ಧೀರೇಂದ್ರ ಗೋಪಾಲ್ ಅವರ ಜೀವನದ ಕೊನೆಯ ನೋವಿನ ದುರಂತ ಕಥೆ ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ…!

in ಮನರಂಜನೆ 531 views

ತನ್ನ ಕಂಚಿನ ಕಂಠದ ಮೂಲಕವೇ ಕನ್ನಡ ಸಿನಿ ರಸಿಕರ ಮನಗೆದ್ದವರು ಧೀರೇಂದ್ರ ಗೋಪಾಲ್. ಕನ್ನಡದ ಧೀಮಂತ ನಟ. ಇವರು ಹೊಳೆ ನರಸೀಪುರದ ಜೋಡಿಗುಬ್ಬಿ ಎಂಬಲ್ಲಿ ಜನಿಸಿದರು. ಇವರು ಟಿಪ್ಪುಸುಲ್ತಾನ, ಮುದುಕನ ಮದುವೆ ಮುಂತಾದ ನಾಟಕಗಳ ಮುಖಾಂತರ ಜನಪ್ರಿಯರಾದರು. ಅದರಲ್ಲಿಯೂ ಇವರ ಎಚ್ಚಮ್ಮನಾಯಕ ಪಾತ್ರ ಇವರಿಗೆ ಸಿಕ್ಕಾಪಟ್ಟೆ ಹೆಸರು ದೊರಕಿಸಿಕೊಟ್ಟಿತು. ಕನ್ನಡ ಚಿತ್ರರಂಗದಲ್ಲಿ ತಮ್ಮ ಮಾತಿನ ಚಾಟಾಕಿಯಿಂದಲೇ ನಗಿಸುತ್ತಿದ್ದ ಇವರು ತಮ್ಮ ಕೊನೆಯ ದಿನಗಳಲ್ಲಿ ಅನುಭವಿಸಿದ ನೋವು, ಕಷ್ಟ, ಪಾಪ ಯಾರಿಗೂ ಬೇಡ. ಹಾಗಾದರೆ ಅವರ ಜೀವನದ ದುರಂತ ಅಂತ್ಯ ಹೇಗಾಯಿತು ಗೊತ್ತಾ…? 1974ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ರವರ ನಾಗರಹಾವು ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. ಧೀರೇಂದ್ರ ಗೋಪಾಲ್ ರವರು ಮುಂದೆ ಪಡವಾರಳ್ಳಿ ಪಾಂಡವರು ಚಿತ್ರದಲ್ಲಿನ ಖಳನಾಯಕನ ಪಾತ್ರದಿಂದ ಜನಪ್ರಿಯರಾದರು. ನಂತರ ಸುಮಾರು 180 ಚಿತ್ರಗಳಲ್ಲಿ ನಟಿಸಿದ ಇವರು ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ನಿಂದ ಪ್ರಸಿದ್ಧಿ ಪಡೆದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇವರು ಸುಮಾರು ಮುನ್ನೂರು ರಾಜಕೀಯ ವ್ಯಂಗ್ಯಭರಿತ ಧ್ವನಿ ಸುರಳಿಗಳನ್ನು ರೆಕಾರ್ಡ್ ಮಾಡಿ ಬಿಡುಗಡೆಗೊಳಿಸಿದ್ದಾರೆ.

Advertisement

 

Advertisement


ಕಷ್ಟ ಎಂದವರಿಗೆ ಸಹಾಯ ಮಾಡುತ್ತಿದ್ದ ಧೀರೇಂದ್ರ ಗೋಪಾಲ್ ರವರು ತಮಗಾಗಿ ಏನನ್ನೂ ಕೂಡಿಡಲಿಲ್ಲ. ಕೊನೆಯ ದಿನಗಳಲ್ಲಿ ಧೀರೇಂದ್ರ ಗೋಪಾಲ್ ರವರಿಗೆ ಕಾಡಿದ್ದು ಸಾಲದ ಶೂಲಗಳು. ಬಂದಿದ್ದನ್ನೆಲ್ಲಾ ದಾನ ಮಾಡುತ್ತಿದ್ದ ಧೀರೇಂದ್ರ ಗೋಪಾಲ್ ರವರಿಗೆ ನಂತರದ ದಿನಗಳಲ್ಲಿ ಯಾರು ಕೂಡ ಸೂಕ್ತವಾಗಿ ಸಹಾಯ ಮಾಡಲಿಲ್ಲ. ಧೀರೇಂದ್ರ ಗೋಪಾಲ್ ರವರ ಬದುಕಿನ ಕೊನೆಯ ದಿನಗಳು ನರಕದ ಶಿಕ್ಷೆಯಂತೆ ಕಂಡಿದ್ದು ಮಾತ್ರ ಸುಳ್ಳಲ್ಲ. ಬದುಕಿನ ನೋವುಗಳನ್ನು ಮರೆಯುವ ಸಲುವಾಗಿ ಧೀರೇಂದ್ರ ಗೋಪಾಲ್ ರವರು ಕುಡಿತದ ಮೊರೆ ಹೋದರು. ಸದಾ ಕಾಲ ಎಲ್ಲರನ್ನೂ ನಗಿಸುತ್ತಿದ್ದ ಹಾಸ್ಯ ಸಾರ್ವಭೌಮ ಕೊನೆಯ ದಿನಗಳಲ್ಲಿ ಬದುಕಿನ ನೋವುಗಳನ್ನು ತಾಳಲಾರದೆ ಕಣ್ಣೀರು ಹಾಕಿ ಬಿಟ್ಟರು.

Advertisement

Advertisement

ಜೀವನದಲ್ಲಿ ಸಾಲದ ಸುಳಿಯಲ್ಲಿ ನೊಂದು-ಬೆಂದಿದ್ದ ಧೀರೇಂದ್ರ ಗೋಪಾಲ್ ರವರು ಡಿಸೆಂಬರ್ 25, 2000 ಇಸವಿಯಲ್ಲಿ ಜಾಂಡಿಸ್ ಗೆ ತುತ್ತಾದ ಇವರು ನಂತರ ಹರಿಹರದ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಅವರು ಇಂದು ಇಲ್ಲವಾದರೂ ಅವರ ಶಿವನೇ ಶಂಭು ಲಿಂಗ ಡೈಲಾಗ್ ಇಂದಿಗೂ ತುಂಬಾ ಫೇಮಸ್ ಆಗಿದೆ. ಇಂತಹ ಅದ್ಭುತ ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಯಿತು.

– ಸುಷ್ಮಿತಾ

Advertisement
Share this on...