ವಿದ್ಯೆಗೆ ವಯಸ್ಸಿನ ಮಿತಿ ಇಲ್ಲ..53 ನೇ ವಯಸ್ಸಿನಲ್ಲಿ ಪದವಿ ಪರೀಕ್ಷೆ ಬರೆದ ನಟಿ

in ಕನ್ನಡ ಮಾಹಿತಿ/ಸಿನಿಮಾ 230 views

ವಿದ್ಯೆ ಕಲಿಯಲು ವಯಸ್ಸಿನ ಮಿತಿ ಇಲ್ಲ. ಆರ್ಥಿಕ ಸಮಸ್ಯೆಯಿಂದಲೋ ಅಥವಾ ಮತ್ತಾವುದೋ ವೈಯಕ್ತಿಕ ಸಮಸ್ಯೆಯಿಂದಲೋ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ ಎಷ್ಟೋ ಮಂದಿ ಜೀವನದಲ್ಲಿ ಸೆಟಲ್ ಆದ ನಂತರ ಕಾಲೇಜಿಗೆ ಹೋಗಿ ವಿದ್ಯೆ ಕಲಿಯಲು ಬಯಸುತ್ತಾರೆ. ಕಾಲೇಜಿಗೆ ಹೋಗಲಾಗದವರು ಡಿಸ್ಟೆನ್ಸ್ ಎಜುಕೇಷನ್ ಪಡೆದು ಪರೀಕ್ಷೆ ಬರೆಯುತ್ತಾರೆ. ಇತ್ತೀಚೆಗೆ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಮೆಡಿಕಲ್ ಎಕ್ಸಾಂ ಬರೆದಿದ್ದರು. ಪರೀಕ್ಷಾ ಕೇಂದ್ರದಲ್ಲಿ ಯಾರೂ ಗುರುತಿಸಬಾರದು ಎಂಬ ಕಾರಣಕ್ಕೆ ಮಾಸ್ಕ್​ ಧರಿಸಿ ತಲೆಗೆ ದುಪ್ಪಟ್ಟ ಹೊದ್ದು ಪರೀಕ್ಷೆ ಬರೆಯಲು ಹೋದರೂ ಅಭಿಮಾನಿಗಳು ಆಕೆಯನ್ನು ಗುರುತಿಸಿದ್ದರು. ಆಕೆಯನ್ನು ನೋಡಿದ ಸಂತೋಷಕ್ಕೆ ಅವರಿಗೆ ಶುಭ ಕೋರಿ ಸಾಯಿ ಪಲ್ಲವಿ ಫೋಟೋ ತೆಗೆಸಿಕೊಂಡಿದ್ದರು. ಇದೀಗ ಮತ್ತೊಬ್ಬ ನಟಿ 53ನೇ ವಯಸ್ಸಿನಲ್ಲಿ ಡಿಗ್ರಿ ಪರೀಕ್ಷೆ ಬರೆದಿದ್ದಾರೆ. ಖ್ಯಾತ ಟಾಲಿವುಡ್ ಪೋಷಕ ನಟಿ ಹೇಮ ಸೆಪ್ಟೆಂಬರ್ 27 ರಂದು ನಲ್ಲಗೊಂಡದಲ್ಲಿ ಪರೀಕ್ಷೆ ಬರೆದಿದ್ದಾರೆ. ಹೇಮ ಹೈದರಾಬಾದ್​ನಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ. “ಡಿಗ್ರಿ ಪಡೆಯುವುದು ಬಹಳ ವರ್ಷಗಳ ಆಸೆಯಾಗಿತ್ತು.

Advertisement

Advertisement

ಹೈದರಾಬಾದ್​​ನಲ್ಲಿ ಪರೀಕ್ಷೆ ಬರೆಯಲು ಮುಜುಗರ ಎನಿಸಿತು. ಅಷ್ಟೇ ಅಲ್ಲ, ಎಲ್ಲರೂ ಕಂಡುಹಿಡಿದರೆ ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಕಷ್ಟ ಎನಿಸಬಹುದು ಎಂಬ ಕಾರಣಕ್ಕೆ ನಲ್ಲಗೊಂಡದಲ್ಲಿ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡೆ. ಆದರೂ ಜನರು ನನ್ನನ್ನು ಕಂಡುಹಿಡಿದರು. ಆದರೆ ಇಲ್ಲಿ ಪರೀಕ್ಷೆ ಬರೆಯಲು ನನಗೆ ಯಾವುದೇ ತೊಂದರೆಯಾಗಲಿಲ್ಲ” ಎಂದು ಹೇಮಾ ಹೇಳಿಕೊಂಡಿದ್ದಾರೆ. ಅಲ್ಲಿ ತಮ್ಮಂತೆಯೇ ಎಷ್ಟೋ ಮಹಿಳೆಯರು ಪರೀಕ್ಷೆ ಬರೆಯಲು ಬಂದದ್ದನ್ನು ನೋಡಿ ಹೇಮ ಖುಷಿ ಪಟ್ಟಿದ್ದಾರೆ. ಹೇಮ ಮಾಸ್ಕ್ ಧರಿಸಿದ್ದರೂ ಜನರು ಅವರನ್ನು ಗುರುತುಹಿಡಿದಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಹೇಮ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

