ನಾರ್ಮಲ್‌ ಜ್ವರಕ್ಕೂ ಹಾಗೂ ಕೊರೊನಾ ವೈರಸ್‌ ಜ್ವರಕ್ಕೂ ವ್ಯತ್ಯಾಸವೇನು ಗೊತ್ತೇ?

in ಕನ್ನಡ ಆರೋಗ್ಯ 158 views

ದೇಶವನ್ನೇ ಬೆಚ್ಚಿಬೀಳಿಸಿದ ಕೊರೊನಾ ವೈರಸ್ ಮೊದಲು ಪತ್ತೆಯಾಗಿದ್ದು ಚೀನಾದ ವುಹಾನ್‌ ನಲ್ಲಿ. ಅದೇ ಖಾಯಿಲೆ ಇಂದು ವಿಶ್ವವ್ಯಾಪಿಯಾಗಿದೆ‌. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಇದುವರೆಗೆ ಕೊರೊನಾವೈರಸ್‌ ಭಾಧಿತರ‌ ಸಂಖ್ಯೆ‌ ಐದು ಸಾವಿರ‌ ದಾಟಿದೆ. ಕೊರೊನಾ ವೈರಸ್ ಪತ್ತೆಹಚ್ಚುವ ವಿಧಾನವನ್ನು ಸರ್ಕಾರ ತಿಳಿಸುತ್ತಿದೆ‌. ಶೀತ ನೆಗಡಿಯ ಲಕ್ಷಣಗಳೇ ಈ ರೋಗದಲ್ಲಿ ಕಂಡು ಬರುವುದರಿಂದ ಸಾಮಾನ್ಯ ಜ್ವರ ಬಂದರೂ ಇದೀಗ ಜನರು ಭಯಗೊಳ್ಳುತ್ತಿದ್ದಾರೆ.

Advertisement

 

Advertisement

Advertisement

 

Advertisement

ಸಾಮಾನ್ಯವಾಗಿ ಈ ಕೊರೊನಾವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಂಡು ಬರುವ ವೈರಸ್ ಆಗಿದ್ದು ಇದರಲ್ಲಿ 6 ಬಗೆಗಳಿವೆ. ಆದರೆ ಎಲ್ಲವೂ ಅಪಾಯಕಾರಿಯಲ್ಲ. ಆದರೆ ಇದೀಗ ಬಂದಿರುವುದು ಈ ಅಪಾಯಕಾರಿ ಜಾತಿಗೆ ಸೇರಿದ ವೈರಸ್., ಇದನ್ನು ಕೋವಿಡ್ 19 ಎಂದು ಗುರುತಿಸಲಾಗಿದೆ. ಕೊರೊನಾವೈರಸ್ ಸೋಂಕಿದಾಗ ದೇಹದಲ್ಲಿ ಕಂಡು ಬರುವ ಲಕ್ಷಣಗಳು ಜ್ವರ, ಕೆಮ್ಮು, ತಲೆಸುತ್ತು, ಹೊಟ್ಟೆ ತೊಳೆಸಿದ ಹಾಗಾಗುವುದು, ಮೂಗು ಕಟ್ಟುವುದು, ತಲೆನೋವು, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ಸೋಂಕು ತಗುಲಿದ ಅಂದಾಜು ಎರಡರಿಂದ ಹದಿನಾಲ್ಕು ದಿನಗಳ ಒಳಗೆ ದೇಹದಲ್ಲಿ ಈ ಲಕ್ಷಣಗಳು ಕಂಡು ಬರುತ್ತವೆ. ಕೊರೊನಾ ವೈರಸ್‌ನಿಂದ ಉಂಟಾಗುವ ಸಾವಿನ ಪ್ರಮಾಣ ಸಾವಿನ ಪ್ರಮಾಣ ಶೇ.3ರಿಂದ 4ರಷ್ಟಿದೆ. ಕೊರೊನಾವೈರಸ್ ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅವರ ಬಾಯಿಯಿಂದ ಹಾರುವ ದ್ರವ ಅಥವಾ ಎಂಜಲು ಮುಖಾಂತರ ಬೇರೆಯವರಿಗೆ ಹರಡಬಹುದು.

 

 

ಕೊರೊನಾ ವೈರಸ್‌ಗೆ ಚಿಕಿತ್ಸೆ ಬಗ್ಗೆ ಅನೇಕ ಪರೀಕ್ಷೆಗಳು ನಡೆಯುತ್ತಿವೆ. ಈಗಾಗಲೇ ಕೊರೊನಾ ವೈರಸ್‌ಗೆ 20ಕ್ಕೂ ಅಧಿಕ ಮದ್ದುಗ ಕಂಡು ಹಿಡಿಯಲಾಗಿದ್ದರೂ ಯಾವುದೇ ಔಷಧಿಗೂ ವಿಶ್ವಸಂಸ್ಥೆಯಿಂದ ಮಾನ್ಯತೆ ಸಿಕ್ಕಿಲ್ಲ. ಹಾಗಾಗಿ ವೈರಸ್ ಹರಡದಂತೆ ಹ್ಯಾಂಡ್‌ ಸ್ಯಾನಿಟೈಸರ್ ಬಳಸಿ. ಮನೆಯಲ್ಲಿಯೇ ಇರಿ.

 

 

ಇನ್ನು ಸಾಮಾನ್ಯ ಜ್ವರ ಅಥವಾ ಫ್ಲೂವು ಮತ್ತು ಬಿ ವೈರಸ್‌ನಿಂದಾಗಿ ಉಸಿರಾಟದ ತೊಂದರೆ ಬರುತ್ತದೆ. ಸಾಮಾನ್ಯವಾಗಿ ನಮಗೆ ಜ್ವರ ಬಂದಾಗ ಮೈಕೈ ನೋವು, ತಲೆ ನೋವು, ಮೈ ಉಷ್ಣತೆ ಹೆಚ್ಚಾಗುವುದು. ಜ್ವರದ ಲಕ್ಷಣಗಳು ಜ್ವರ ಬಂದಾಗ ಗಂಟಲು ಕೆರೆತ, ಕೆಮ್ಮು, ತಲೆನೋವು, ಶೀತ, ತಲೆಸುತ್ತು, ಮೈಕೈ ನೋವು ಉಂಟಾಗುತ್ತದೆ.ಇದೇ ಕೊರೊನಾ ವೈರಸ್ ಜ್ವರಕ್ಕೂ , ಫ್ಲೂ ಗೂ ಇರುವ ವ್ಯತ್ಯಾಸ ಎನ್ನಬಹುದು

Advertisement
Share this on...