ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿರುವ ಕನ್ನಡಿಗರಿಗೆ ದೇವದತ್ ಪಡಿಕ್ಕಲ್ ಏನ್ ಹೇಳಿದರೆ ಗೊತ್ತಾ?

in News/ಕ್ರೀಡೆ 221 views

ಆರ್ ಸಿ ಬಿ ತಂಡದಲ್ಲಿ ಆಡುತ್ತಿರುವ ಕನ್ನಡಿಗ ದೇವದತ್ ಪಡಿಕ್ಕಲ್ ಯಾರಿಗೆ ಗೊತ್ತಿಲ್ಲ ಹೇಳಿ ಸದ್ಯದ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಇವರು ಈಗಾಗಲೇ ಮೂರು ಭರ್ಜರಿ ಅರ್ದ ಶತಕವನ್ನು ಸಿಡಿಸಿ ತಂಡದಲ್ಲಿ ತಮ್ಮ ಸ್ಥಾನವನ್ನ ಭದ್ರ ಪಡಿಸಿಕೊಂಡು ಆಡುತ್ತಾ ಇದ್ದಾರೆ. ಆರ್ ಸಿ ಬಿ ತಂಡದಲ್ಲಿ ಕನ್ನಡಿಗರು ಇಲ್ಲ ಎಂಬ ಅಪಖ್ಯಾತಿಗೆ ಪಾತ್ರ ಆಗಿತ್ತು ಕನ್ನಡಿಗರು ಇಲ್ಲದ ತಂಡಕ್ಕೆ ನಾವು ಹೇಗೆ ಸಪೋರ್ಟ್ ಮಾಡುವುದು ಎಂದು ಎಷ್ಟೋ ಜನ ಪ್ರಶ್ನೆ ಮಾಡಿದ್ದೂ ಉಂಟು. ಕರ್ನಾಟಕ ತಂಡಕ್ಕೆ ಕನ್ನಡಿಗರೇ ಇಲ್ಲದಿರುವುದು ಬೇಸರವನ್ನು ತಂದಿತ್ತು ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಬ್ಬರು ಕನ್ನಡಿಗರನ್ನು ಖರೀದಿಸಿ ಆ ಬೇಸರವನ್ನು ತೊಡೆದು ಹಾಕುವ ಮೂಲಕ ಕನ್ನಡಿಗರಿಗೆ ಅವಕಾಶ ನೀಡಿತು. ಅಷ್ಟೆ ಅಲ್ಲದೆ ಪ್ರಮುಖವಾಗಿ ಕನ್ನಡಿಗನನ್ನು ಆರಂಭಿಕ ಆಟಗಾರನಾಗಿ ಮಾಡುವ ಮೂಲಕ ಕನ್ನಡಿಗರಿಗೆ ಸಂತೋಷ ಪಡುವಂತೆ ಮಾಡಿದಲ್ಲದೆ ,ಕನ್ನಡಿಗರು ಇಲ್ಲದ ತಂಡಕ್ಕೆ ಹೇಗೆ ಸಪೋರ್ಟ್ ಮಾಡುವುದು ಎಂದು ಹೇಳುವರು ಬಾಯಿ ಮುಚ್ಚುವಂತೆ ಮಾಡಿತು.

Advertisement

Advertisement

ಅದಕ್ಕೆ ತಕ್ಕಂತೆ ದೇವದತ್ ಪಡಿಕ್ಕಲ್ ಅವರು ತಮ್ಮ ಉತ್ತಮ ಪ್ರದರ್ಶನ ನೀಡುವತ್ತ ಮುಖ ಮಾಡಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ ಬ್ಯಾಟಿಂಗ್ ವಿಭಾಗದಲ್ಲಿ ಅಷ್ಟೆ ಅಲ್ಲದೆ ಫೀಲ್ಡಿಂಗ್ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ . ಸದ್ಯದ ಮಟ್ಟಿಗೆ ಇವರು ಎಷ್ಟೋ ಹುಡುಗಿಯರ ಪಾಲಿನ ಕ್ರಷ್ ಕೂಡ ಆಗಿದ್ದಾರೆ ಎನ್ನುವುದು ಸುಳ್ಳಲ್ಲ.
ಇಷ್ಟೆಲ್ಲಾ ಮಾಡಿದ ಇವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕನ್ನಡಿಗರಿಗೆ ಮತ್ತು ಮನೀಶ್ ಪಾಂಡೆ ಗೆ ಏನು ಹೇಳಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

