ವಿಷ್ಣುವರ್ಧನ್ ಜೊತೆಯ ಚಿತ್ರವೂ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಟಿ ಈಗ ಸ್ಕೂಲ್ ಟೀಚರ್ ! ಯಾರು ಗೊತ್ತಾ?

in ಸಿನಿಮಾ 97 views

ದಕ್ಷಿಣ ಭಾರತದ ಖ್ಯಾತ ನಟಿ ಇವರು. ಈ ನಟಿ ಕನ್ನಡ ಸೇರಿದಂತೆ ತೆಲುಗು ತಮಿಳಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಭಾರತದ ಹಲವಾರು ಟಾಪ್ ನಟರ ಜೊತೆ  ನಟಿಸಿದ್ದಾರೆ . ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವಾಗಲೆ  ತಮಿಳು ನಿರ್ದೇಶಕ  ರಾಜಕುಮಾರನ್  ಎಂಬುವವರನ್ನು ಪ್ರೀತಿಸಿದರು. ಈ ನಟಿಯ ಮನೆಯವರು ಅವರ ಗಾಢವಾದ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ.  ಆದ್ದರಿಂದ ಹೆತ್ತವರನ್ನು ತೊರೆದು ಬಂದು ರಾಜಕುಮಾರನ್  ಅವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Advertisement

 

Advertisement

Advertisement

 

Advertisement

ನಂತರ ಗಂಡ ಮನೆ ಮಕ್ಕಳು ಎಂದು ಬ್ಯುಸಿಯಾದರು. ಹೀಗಾಗಿ ಅವಕಾಶಗಳು ಕಡಿಮೆಯಾಗುತ್ತಾ ಬಂದವು. ವಿಪರ್ಯಾಸವೆಂದರೆ ಇತ್ತ ರಾಜಕುಮಾರನ್  ಅವರು ನಿರ್ದೇಶನ ಮಾಡಿದ ಎಲ್ಲಾ ಸಿನಿಮಾಗಳು ಸೋಲನ್ನು ಕಾಣಲು ಆರಂಭಿಸಿದವು. ಇಂತಹ ಸಂದರ್ಭದಲ್ಲಿ ಪತಿಯನ್ನು ದೂಷಿಸಲಿಲ್ಲ ಬದಲಾಗಿ ಅವರಿಗೆ ಧೈರ್ಯವನ್ನು ತುಂಬಿದ್ದರು. ತಂದೆ ತಾಯಿಯ ಹತ್ತಿರ ಸಹಾಯವನ್ನು ಕೂಡ ಕೇಳಲಿಲ್ಲ. ಜೀವನದಲ್ಲಿ ಕಷ್ಟ ಸುಖ ಶ್ರೀಮಂತಿಕೆ ಬಡತನ ಎಲ್ಲವನ್ನು ಸಮನಾಗಿ ಸ್ವೀಕರಿಸಬೇಕು. ಪರಿಸ್ಥಿತಿಗೆ ತಕ್ಕಂತೆ  ನಮ್ಮನ್ನು  ಬದಲಾಯಿಸಿಕೊಳ್ಳಬೇಕು. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಪ್ರೀತಿಯೊಂದೇ ಶಾಶ್ವತ ಎಂದು ಹೇಳಿಕೊಳ್ಳುತ್ತಾರೆ .

 

 

ತುಂಬಾ ಧೈರ್ಯವಂತೆ ಮತ್ತು ಸ್ವಾಭಿಮಾನಿಯಾಗಿದ್ದ ಈ ನಟಿ ಟೀಚರ್ ಟ್ರೈನಿಂಗ್ ಮಾಡುತ್ತಾರೆ . ನಂತರ ಚೆನ್ನೈನ ಚರ್ಚ್ ಪಾರ್ಕ್  ಕಾನ್ವೆಂಟ್   ಸ್ಕೂಲಿನಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದರ ಜತೆಗೆ ತಮಿಳಿನ ಕೆಲವು ರಿಯಾಲಿಟಿ ಶೋನ ಜಡ್ಜ್ ಆಗಿ ಕೂಡ ಕೆಲಸವನ್ನು ಮಾಡುತ್ತಾರೆ.  ಇವರ ಪತಿ ರಾಜಕುಮಾರನ್  ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಪ್ರಾರಂಭಿಸುವ ಮೂಲಕ ಪತ್ನಿಗೆ ಸಹಕಾರವನ್ನು ನೀಡುತ್ತಾರೆ. ಇಂದಿನ  ಕಾಲದಲ್ಲಿ ಎಷ್ಟೋ ನಟ ನಟಿಯರು ಎಷ್ಟೇ  ಪ್ರೀತಿಸಿ ಮದುವೆಯಾಗಿದ್ದರೂ ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡಿಕೊಂಡು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ.

 

ಆದರೆ ಈ ನಟಿ ಪತಿ ಸಂಕಷ್ಟದಲ್ಲಿದ್ದಾಗ ಅವರ ಕೈ ಹಿಡಿದು ನಡೆಸಿದ್ದಾರೆ. ಈ ನಟಿ  ಯಾರೆಂದರೆ ಕನ್ನಡದ ಪ್ರೇಮೋತ್ಸವ ಎಂಬ ಚಿತ್ರದಲ್ಲಿ ವಿಷ್ಣುವರ್ಧನ್ ರವರ ಜೊತೆ ನಾಯಕಿಯಾಗಿ ನಟಿಸಿದ ದೇವಯಾನಿ. ದೇವಯಾನಿ ರವರ ಪ್ರೀತಿ ಪವಿತ್ರವಾದದ್ದು ಇಂತಹ ಪ್ರೀತಿ ನಿಮ್ಮ ಬಾಳಿನಲ್ಲಿ ಸಿಕ್ಕಿದ್ದೇ ಆದರೆ ಕಾಮೆಂಟ್ ಮಾಡಿ ತಿಳಿಸಿ .

Advertisement
Share this on...