20 ವರ್ಷಗಳ ನಂತರ ಚಂದನವನಕ್ಕೆ ಮರಳಿದ “ದೇವಯಾನಿ”

in ಮನರಂಜನೆ/ಸಿನಿಮಾ 235 views

ಡಾ. ವಿಷ್ಣುವರ್ದನ್ ನಾಯಕರಾಗಿದ್ದ ‘ ಪ್ರೇಮೊತ್ಸವ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ ಈ ದೇವಯಾನಿ, ಆನಂತರ ಕನ್ನಡ ಚಿತ್ರರಂಗದಿಂದ ದೂರ ಉಳಿದರು.ಈಗ 20 ವರ್ಷಗಳ ನಂತರ ಮತ್ತೆ ಕನ್ನಡದಲ್ಲಿ ನಟಿಸುತ್ತಿದ್ದಾರೆ.ಇವರು ಈಗ ಶ್ರೀಮುರುಳಿ ನಟನೆಯ ” ಮದಗಜ ” ಚಿತ್ರಕ್ಕಾಗಿ ಕನ್ನಡಕ್ಕೆ ಮತ್ತೆ ವಾಪಸ್ ಬಂದಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿರುವ ಮದಗಜ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿತ್ತು.ಈ ಸಿನಿಮಾದಲ್ಲಿ ಇವರು ಶ್ರೀಮುರುಳಿ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಪಾತ್ರ ಮತ್ತು ಬಹಳ ವರ್ಷಗಳ ನಂತರ ಚಂದನವನದಲ್ಲಿ ಅಭಿನಯಿಸುತ್ತಿರುವುದು ನನಗೆ ಖುಷಿ ಎನಿಸುತ್ತಿದೆ ಎನ್ನುತ್ತಾರೆ. 1999 ರಲ್ಲಿ ಪ್ರೇಮೊತ್ಸವ ಸಿನಿಮಾದಲ್ಲಿ ನಟಿಸಿದ್ದೇ ಕೊನೆ, ಆ ನಂತರ ಇವರು ಕನ್ನಡದಲ್ಲಿ ನಟಿಸಲಿಲ್ಲ.  ನಿರ್ದೇಶಕ ಮಹೇಶ್ ಇವರನ್ನು ಭೇಟಿ ಮಾಡಿಕಥೆ ಹೇಳಿದ ನಂತರ ಇವರಿಗೆ ಆ ಕಥೆ ಇಷ್ಟವಾಯಿತು ಬಹಳ ವರ್ಷಗಳ ನಂತರ ಕನ್ನಡ ಚಲನಚಿತ್ರಕ್ಕೆ ಮರಳಿ ಬರುತ್ತಿರುವುದರಿಂದ ಒಳ್ಳೆಯ ಪಾತ್ರದ ಮೂಲಕ ಬರಬೇಕೆಂದು ಇವರ ಆಸೆ ಆಗಿತ್ತು.