Advertisement

ಖಾಸಗಿ ಚಾನೆಲ್ ಆದಾ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ನೆಡೆಸಿದ ಸಂದರ್ಶನದಲ್ಲಿ ಎನ್ ಗುರು ಎಲ್ಲಾ ಆರಾಮ ಎನ್ ವಿಶೇಷ ಎಂದು ಮಾತು ಶುರು ಮಾಡಿದ
ದೇವದತ್ ಪಡಿಕ್ಕಲ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲಿ ನಿಮ್ ನೆಚ್ಚಿನ ಜಾಗ ಯಾವುದು ಕರ್ನಾಟಕದಲ್ಲಿ ನಿಮ್ಮ ನೆಚ್ಚಿನ ತಿನಿಸು ಯಾವುದು ಅದಕ್ಕೆ ಅವರು ಜಾಗ ತಾವು ಓದಿದ ಹೈ ಸ್ಕೂಲ್ ಎನ್ನುತ್ತಾರೆ ಇಲ್ಲಿ ಅವರು ಮೂರು ವರ್ಷ ಕಳೆದಿದ್ದೇನೆ ಎಂದು ಹೇಳುತ್ತಾರೆ ಹಾಗೆ ಬೆಂಗಳೂರಲ್ಲಿ ತಮ್ಮ ಇಷ್ಟದ ತಿಂಡಿ ಯಾವುದೆಂದರೆ ಮಸಾಲ ದೋಸೆ ಎನ್ನುತ್ತಾರೆ. ನಂತರ ಅವರು ಎಸ್ ಆರ್ ಹೆಚ್ ತಂಡದಲ್ಲಿ ಇರುವ ನಿಮ್ಮ ಸ್ನೇಹಿತ ಮನೀಶ್ ಪಾಂಡೆ ಗೆ ಏನು ಹೇಳ್ತೀರಾ ಎಂದು ಕೇಳಿದಾಗ ಇವರು ಜಾಸ್ತಿ ಎನ್ ಇಲ್ಲ ನೋಡೋಣ ಹೆಗ್ ಆಗಾತ್ತೆ ಅಂತ ಯಾರ್ ಜಾಸ್ತಿ ರನ್ ಹೊಡಿತಾರೆ ನೋಡೋಣ ಅಂತ ಹೇಳ್ತಾರೆ.

Advertisement

 

ಆಮೇಲೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಇರುವ ನಮ್ಮ ಕನ್ನಡ ಹುಡುಗರ ಜೊತೆ ಆಡೋಕೆ ಹೇಗ್ ಅನ್ಸತ್ತೆ ಎಂದು ಕೇಳಿದಾಗ ದೇವದತ್ ಪಡಿಕ್ಕಲ್ ಅವರು
ಎಲ್ಲರ ಜೊತೆ ತುಂಬಾ ಕ್ಲೋಸ್ ಇದೀನಿ ಈ ವರ್ಷ ತುಂಬಾ ಒಟ್ಟಿಗೆ ಆಡಿದ್ದಿವಿ ಸೀಸನ್ ತುಂಬಾ ಲಾಂಗ್ ಇತ್ತು ,ಅವರೊಂದಿಗೆ ಆಡಲು ಎದುರು ನೋಡ್ತಾ ಇದ್ದೀನಿ ಎನ್ನುತ್ತಾರೆ.ಕೊನೆಯದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಎನ್ ಹೇಳ್ತೀರಾ ಎಂದು ಕೇಳಿದಾಗ ಅವರು ಎಲ್ಲರೂ ಆರ್ ಸಿ ಬಿ ಗೆ ಸಪೋರ್ಟ್ ಮಾಡ್ತಾ ಇರಿ ಎಂದು ಹೇಳುತ್ತಾರೆ .

ಅದೇನೇ ಇರಲಿ ಈ ಇಪ್ಪತ್ತರ ಹರೆಯದ ಹುಡುಗ ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯ ಇವರ ಗೆಲುವಿನ ಓಟ ಹೀಗೆ ಮುಂದುವರಿಯಲಿ ಇನ್ನೂ ಉತ್ತಮ ಮಟ್ಟದ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಡಿ ಕರ್ನಾಟಕಕ್ಕೆ ಇನ್ನೂ ಹೆಮ್ಮೆಯನ್ನು ತರಲಿ ಎಂಬುದು ಒಂದು ಹಾರೈಕೆ ಆದರೆ, ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದು ಬರಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಐಪಿಎಲ್ ಕಪ್ ತಂದು ಕೊಡಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಮತ್ತೊಂದು ಹಾರೈಕೆ.

Advertisement
Share this on...