ಈ ನಟನ ಬಣ್ಣದ ಬದುಕಿಗೆ ಮುನ್ನುಡಿ ಬರೆದುದು ಯಾವ ಧಾರಾವಾಹಿ ಗೊತ್ತಾ?

in ಮನರಂಜನೆ/ಸಿನಿಮಾ 263 views

ಕನ್ನಡ ಸಿನಿರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿರುವ ದಿಯಾ ಸಿನಿಮಾವನ್ನು ಮೆಚ್ಚದವರಿಲ್ಲ. ವಿಭಿನ್ನ ರೀತಿಯ ಕಥಾ ಹಂದರದ ಮೂಲಕ ಸಿನಿ ಪ್ರಿಯರ ಮನ ಸೆಳೆದಿರುವ ದಿಯಾ ಸಿನಿಮಾದ ಒಂದೊಂದು ಪಾತ್ರಗಳು ಕೂಡಾ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿ ಬಿಟ್ಟಿದೆ. ದಿಯಾ ಸಿನಿಮಾದಲ್ಲಿ ನಾಯಕ ರೋಹಿತ್ ಆಗಿ ನಟಿಸುವ ಮೂಲಕ ಬೆಳ್ಳಿತೆರೆಯ ಮೇಲೆ ಮಿಂಚಿದ ಕುಂದಾಪುರದ ಕುವರನ ಹೆಸರು ದೀಕ್ಷಿತ್ ಶೆಟ್ಟಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಯವದನ ನಿರ್ದೇಶನದ ನಾಗಿಣಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ದೀಕ್ಷಿತ್ ದಿಯಾ ಸಿನಿಮಾದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟೂ ಅಲ್ಲೂ ಸೈ ಎನಿಸಿಕೊಂಡ ಪ್ರತಿಭೆ. ಸ್ಟಾರ್ ಸುವರ್ಣ ವಾಹಿನಿಯ ಪ್ರೀತಿ ಎಂದರೇನು ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ದೀಕ್ಷಿತ್ ಮೊದಲ ಬಾರಿ ಕಾಣಿಸಿಕೊಂಡಿದ್ದರು. ಮುಂದೆ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯ ಅರ್ಜುನ್ ಆಗಿ ಬದಲಾದ ದೀಕ್ಷಿತ್ ಶೆಟ್ಟಿ ಇಂದಿಗೂ ಅರ್ಜುನ್ ಎಂದೇ ಚಿರಪರಿಚಿತ. ದೀಕ್ಷಿತ್ ಇಂದು ಎತ್ತ ಹೋದರೂ ಜನ ಅವರನ್ನು ಗುರುತಿಸುವುದು ನಾಗಿಣಿಯ ಅರ್ಜುನ್ ಪಾತ್ರದಿಂದಲೇ! ಕಿರುತೆರೆಯ ನಂತರ ಬೆಳ್ಳಿತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ನಿರ್ಧರಿಸಿದ ದೀಕ್ಷಿತ್ ದಿಯಾ ಸಿನಿಮಾದಲ್ಲಿ ಅಭಿನಯಿಸಿದ್ದರು. ಅದೃಷ್ಟ ದೇವರೆ ಅವರ ಪರವೇ ಇದ್ದರೂ ಅನ್ನಿ! ದಿಯಾ ಸಿನಿಮಾ ಜನಪ್ರಿಯವಾಯಿತು. ರೋಹಿತ್ ಪಾತ್ರವನ್ನು ಜನ ಮೆಚ್ಚಿದರು.

Advertisement

Advertisement

ದಿಯಾ ಸಿನಿಮಾದ ನಂತರ ಬೆಳ್ಳಿತೆರೆಯಲ್ಲಿ ಸಾಲು ಸಾಲು ಅವಕಾಶಗಳನ್ನು ಪಡೆದಿರುವ ದೀಕ್ಷಿತ್ ಶೆಟ್ಟಿ ಕೆಟಿಎಂ ಹಾಗೂ ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ. ಬೆಳ್ಳಿತೆರೆಯಲ್ಲಿ ಕೊಂಚ ಬ್ಯುಸಿಯಾಗಿರುವ ದೀಕ್ಷಿತ್ ಗೆ ಈಗಲೂ ಕಿರುತೆರೆಯ ಮೇಲೆ ವಿಶೇಷ ಒಲವು ಇದೆ. ಯಾಕೆಂದರೆ ಇಂದು ದೀಕ್ಷಿತ್ ನಟನಾ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣವೇ ಕಿರುತೆರೆ.

Advertisement

“ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯಲ್ಲಿ ನಾನು ಅರ್ಜುನ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದೆ. ಯಶಸ್ವಿ 1000 ಸಂಚಿಕೆ ಪೂರೈಸಿದ್ದ ನಾಗಿಣಿಯಲ್ಲಿ ನಾನು ನಾಲ್ಕು ವರ್ಷಗಳ ಕಾಲ ನಟಿಸಿದ್ದೆ. ನಾಗಿಣಿ ಧಾರಾವಾಹಿಯ ಪಯಣ ನಿಜವಾಗಿಯೂ ಸುಂದರವಾಗಿತ್ತು. ಮತ್ತು ತುಂಬಾ ಸವಾಲುಗಳು ಎದುರಾಗಿದ್ದವು. ಎಲ್ಲದಕ್ಕಿಂತಲೂ ಮುಖ್ಯವಾಗಿ ನಾನು ಇಂದು ಎಲ್ಲಿಯೇ ಹೋದರೂ ಜನ ಅರ್ಜುನ್ ಎಂದೇ ಮನೆ ಮಾತಾಗಿದ್ದೇನೆ. ನಾನು ಇಂದು ನಟನೆಯ ರೀತಿ ನೀತಿಗಳನ್ನು ಕೂಡಾ ಕಲಿತಿದ್ದೇನೆ ಎಂದರೆ ಅದಕ್ಕೆ ನಾಗಿಣಿ ಧಾರಾವಾಹಿಯೇ ಕಾರಣ. ಇದು ನನ್ನ ಬಣ್ಣದ ಬದುಕಿಗೆ ಒಂದು ಒಳ್ಳೆಯ ಬ್ರೇಕ್ ನೀಡಿತು” ಎಂದು ಹೇಳುತ್ತಾರೆ ದೀಕ್ಷಿತ್ ಶೆಟ್ಟಿ.

Advertisement

ಲಾಕ್ ಡೌನ್ ಸಮಯದಲ್ಲಿ ವಿದ್ಯಾ ಬಿ ರೆಡ್ಡಿ ನಿರ್ದೇಶನದ ಓ ಫಿಶ್ ಎನ್ನುವ ಕಿರುಚಿತ್ರದಲ್ಲಿಯೂ ದೀಕ್ಷಿತ್ ಶೆಟ್ಟಿ ಅಭಿನಯಿಸಿದ್ದು ವೈನಿಧಿ ಜಗದೀಶ್ ಅವರೊಂದಿಗೆ ತೆರೆ ಹಂಚಿದ್ದಾರೆ. ವಿಭಿನ್ನ ಕಥಾ ಹಂದರದ ಈ ಕಿರುಚಿತ್ರವನ್ನು ನೋಡಿ ಜನ ಫಿದಾ ಆಗಿದ್ದಾರೆ.
– ಅಹಲ್ಯಾ

Advertisement
Share this on...