Advertisement

Advertisement

ಹಾಗಾಗಿ ಇವರು ಈ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಅವರ ಪಾತ್ರ ಸಿಕ್ಕಾಪಟ್ಟೆ ಎಮೋಷನಲ್ ಮತ್ತು ಲವ್ಲಿಯಾಗಿದೆಯಂತೆ .ನಿರ್ದೇಶಕ ಮಹೇಶ್ ಮತ್ತು ಮುರುಳಿ ಇರುವ ಒಳ್ಳೆಯ ಚಿತ್ರತಂಡ ಇವರಿಗೆ ಸಿಕ್ಕಿರುವುದು ಸಂತಸದ ವಿಷಯ ಎಂದಿದ್ದಾರೆ.  20 ವರುಷಗಳಿಂದ ಮಿಸ್ ಮಾಡಿಕೊಂಡಿದ್ದ ಚಂದನವನವನ್ನು ಈ ಸಿನಿಮಾದ ಮೂಲಕ ಸರಿ ಮಾಡಿಕೊಂಡಿದ್ದಾರಂತೆ. ಪ್ರೇಮೊತ್ಸವ ನಂತರ ಇವರಿಗೆ ಸಾಕಷ್ಟು ಅವಕಾಶಗಳು ಬಂದರೂ ಕೂಡಾ ತಮಿಳಿನಲ್ಲಿ ಇವರು ಬಿಝಿ ಆದ ಕಾರಣ ಕನ್ನಡದಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ.ಅದಾದ ನಂತರ ಮದುವೆ,ಮಕ್ಕಳು ಎಂದು ಇನ್ನಷ್ಟು ವರ್ಷ ನಟನೆಯಿಂದ ದೂರ ಇದ್ದರು .ಇಬ್ಬರು ಹೆಣ್ಣಮಕ್ಕಳು ದೊಡ್ಡವರಾದ ಮೇಲೆ ಮತ್ತೆ ನಟಿಸಲು ಆರಂಭಿಸಿ ಸುಮಾರು ಸಿನಿಮಾಗಳಲ್ಲಿ ನಟಿಸಿದರು. ಆ ಸಮಯದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸುವ ಅವಕಾಶ ಮಿಸ್ ಮಾಡಿಕೊಂಡಿದ್ದಕ್ಕೆ ಬೇಜಾರ್ ಆಯ್ತು ಎನ್ನುತ್ತಾರೆ.

Advertisement

Advertisement

ದೇವಯಾನಿ ಒಬ್ಬರು ಅದ್ಬುತ ನಟಿ. ಮದ್ಯ ರಾತ್ರಿ 2 ಗಂಟೆಗೆ ಪ್ಯಾಕಾಪ್ ಮಾಡಿ ಬೆಳಗ್ಗೆ 6 ಗಂಟೆಗೆ ಬರ್ಬೇಕು ಮೇಡಂ ಎಂದರು ಅವರು ಹೋಗುತ್ತಿದ್ದರಂತೆ. ಎಲ್ಲಾ ಸೀನ್ ಅನ್ನು ಎರಡು ಶಾಟ್ಸ್ ತೆಗೆದುಕೊಳ್ಳದೆ ಒಂದೇ ಶಾಟ್ನಲ್ಲಿ ಮಾಡುತ್ತಿದ್ದಾರಂತೆ. ಈ ಚಿತ್ರದ ನಂತರ  ಕನ್ನಡ ಚಿತ್ರ ರಂಗದ ಬಹು ಬೇಡಿಕೆಯ ಪೋಷಕ ನಟಿಯಾಗುತ್ತೇನೆ ಎಂದು ಹೇಳುತ್ತಾರೆ ಇವರು ಈ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಟಿಸಿದ್ದಾರೆ. ಒಂದು ಶೆಡ್ಯೂಲ್ ಮುಗಿದಿದ್ದು ಇನ್ನೊಂದು ಶೆಡ್ಯೂಲ್ ಸದ್ಯದಲ್ಲೇ ಶುರು ಆಗಲಿದ್ದು ಅದರಲ್ಲಿ ಇವರು ಕೂಡಾ ಅಭಿನಯಿಸಲಿದ್ದಾರೆ. ಬಹಳ ವರ್ಷದ ನಂತರ ಚಂದನ ವನಕ್ಕೆ ಒಳ್ಳೆಯ ಪಾತ್ರದ ಮೂಲಕ ಬರುತ್ತಿರುದಕ್ಕೆ ತುಂಬಾ ಸಂತೋಷ ಆಗುತ್ತಿದೆ ಎಂದು ನಟಿ ದೇವಯಾನಿ ಹೇಳುತ್ತಾರೆ. ಮುಂದೆಯೂ ಕೂಡಾ ಒಳ್ಳೊಳ್ಳೆ ಪಾತ್ರಗಳ ಮೂಲಕ ಕನ್ನಡ ಚಲನ ಚಿತ್ರರಂಗದಲ್ಲಿ ಇದ್ದು ಕನ್ನಡಿಗರ ಜೊತೆ ಇನ್ನೂ ಜಾಸ್ತಿ ಕನೆಕ್ಟ್ ಆಗುತ್ತೇನೆ ಎನ್ನುತ್ತಾರೆ ನಟಿ ದೇವಯಾನಿ.

Advertisement
Share this on...