ಟಾಲಿವುಡ್​​​ ಖ್ಯಾತ ಸ್ಟಾರ್ ಜೊತೆ ಖಳನಟನಾಗಿ ನಟಿಸಲಿದ್ದಾರೆ ಧನಂಜಯ್​​…ಯಾವುದು ಆ ತೆಲುಗು ಚಿತ್ರ…?

in ಸಿನಿಮಾ 92 views

ಕನ್ನಡದ ನಟ-ನಟಿಯರು ಮೊದಲಿನಿಂದಲೂ ಪರಭಾಷಾ ಚಿತ್ರದಲ್ಲಿ ಮಿಂಚುತ್ತಾ ಬಂದಿದ್ದಾರೆ. ಧನಂಜಯ್ ವಿಚಾರಕ್ಕೆ ಬರುವುದಾದರೆ ದುನಿಯಾ ಸೂರಿ ನಿರ್ದೇಶನದ ‘ಟಗರು’ ಚಿತ್ರದಲ್ಲಿ ನಟಿಸಿದ್ದೇ ತಡ ಅವರ ಹೆಸರಿನ ಹಿಂದೆ ಡಾಲಿ ಹೆಸರು ಖಾಯಂ ಆಯ್ತು. ನಂತರ ರಾಮ್​​​​​ಗೋಪಾಲ್​ ವರ್ಮಾ ಕಣ್ಣಿಗೆ ಬಿದ್ದ ಅವರು ವರ್ಮಾ ನಿರ್ದೇಶನದ ‘ಭೈರವ ಗೀತ’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೂ ಪರಿಚಿತರಾದರು. ಇದೀಗ ಮತ್ತೊಂದು ತೆಲುಗು ಚಿತ್ರದಲ್ಲಿ ಧನಂಜಯ್ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Advertisement

 

Advertisement

Advertisement

 

Advertisement

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸುತ್ತಿರುವ ‘ಪುಷ್ಪ’ ಚಿತ್ರದಲ್ಲಿ ಧನಂಜಯ್ ಖಳನಟನಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. . ಮೊದಲು ಈ ಪಾತ್ರಕ್ಕೆ ರಾಜ್ ದೀಪಕ್ ಶೆಟ್ಟಿ ಅಥವಾ ಬಾಬ್ಬಿ ಸಿಂಹ ಎನ್ನಲಾಗಿತ್ತು. ಆದರೆ ಕೊನೆಗೆ ಧನಂಜಯ್ ಹೆಸರು ಕೇಳಿ ಬಂದಿದೆ. ‘ಪುಷ್ಪ’ ಚಿತ್ರದಲ್ಲಿ ಧನಂಜಯ್​​ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದರೂ ಅವರ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ ಎನ್ನಲಾಗಿದೆ. ಲಾಕ್ ಡೌನ್ ನಂತರ ಧನಂಜಯ್ ಸಿನಿಮಾ ಶೂಟಿಂಗ್​​​ನಲ್ಲಿ ಭಾಗವಹಿಸಲಿದ್ದು ಅಲ್ಲು ಅರ್ಜುನ್ ಜೊತೆ ನಟಿಸಲು ಅವರು ಕೂಡಾ ಬಹಳ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

 

 

ಕಳ್ಳ ಸಾಗಾಣಿಕೆಗೆ ಸಂಬಂಧಿಸಿದ ಈ ಚಿತ್ರ ತೆಲುಗು ಭಾಷೆಯೊಂದಿಗೆ ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ತಯಾರಾಗಲಿದೆ. ಕುಮಾರಿ ​​ 21 ಎಫ್ ಖ್ಯಾತಿಯ ಸುಕುಮಾರ್​​​​ ‘ಪುಷ್ಪ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಮೊದಲ ಖಳನಾಯಕನಾಗಿ ಸುನಿಲ್ ಶೆಟ್ಟಿ ನಟಿಸುತ್ತಿದ್ದು ಧನಂಜಯ್ 2ನೇ ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​​​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು ಮೂವರು ಕನ್ನಡಿಗರು ಈ ಚಿತ್ರದಲ್ಲಿ ನಟಿಸಲಿದ್ದಾರೆ.

 

 

ರಂಗಭೂಮಿ ಹಿನ್ನೆಲೆಯುಳ್ಳ ಧನಂಜಯ್​ ಗುರುಪ್ರಸಾದ್ ಅವರ ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್​​ವುಡ್​​ಗೆ ಕಾಲಿಟ್ಟರು. ನಂತರ ಅವರು ರಾಟೆ, ಶರಣ ಅಲ್ಲಮ, ಎರಡನೆ ಸಲ, ಹ್ಯಾಪಿ ನ್ಯೂ ಇಯರ್​​​, ಯಜಮಾನ, ಪಾಪ್ ಕಾರ್ನ್​ ಮಂಕಿ ಟೈಗರ್ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯುವರತ್ನ, ಸಲಗ, ಡಾಲಿ ಚಿತ್ರಗಳು ಪ್ರೊಡಕ್ಷನ್ ಹಂತದಲ್ಲಿವೆ. ಈಗ ‘ಪುಷ್ಪ’ ಚಿತ್ರದ ಮೂಲಕ ಟಾಲಿವುಡ್​​​​​​​ನಲ್ಲಿ ಧನಂಜಯ್ ಕೀರ್ತಿ ಮತ್ತಷ್ಟು ಹರಡಲಿ ಎಂಬುದು ನಮ್ಮದೊಂದು ವಿಶ್.

Advertisement
Share this on...