ವಿಜಯ್ ಸೇತುಪತಿ ಜಾಗಕ್ಕೆ ಧನಂಜಯ್..?

in ಸಿನಿಮಾ 73 views

ಡಾಲಿ ಖ್ಯಾತಿಯ ಧನಂಜಯ್ ಟಾಲಿವುಡ್ ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಅಂತ ಹೇಳಲಾಗುತ್ತಿದೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಲಿದೆ. ಅಲ್ಲದೆ ಇನ್ನೊಂದು ಅಚ್ಚರಿಯ ಪಾತ್ರ ಅಂದರೆ ತಮಿಳಿನ ವಿಜಯ್ ಸೇತುಪತಿಯವರ ಜಾಗಕ್ಕೆ ಡಾಲಿ ಧನಂಜಯ್ ಆಯ್ಕೆಯಾಗಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ‌.

Advertisement

 

Advertisement

Advertisement

 

Advertisement

ಟಾಲಿವುಡ್ ನ ಬಹುನಿರೀಕ್ಷಿತ ಪುಷ್ಪ ಸಿನಿಮಾದಲ್ಲಿ ವಿಲನ್ ಆಗಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಅಂತ ಹೇಳಲಾಗುತ್ತಿತ್ತು. ಈ ಮೂಲಕ ಅಲ್ಲುಅರ್ಜುನ್ ವಿರುದ್ಧ ತೊಡೆ ತಟ್ಟಲಿದ್ದಾರೆ ಅಂತ ಹೇಳಲಾಗಿತ್ತು. ಆದರೆ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಪುಷ್ಪ ಸಿನಿಮಾದಿಂದ ವಿಜಯ ಸೇತುಪತಿ ಹೊರನಡೆದಿದ್ದಾರಂತೆ. ಇದಕ್ಕೆ ಸೂಕ್ತ ಕಾರಣವನ್ನು ಸೇತುಪತಿ ನೀಡಿದ್ದಾರಂತೆ ಸಿನಿಮಾ ಬಹು ಭಾಷೆಯಲ್ಲಿ ತಯಾರಾಗುತ್ತಿರುವುದೆ ವಿಜಯ್ ಸೇತುಪತಿ ಸಿನಿಮಾದಿಂದ ಹೊರಬರಲು ಕಾರಣ ಅಂತ ಹೇಳಲಾಗುತ್ತಿದೆ.

 

 

ಹೌದು, ಚಿತ್ರ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗಲಿದೆ ಅಂತ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ ವಿಜಯ್ ಒಪ್ಪಿಕೊಂಡ ನಂತರ ಪ್ಯಾನ್ ಇಂಡಿಯಾ ಸಿನಿಮಾಗಾಗಿ ರಿಲೀಸ್ ಆಗ್ತಾ ಇದೆ ಅಂತ ತಿಳಿದಿದೆ. ಹೀಗಾಗಿ ಸಿನಿಮಾದಿಂದ ಹೊರ ನಡೆದಿದ್ದಾರಾಂತೆ. ವಿಜಯ್ ಗೆ ತಮಿಳಿನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲು ಇಷ್ಟವಿಲ್ಲವಂತೆ ಇದರಿಂದಾಗಿ ಅವರ ತಮಿಳು ಅಭಿಮಾನಿಗಳಿಗೆ ಬೇಸರವಾಗುತ್ತಂತೆ. ಹೀಗಾಗಿ ವಿಜಯ್ ಪುಷ್ಪ ಸಿನಿಮಾದಿಂದ ಹೊರಬಂದಿದ್ದಾರೆ ಅಂತ ಹೇಳಲಾಗುತ್ತಿದೆ. ವಿಜಯ್ ಸದ್ಯ ತಮಿಳಿನ ಮಾಸ್ಟರ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

 

 

ಮತ್ತೊಂದೆಡೆ ತಮಿಳು, ತೆಲುಗು ಹಾಗೂ ಹಿಂದಿ ಸೇರಿ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಜಯ್ ಸೇತುಪತಿ ಬಿಜಿ಼ಯಾಗಿದ್ದಾರಂತೆ. ಹೀಗಾಗೀ ಡೇಟ್ ಹೊಂದಾಣಿಕೆಯಾಗುತ್ತಿಲ್ಲ ಅಂತ ಇದರಿಂದ ಪುಷ್ಪ ಸಿನಿಮಾದಿಂದ ಹೊರಬಂದಿದ್ದಾರೆ ಅಂತ ಸಹ ಹೇಳಲಾಗುತ್ತಿದೆ. ಆದರೆ ಈ ಕುರಿತು ಖಚಿತ ಮಾಹಿತಿ ಲಭ್ಯವಿಲ್ಲ.  ವಿಜಯ್ ಸೇತುಪತಿ ಸಿನಿಮಾದಿಂದ ಹೊರ ನಡೆದಿದ್ದರಿಂದ ಅದಕ್ಕೆ ಕನ್ನಡದ ಡಾಲಿ ಧನಂಜಯ್ ಆಯ್ಕೆಯಾಗಿದ್ದಾರೆ ಅಂತ ಹೇಳಲಾಗುತ್ತಿದೆ. ಡಾಲಿಗೆ ಈಗಾಗಲೇ ಚಿತ್ರತಂಡದಿಂದ ಆಫರ್ ಬಂದಿದ್ದು ಲಾಕ್ ಡೌನ್ ಮುಗಿದ ಬಳಿಕ ಸಿನಿಮಾಗೆ ಸಹಿ ಹಾಕಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

 

 

ಆದರೆ ವಿಜಯ್ ಸೇತುಪತಿ ಪಾತ್ರವನ್ನೇ ನಿರ್ವಹಿಸುತ್ತಾರಾ? ಅಥವಾ ಬೇರೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ? ಎಂಬುದು ಖಚಿತವಾಗಿಲ್ಲ. ಡಾಲಿ ಸಹ ಪುಷ್ಪ ತಂಡ ಸೇರಿದರೆ ಕನ್ನಡದ ಮೂವರು ನಟರು ನಟಿಸಿದಂತಾಗುತ್ತೆ. ಈಗಾಗಲೇ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದು ಕರಾವಳಿಯ ಸುನಿಲ್ ಶೆಟ್ಟಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಟ್ಟಿಗೆ ಧನಂಜಯ್ ಸೇರಿದರೆ ಒಟ್ಟು ಮೂವರು ಕನ್ನಡಿಗರು ಚಿತ್ರತಂಡ ಸೇರಿದಂತಾಗುತ್ತದೆ.

– ಸುಷ್ಮಿತಾ

Advertisement
Share this on...