮಯದಲ್ಲಿ ಜಲಾಲ್ ಅವರ ಸಂಬಳ ವರ್ಷಕ್ಕೆ ಸುಮಾರು 1 ಕೋಟಿ ರೂ.ಗೆ ಏರಿದೆ ಎಂದು ಅಂದಾಜಿಸಲಾಗಿದೆ. ಜಲಾಲ್ ದೀಪಿಕಾ ಅವರೊಂದಿಗೆ ಹಲವಾರು ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಪಿಲ್ ಶರ್ಮಾ ಅವರ ‘ದಿ ಕಪಿಲ್ ಶರ್ಮಾ ಶೋ’ ನಲ್ಲಿಯೂ ದೀಪಿಕಾ ಜೊತೆ ಜಲಾಲ್ ಒಮ್ಮೆ ಕಾಣಿಸಿಕೊಂಡಿದ್ದಾರೆ. ದೀಪಿಕಾ ಅವರಿಗೆ ಜಲಾಲ್ ಬಗ್ಗೆ ಸಂಪೂರ್ಣ ನಂಬಿಕೆ ಇದೆ.

Advertisement

 

Advertisement


ಎರಡು ವರ್ಷಗಳ ಹಿಂದೆ ಸಲ್ಮಾನ್ ಖಾನ್ ಅವರ ಪರ್ಸನಲ್ ಬಾಡಿ ಗಾರ್ಡ್ ಶೇರಾ ಅವರಿಗೆ ಪರ್ಸನಲ್ ಸೆಕ್ಯೂರಿಟಿ ಸಂಸ್ಥೆಯೊಂದು ಉತ್ತಮ ಬಾಡಿಗಾರ್ಡ್ ಪ್ರಶಸ್ತಿ ನೀಡುವ ಮೂಲಕ ಗೌರವ ನೀಡಿತ್ತು. ಶೇರಾ ಸುಮಾರು 20 ವರ್ಷಗಳಿಂದ ಸಲ್ಮಾನ್ ಖಾನ್ ಅವರ ಬಳಿ ಸೇವೆ ಸಲ್ಲಿಸುತ್ತಿದ್ದಾರೆ. ಸಿಖ್ ಮನೆತನದಿಂದ ಬಂದಿರುವ ಶೇರಾ ರವರ ಮೂಲ ಹೆಸರು ಗುರ್ಮಿತ್. 1995ರಲ್ಲಿ ಸಲ್ಮಾನ್ ಖಾನ್ ಅವರಿಗೆ ಬಾಡಿ ಗಾರ್ಡ್ ಆಗಿ ನೇಮಕವಾದ ಶೇರಾ ತಮ್ಮ ಪ್ರಾಮಾಣಿಕ ಸೇವೆಯನ್ನು ಒದಗಿಸಿದ್ದಾರೆ.
ಮೂಲಗಳ ಪ್ರಕಾರ ಸಲ್ಮಾನ್ ಖಾನ್ ತನ್ನ ನೆಚ್ಚಿನ ಬಾಡಿ ಗಾರ್ಡ್ ಶೇರಾಗೆ ಪ್ರತಿ ತಿಂಗಳು 15 ಲಕ್ಷ ರೂಪಾಯಿ ಸಂಬಳ ನೀಡ್ತಾರೆ. ವರ್ಷಕ್ಕೆ ಸುಮಾರು 2 ಕೋಟಿ ರೂಪಾಯಿ ಸಂಬಳ ಪಡೆಯುತ್ತಾರೆ ಶೇರಾ. ಬಾಲಿವುಡ್ ಚಿತ್ರರಂಗದ ಯಾವ ಸ್ಟಾರ್ ಗಳ ಅಂಗರಕ್ಷಕರಿಗೂ ಇಷ್ಟು ದೊಡ್ಡ ಸಂಬಳ ಸಿಗುವುದಿಲ್ಲ ಬಿಡಿ!.

Advertisement
Advertisement

Advertisement
Share this on...