Advertisement

ಹೇಮ ಅವರಿಗೆ ಕಂಪ್ಯೂಟರ್​ ಶಿಕ್ಷಣದ ಬಗ್ಗೆ ಮತ್ತಷ್ಟು ತಿಳಿಯುವ ಆಸಕ್ತಿ ಇದೆಯಂತೆ. ಸಿನಿಮಾ , ಶಿಕ್ಷಣ , ಕುಟುಂಬ ಎಲ್ಲವನ್ನೂ ಸಮವಾಗಿ ನಿಭಾಯಿಸುತ್ತಿದ್ದಾರೆ ಹೇಮ. 1989 ರಲ್ಲಿ ‘ಚಿನ್ನಾರಿ ಸ್ನೇಹಂ’ ಎಂಬ ಚಿತ್ರದ ಮೂಲಕ ಹೇಮ ಚಿತ್ರರಂಗ ಪ್ರವೇಶಿಸಿದರು. ಅಲ್ಲಿಂದ ಅವರು ಸ್ವಾತಿ ಚಿನುಕುಲು, ಮುದ್ದುಲ ಮಾವಯ್ಯ, ಧರ್ಮ ಯುದ್ಧಂ, ಭಲೇ ದೊಂಗ, ಲಾರಿ ಡ್ರೈವರ್, ಮಗಧೀರ, ಬೃಂದಾವನಂ, ರೆಬೆಲ್, ಮಿರ್ಚಿ, ವಿನಯ ವಿಧೇಯ ರಾಮ ಸೇರಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಟಾಲಿವುಡ್​ನಲ್ಲಿ ಹೇಮ ಹಾಗೂ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರ ಜೋಡಿ ಸಖತ್ ಹಿಟ್ ಆಗಿದೆ.

Advertisement

ಹೇಮ ಸಿನಿಮಾ ಮಾತ್ರವಲ್ಲದೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. 2014 ರಲ್ಲಿ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಜೆಎಸ್​ಪಿ ಪಾರ್ಟಿಯಿಂದ ಮಂಡಪೇಟ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ರಾಜಕೀಯ ಕೈ ಹಿಡಿಯದಿದ್ದರೂ ವಿದ್ಯೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ನಟಿ ಈಗ ಪರೀಕ್ಷೆ ಬರೆದಿದ್ದಾರೆ. ಅವರ ಉನ್ನತ ಶಿಕ್ಷಣದ ಕನಸು ನನಸಾಗಲಿ ಎಂದು ಹಾರೈಸೋಣ.

 

ಕೊಲ್ಲೂರು ಮೂಕಾಂಬಿಕಾ ದೇವಿ ಜ್ಯೋತಿಷ್ಯ ಕೇಂದ್ರ
ಶ್ರೀ ಕಾಳಿಮಾತಾ ದೇವಿ ಉಪಾಸಕರಾದ ಪಂಡಿತ್ ಶ್ರೀ ವಾಸುದೇವ ಗುರೂಜಿ ಅವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಶತ್ರು ಕಾಟ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಮಾಟ ಮಂತ್ರ ನಿವಾರಣೆ ಆರೋಗ್ಯ ಹಣಕಾಸು ಮದುವೆ ಸಂತಾನ ಪ್ರೇಮ ವಿವಾಹ ಮನೆಯಲ್ಲಿ ಅಶಾಂತಿ ಗಂಡ ಹೆಂಡತಿ ಕಲಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ 3 ದಿನದಲ್ಲಿ  ಫೋನಿನ ಮೂಲಕ ಶಾಶ್ವತ ಪರಿಹಾರ. ph : 8970080017 ಇಂದೇ ಕರೆ ಮಾಡಿ.

Advertisement
Share this on...